ಕೊರೋನಾ ವಿರುದ್ಧ ಹೋರಾಡಲು ಪ್ರಧಾನಿ ಮೋದಿ ಹಾಗೂ ರಷ್ಯಾ ಅಧ್ಯಕ್ಷ ಮಾತುಕತೆ ನಡೆಸಿದ್ದಾರೆ. ಈ ಇಬ್ಬರು ನಾಯಕರ ಮಾತುಕತೆ ಕೊರೋನಾ ವೈರಸ್ ಪೀಡಿತರ ಪಾಲಿಗೆ ಹೊಸ ಆಶಾಕಿರಣ ಹುಟ್ಟುಹಾಕಿದೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ.
ನವದೆಹಲಿ(ಮಾ.26): ಜಾಗತಿಕ ಪಿಡುಗಾಗಿ ಪರಿಣಮಿಸಿರುವ ಕೊರೋನಾ ವೈರಸ್ ವಿರುದ್ಧ ಹೋರಾಡಲು ವಿಶ್ವದ ದಿಗ್ಗಜ ನಾಯಕರು ಜತೆಯಾಗಿದ್ದಾರೆ. ಕೋವಿಡ್ 19 ವಿರುದ್ಧ ಭಾಗವಾಗಿ ಭಾರತದ ಪ್ರಧಾನಿ ನರೇಂದ್ರ ಮೋದಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಜತೆ ಟೆಲಿಪೋನ್ ಮಾತುಕತೆ ನಡೆಸಿದ್ದಾರೆ.
ಕೊರೋನಾ ವೈರಸ್‌ನಿಂದ ಚೇತರಿಸಿಕೊಂಡ ರಷ್ಯಾದ ಜನರಿಗೆ ಮೋದಿ ಶುಭ ಹಾರೈಸಿದ್ದಾರೆ. ಇದರ ಜತೆಗೆ ಕೊರೋನಾ ವೈರಸ್ ವಿರುದ್ಧ ಹೋರಾಡಲು ದಿಟ್ಟ ಕ್ರಮ ಕೈಗೊಂಡ ಅಧ್ಯಕ್ಷ ಪುಟಿನ್ ನಡೆಯನ್ನು ಮೋದಿ ಶ್ಲಾಘಿಸಿದ್ದಾರೆ. ಇನ್ನು ಕೋವಿಡ್ 19 ವಿರುದ್ಧ ಭಾರತ ಸರ್ಕಾರ ಕೈಗೊಂಡ ಮುನ್ನೆಚ್ಚರಿಕೆಯ ಕ್ರಮಗಳನ್ನು ತಿಳಿದು ಪುಟಿನ್ ಸಂತಸ ವ್ಯಕ್ತಪಡಿಸಿದ್ದಾರೆ.
undefined
ಕೊರೋನಾ ಸಮರಕ್ಕೆ 'ಪಾರ್ಲೆ-ಜಿ' ಸಾಥ್: ಬಡವರಿಗೆ ಫ್ರೀ ಬಿಸ್ಕೆಟ್!
ಜಾಗತಿಕ ಮಟ್ಟದಲ್ಲಿ ಮುಂದೆ ಎದುರಾಗಬಹುದಾದ ಸವಾಲುಗಳ ಬಗ್ಗೆ ವಿಶ್ವದ ಇಬ್ಬರು ದಿಗ್ಗಜ ನಾಯಕರು ಚರ್ಚಿಸಿದರು. ಈ ವೇಳೆ ಪರಸ್ಪರ ಸಹಕಾರದ ಬಗ್ಗೆಯೂ ಮಾತುಕತೆ ನಡೆಸಿದರು. ಇದರ ಜತೆಗೆ ಆರೋಗ್ಯ, ಮೆಡಿಸಿನ್, ವೈದ್ಯಕೀಯ ಸಂಶೋಧನೆಯಲ್ಲಿ ಪರಸ್ಪರ ಕೈಜೋಡಿಸಬೇಕೆಂದು ಉಭಯ ನಾಯಕರು ಮಾತುಕತೆ ನಡೆಸಿದ್ದಾರೆ.
ರಷ್ಯಾದಲ್ಲಿರುವ ಭಾರತೀಯ ವಿದ್ಯಾರ್ಥಿಗಳಿಗೆ ಉತ್ತಮ ಸಹಕಾರ ನೀಡುತ್ತಿರುವ ರಷ್ಯಾದ ಅಧಿಕಾರಿಗಳಿಗೂ ಮೋಧಿ ಧನ್ಯವಾದ ಅರ್ಪಿಸಿದ್ದಾರೆ. ಜಗತ್ತಿನ ಎರಡು ಬಲಿಷ್ಠ ನಾಯಕರು ಒಂದಾಗಿ ಮಾತುಕತೆ ನಡೆಸಿರುವುದು ಕೊರೋನಾ ಸಂತ್ರಸ್ಥರ ಪಾಲಿಗೆ ಹೊಸ ಆಶಾಕಿರಣ ಎನಿಸಿದೆ.
ಜಗತ್ತಿನಾದ್ಯಂತ ಇದುವರೆಗೂ ಸುಮಾರು 4,71 ಸಾವಿರಕ್ಕೂ ಅಧಿಕ ಮಂದಿ ಕೋವಿಡ್ 19 ಸೋಂಕು ತಗುಲಿದ್ದು 21 ಸಾವಿರಕ್ಕೂ ಹೆಚ್ಚು ಮಂದಿ ಕೊನೆಯುಸಿರೆಳೆದಿದ್ದಾರೆ.