ಕೋವ್ಯಾಕ್ಸಿನ್‌ಗಿಂತ ಕೋವಿಶೀಲ್ಡ್‌ ಪಡೆದವರಿಗೆ ಹೆಚ್ಚು ಪ್ರತಿಕಾಯ: ಅಧ್ಯಯನ

By Kannadaprabha News  |  First Published Jan 8, 2023, 12:00 AM IST

ಬೆಂಗಳೂರು ನಗರ ಹಾಗೂ ಗ್ರಾಮೀಣ ಮತ್ತು ಪುಣೆ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಲಸಿಕೆ ಪಡೆದ 18-45ರ ವಯೋಮಾನದ 691 ಜನರ ಮೇಲೆ 2021ರ ಜೂನ್‌ 2022ರ ಜನವರಿ ಅವಧಿಯಲ್ಲಿ ನಡೆಸಿದ ಪರೀಕ್ಷೆ ವೇಳೆ ಈ ಅಂಶ ಕಂಡುಬಂದಿದೆ ಎಂದು ವರದಿ. 


ನವದೆಹಲಿ(ಜ.08): ಕೋವಿಡ್‌ ಸೋಂಕು ತಡೆಗಾಗಿ ನೀಡಲಾಗುವ ಲಸಿಕೆಗಳ ಪೈಕಿ ಕೋವ್ಯಾಕ್ಸಿನ್‌ ಪಡೆದವರಿಗಿಂತ ಕೋವಿಶೀಲ್ಡ್‌ ಪಡೆದವರ ದೇಹದಲ್ಲೇ ಹೆಚ್ಚು ಪ್ರತಿಕಾಯ ಶಕ್ತಿ ಉತ್ಪತ್ತಿಯಾಗಿರುವುದು ಕಂಡುಬಂದಿದೆ ಎಂದು ಅಧ್ಯಯನ ವರದಿಯೊಂದು ತಿಳಿಸಿದೆ. ಮೂಲ ಕೋವಿಡ್‌ ವೈರಸ್‌ ಮತ್ತು ಅದರ ಹಲವು ಉಪತಳಿಗಳ ವಿಷಯದಲ್ಲೂ ಇದು ಸಾಬೀತಾಗಿದೆ ಎಂದು ವರದಿ ಹೇಳಿದೆ.

ಬೆಂಗಳೂರು ನಗರ ಹಾಗೂ ಗ್ರಾಮೀಣ ಮತ್ತು ಪುಣೆ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಲಸಿಕೆ ಪಡೆದ 18-45ರ ವಯೋಮಾನದ 691 ಜನರ ಮೇಲೆ 2021ರ ಜೂನ್‌ 2022ರ ಜನವರಿ ಅವಧಿಯಲ್ಲಿ ನಡೆಸಿದ ಪರೀಕ್ಷೆ ವೇಳೆ ಈ ಅಂಶ ಕಂಡುಬಂದಿದೆ ಎಂದು ವರದಿ ಹೇಳಿದೆ. ಇನ್ನೂ ತಜ್ಞರ ವಿಶ್ಲೇಷಣೆಗೆ ಒಳಪಡದ ಈ ಅಧ್ಯಯನ ವರದಿಯನ್ನು ‘ಮೆಡ್‌ಆರ್‌ಎಕ್ಸ್‌ಐವಿ’ ಮ್ಯಾಗಜಿನ್‌ನಲ್ಲಿ ಪ್ರಕಟಿಸಲಾಗಿದೆ.

Tap to resize

Latest Videos

undefined

CORONA CRISIS: ಅಮೆರಿಕದಲ್ಲಿ ಆರ್ಭಟಿಸಿದ ವೈರಸ್‌ ಕರ್ನಾಟಕದಲ್ಲೂ ಪತ್ತೆ

ಲಸಿಕೆ ಪೂರ್ವ ಸಮಯದಲ್ಲಿ ವ್ಯಕ್ತಿಗಳ ದೇಹದಲ್ಲಿ ಇದ್ದ ರೋಗ ನಿರೋಧಕ ಮಟ್ಟಕ್ಕಿಂತ, ಲಸಿಕೆ ಪಡೆದ ಬಳಿಕ ವ್ಯಕ್ತಿಗಳ ದೇಹದಲ್ಲಿ ಕೋವಿಡ್‌ ವೈರಸ್‌ ವಿರುದ್ಧ ಹೆಚ್ಚಿನ ರೋಗ ನಿರೋಧಕ ಶಕ್ತಿ ಉತ್ಪತ್ತಿಯಾಗಿದೆ. ಆದರೆ ಈ ಪೈಕಿ ಹೈದರಾಬಾದ್‌ ಮೂಲದ ಭಾರತ್‌ ಬಯೋಟೆಕ್‌ ಅಭಿವೃದ್ಧಿಪಡಿಸಿದ ಕೋವ್ಯಾಕ್ಸಿನ್‌ ಲಸಿಕೆ ಪಡೆದವರಿಗಿಂತ, ಕೋವಿಶೀಲ್ಡ್‌ ಲಸಿಕೆ ಪಡೆದವರ ದೇಹದಲ್ಲಿ ಹೆಚ್ಚಿನ ರೋಗ ನಿರೋಧಕ ಶಕ್ತಿ ಉತ್ಪತ್ತಿಯಾಗಿರುವುದು ಪ್ರತಿಕಾಯ ಪರೀಕ್ಷೆಯಲ್ಲಿ ಕಂಡುಬಂದಿದೆ ಎಂದು ಅದು ಹೇಳಿದೆ.

click me!