ಕೊರೋನಾ ವೈರಸ್ ಹಾಗೂ ಲಾಕ್‌ಡೌನ್ ಕಾರಣ ಶ್ರೀಲಂಕಾದ ಮಾಜಿ ಕ್ರಿಕೆಟಿಗರು, ಮಾಜಿ ಕ್ರೀಡಾ ಸಚಿವರು ಸೇರಿದಂತೆ ಹಲವು ಮಾಜಿಗಳು ಕೆಲಸವಿಲ್ಲದೆ ಮನೆಯಲ್ಲಿದ್ದಾರೆ. ಈ ವೇಳೆ ತಾವು ಸುದ್ದಿಯಲ್ಲಿರುವ ಸ್ಫೋಟಕ ಹೇಳಿಕೆ ನೀಡಿ ಮಾಧ್ಯಮದಲ್ಲಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಲಂಕಾ ಮಾಜಿ ಕ್ರೀಡಾ ಮಂತ್ರಿ ಬೆನ್ನಲ್ಲೇ ಇದೀಗ ಮಾಜಿ ನಾಯಕ ಅರವಿಂದ್ ಡಿಸಿಲ್ವಾ ಮತ್ತೆ 2011ರ ವಿಶ್ವಕಪ್ ಫೈನಲ್ ಪಂದ್ಯ ಫಿಕ್ಸ್ ಎಂದಿದ್ದಾರೆ.
ಕೊಲೊಂಬೊ(ಜೂ.22): ಭಾರತ ಹಾಗೂ ಶ್ರೀಲಂಕಾ ನಡುವಿನ 2011ರ ವಿಶ್ವಕಪ್ ಪಂದ್ಯದಲ್ಲಿ ಟೀಂ ಇಂಡಿಯಾ ಕೆಚ್ಚೆದೆಯ ಹೋರಾಟ ನೀಡಿ ಗೆಲುವು ಸಾಧಿಸಿತ್ತು. ಈ ಮೂಲಕ 28 ವರ್ಷಗಳ ಬಳಿಕ ಟೀಂ ಇಂಡಿಯಾ ಏಕದಿನ ವಿಶ್ವಕಪ್ ಟ್ರೋಫಿ ಗೆದ್ದುಕೊಂಡಿತು. ಈ ಬಳಿಕ ಹಲವು ಬಾರಿ ಲಂಕಾ ಮಾಜಿ ಕ್ರಿಕೆಟಿಗರು ಫೈನಲ್ ಪಂದ್ಯ ಫಿಕ್ಸ್ ಅನ್ನೋ ಹೇಳಿಕೆ ನೀಡಿದ್ದಾರೆ. ಇದೀಗ ಶ್ರೀಲಂಕಾ ಮಾಜಿ ನಾಯಕ, ಮಾಜಿ ಆಯ್ಕೆ ಸಮಿತಿ ಮುಖ್ಯಸ್ಥ ಅರವಿಂದ್ ಡಿಸಿಲ್ವ 2ನೇ ಬಾರಿಗೆ 2011ರ ಫೈನಲ್ ಪಂದ್ಯದ ಫಿಕ್ಸಿಂಗ್ ಎಂದಿದ್ದಾರೆ.
2011ರ ವಿಶ್ವಕಪ್ ಫೈನಲ್ ಫಿಕ್ಸ್, ಇದು ಉನ್ನತ ಮಟ್ಟದಲ್ಲಿ ನಡೆದ ಕಳ್ಳಾಟ ಎಂದ ಲಂಕಾ ಮಾಜಿ ಮಂತ್ರಿ!
undefined
ಕ್ರಿಕೆಟ್ ಆಳಿದ ಸಚಿನ್ ತೆಂಡುಲ್ಕರ್ ತಮ್ಮ ಕರಿಯರ್‌ನಲ್ಲಿ ಇದ್ದ ವಿಶ್ವಕಪ್ ಕೊರಗನ್ನು 2011ರಲ್ಲಿ ನೀಗಿಸಿಕೊಂಡರು. ಈ ಪಂದ್ಯ ಫಿಕ್ಸ್ ಆಗಿದೆ. ಹೀಗಾಗಿ ಸಚಿನ್ ತೆಂಡುಲ್ಕರ್ ಅವರ ಐತಿಹಾಸಿಕ ವಿಶ್ವಕಪ್ ಟ್ರೋಫಿ ಕಿರೀಟಕ್ಕೆ ಕಳಂಕ ಎದುರಾಗಿದೆ. ಇದೀಗ ಸಚಿನ್ ತೆಂಡುಲ್ಕರ್‌ಗಾಗಿ ಬಿಸಿಸಿಐ, ಐಸಿಸಿ ಹಾಗೂ ಶ್ರೀಲಂಕಾ ಕ್ರಿಕೆಟ್ ಮಂಡಳಿ 2011ರ ವಿಶ್ವಕಪ್ ಫೈನಲ್ ಪಂದ್ಯ ತನಿಖೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಶ್ರೀಲಂಕಾ ಮಾಜಿ ಕ್ರೀಡಾ ಮಂತ್ರಿ ಮಹೀಂದನಾಂದ ಅಲ್ತುಗಮೆಗೆ ಇತ್ತೀಚೆಗೆ 2011ರ ವಿಶ್ವಕಪ್ ಫೈನಲ್ ಪಂದ್ಯವನ್ನು ಭಾರತಕ್ಕೆ ಮಾರಾಟ ಮಾಡಲಾಗಿತ್ತು ಎಂದು ಗಂಭೀರ ಆರೋಪ ಮಾಡಿದ್ದರು.
ಕೊರೋನಾ ಮುಕ್ತ ನ್ಯೂಜಿಲೆಂಡ್‌ನಲ್ಲಿ ಟಿ20 ವಿಶ್ವಕಪ್ ಟೂರ್ನಿ?.
ಈ ಕಳ್ಳಾಟದಲ್ಲಿ ಆಟಗಾರರು ಭಾಗಿಯಾಗಿಲ್ಲ, ಉನ್ನತ ಮಟ್ಟದಲ್ಲಿ ಫಿಕ್ಸಿಂಗ್ ನಡೆದಿದೆ. ಹೀಗಾಗಿ ಶ್ರೀಲಂಕಾ ಸೋಲೊಪ್ಪಿಕೊಂಡಿದೆ. ಫಿಕ್ಸಿಂಗ್ ಇಲ್ಲದಿದ್ದರೆ 2011ರಲ್ಲಿ ಶ್ರೀಲಂಕಾ ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡವಾಗಿತ್ತು ಎಂದು ಮಹಿಂದನಾಂದ ಅಲ್ತುಗಮೆಗೆ ಆರೋಪಿಸಿದ್ದರು. ಈ ಹೇಳಿಕೆ ಬಳಿಕ ಅರವಿಂದ್ ಡಿಸಿಲ್ವ ಕೂಡ ಇದೀಗ ಪಂದ್ಯ ಫಿಕ್ಸ್ ಆಗಿತ್ತು ಎಂದಿದ್ದಾರೆ. ಈ ಕುರಿತು ತನಿಖೆಯ ಅವಶ್ಯಕತೆ ಇದೆ ಎಂದಿದ್ದಾರೆ.