ಕೊರೋನಾತಂಕ: ಚೀನಾ ಸೇರಿ 6 ದೇಶದಿಂದ ಬಂದವರಿಗೆ ಕ್ವಾರಂಟೈನ್‌

By Kannadaprabha News  |  First Published Jan 1, 2023, 1:41 PM IST

ಚೀನಾ, ಹಾಂಕಾಂಗ್‌, ಜಪಾನ್‌, ದಕ್ಷಿಣ ಕೊರಿಯಾ, ಸಿಂಗಾಪುರ, ಥಾಯ್ಲೆಂಡ್‌ನಿಂದ ಬರುವವರಿಗಾಗಿ ಶನಿವಾರ ಪರಿಷ್ಕೃತ ಮಾರ್ಗಸೂಚಿ ಪ್ರಕಟಿಸಿದೆ. ಈ ದೇಶಗಳಿಂದ ಬರುವವರು 72 ಗಂಟೆಗಳಿಗಿಂತ ಹಳೆಯದಲ್ಲದ ಆರ್‌ಟಿ-ಪಿಸಿಆರ್‌ ನೆಗೆಟಿವ್‌ ಪ್ರಮಾಣಪತ್ರ  ನೀಡಿದರೆ ಅವರಿಗೆ ವಿಮಾನ ನಿಲ್ದಾಣದಿಂದ ಹೊರ ಹೋಗಲು ಅವಕಾಶ ನೀಡಬಹುದು: ಆರೋಗ್ಯ ಇಲಾಖೆ 


ಬೆಂಗಳೂರು(ಜ.01):  ವಿದೇಶಗಳಲ್ಲಿ ಕೊರೋನಾ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ವಿದೇಶಗಳಿಂದ ರಾಜ್ಯಕ್ಕೆ ಬರುವವರ ಮೇಲೆ ಸರ್ಕಾರ ನಿಗಾ ಮುಂದುವರೆಸಿದ್ದು, 6 ಹೈರಿಸ್ಕ್‌ ದೇಶಗಳಿಂದ ಬರುವ ‘ರೋಗ ಲಕ್ಷಣಗಳು ಇಲ್ಲದವರಿಗೂ’ 7 ದಿನಗಳ ಕಾಲ ಹೋಂ ಕ್ವಾರಂಟೈನ್‌ ಕಡ್ಡಾಯ ಮಾಡಿದೆ. ಅಲ್ಲದೆ, ಈ ದೇಶಗಳಿಂದ ಬರುವವರು ಆರ್‌ಟಿ-ಪಿಸಿಆರ್‌ ನೆಗೆಟಿವ್‌ ಪ್ರಮಾಣಪತ್ರ ನೀಡಿದರೆ ವಿಮಾನ ನಿಲ್ದಾಣದಿಂದ ಹೊರ ಹೋಗಲು ಅವಕಾಶ ನೀಡಬಹುದು ಎಂದು ಮಾರ್ಗ ಸೂಚಿ ಹೊರಡಿಸಿದೆ.

ಆರೋಗ್ಯ ಇಲಾಖೆಯು ಶನಿವಾರ ಚೀನಾ, ಹಾಂಕಾಂಗ್‌, ಜಪಾನ್‌, ದಕ್ಷಿಣ ಕೊರಿಯಾ, ಸಿಂಗಾಪುರ, ಥಾಯ್ಲೆಂಡ್‌ನಿಂದ ಬರುವವರಿಗಾಗಿ ಶನಿವಾರ ಪರಿಷ್ಕೃತ ಮಾರ್ಗಸೂಚಿ ಪ್ರಕಟಿಸಿದೆ. ಈ ದೇಶಗಳಿಂದ ಬರುವವರು 72 ಗಂಟೆಗಳಿಗಿಂತ ಹಳೆಯದಲ್ಲದ ಆರ್‌ಟಿ-ಪಿಸಿಆರ್‌ ನೆಗೆಟಿವ್‌ ಪ್ರಮಾಣಪತ್ರ  ನೀಡಿದರೆ ಅವರಿಗೆ ವಿಮಾನ ನಿಲ್ದಾಣದಿಂದ ಹೊರ ಹೋಗಲು ಅವಕಾಶ ನೀಡಬಹುದು ಎಂದು ಸೂಚಿಸಿದೆ.

Tap to resize

Latest Videos

undefined

ಜನವರಿ, ಫೆಬ್ರವರಿ ತಿಂಗಳಲ್ಲಿ ಕೊರೊನಾ ಹೆಚ್ಚಾಗಲಿದೆ: ಡಾ. ಸಿ ಎನ್ ಮಂಜುನಾಥ್

ಇವರಲ್ಲಿ ರೋಗ ಲಕ್ಷಣ ಕಂಡು ಬಂದರೆ ಅಥವಾ ಪರೀಕ್ಷೆ ವೇಳೆ ಸೋಂಕು ದೃಢಪಟ್ಟರೆ ಕೂಡಲೇ ಆಸ್ಪತ್ರೆಗೆ ದಾಖಲಿಸಬೇಕು. ಅವರ ಸಿಟಿ ವ್ಯಾಲ್ಯೂ ಶೇ.25ಕ್ಕಿಂತ ಕಡಿಮೆ ಇದ್ದರೆ ವಂಶವಾಹಿ ಪರೀಕ್ಷೆಗೆ ಒಳಪಡಿಸಬೇಕು. ಆಸ್ಪತ್ರೆಗೆ ದಾಖಲಿಸುವಾಗ ಬೆಂಗಳೂರಿನಲ್ಲಿ ಬೌರಿಂಗ್‌ ಅಥವಾ ಮಂಗಳೂರಿನಲ್ಲಿ ವೆನ್‌ಲಾಕ್‌ ಆಸ್ಪತ್ರೆಗೆ ದಾಖಲು ಮಾಡಬೇಕು.

ಒಂದು ವೇಳೆ ಖಾಸಗಿ ಆಸ್ಪತ್ರೆಗೆ ದಾಖಲಾಗಲು ಬಯಸಿದರೆ ಪೂರ್ವಾನುಮತಿ ಮೇರೆಗೆ ಅನುಮತಿ ನೀಡಬಹುದು. ಆದರೆ, ಅದರ ವೆಚ್ಚವನ್ನು ಸೋಂಕಿತರೇ ಭರಿಸಬೇಕು ಎಂದು ಮಾರ್ಗಸೂಚಿಯಲ್ಲಿ ಸ್ಪಷ್ಟಪಡಿಸಲಾಗಿದೆ.
ರೋಗ ಲಕ್ಷಣಗಳಿಲ್ಲದವರು 7 ದಿನಗಳ ಕಾಲ ಮನೆಯಲ್ಲೇ ಹೋಂ ಕ್ವಾರಂಟೈನ್‌ಗೆ ಒಳಪಡಬೇಕು. ಈ ವೇಳೆ ಎಲ್ಲಾ ರೀತಿಯ ಕೊರೋನಾ ಸುರಕ್ಷತಾ ಮಾರ್ಗಸೂಚಿ ಪಾಲಿಸಬೇಕು ಎಂದು ಹೇಳಲಾಗಿದೆ.

click me!