ಕಳೆದ ವರ್ಷ ಸೆಪ್ಟೆಂಬರ್ 29ರಂದು 171 ಸೋಂಕಿತ ಪ್ರಕರಣಗಳು ದಾಖಲಾಗಿದ್ದು ಹೊರತುಪಡಿಸಿದರೆ ಪ್ರಸ್ತಕ ವರ್ಷದ ಮಾರ್ಚ್ 8ರಂದು ಮೊದಲ ಬಾರಿಗೆ ನೂರಕ್ಕಿಂತ ಹೆಚ್ಚು ಸೋಂಕಿತ ಪ್ರಕರಣ ದಾಖಲಾಗಿತ್ತು.
ಬೆಂಗಳೂರು(ಏ.01): ಪ್ರಸಕ್ತ ವರ್ಷದಲ್ಲೇ ಶುಕ್ರವಾರ ಅತಿ ಹೆಚ್ಚು 170 ಕೊರೋನಾ ಸೋಂಕಿತ ಪ್ರಕರಣಗಳು ದಾಖಲಾಗಿದ್ದು ಆತಂಕಕ್ಕೆ ಕಾರಣವಾಗಿದೆ. ಈ ವರ್ಷದಲ್ಲಿ ನೂರಕ್ಕೂ ಹೆಚ್ಚು ಸೋಂಕಿತ ಪ್ರಕರಣಗಳು ದಾಖಲಾಗಿರುವುದು ಇದು ನಾಲ್ಕನೇ ಬಾರಿ. ಈ ಹಿಂದೆ ಮಾರ್ಚ್ 8ರಂದು 101 ಪ್ರಕರಣ, ಮಾ.26ರಂದು 120 ಪ್ರಕರಣ, ಮಾ.30ರಂದು 143 ಪ್ರಕರಣಗಳು ದಾಖಲಾಗಿದ್ದು, ಈವರೆಗಿನ ಅತ್ಯಧಿಕ ಸೋಂಕಿತ ಪ್ರಕರಣಗಳಾಗಿದ್ದವು.
ಕಳೆದ ವರ್ಷ ಸೆಪ್ಟೆಂಬರ್ 29ರಂದು 171 ಸೋಂಕಿತ ಪ್ರಕರಣಗಳು ದಾಖಲಾಗಿದ್ದು ಹೊರತುಪಡಿಸಿದರೆ ಪ್ರಸ್ತಕ ವರ್ಷದ ಮಾರ್ಚ್ 8ರಂದು ಮೊದಲ ಬಾರಿಗೆ ನೂರಕ್ಕಿಂತ ಹೆಚ್ಚು ಸೋಂಕಿತ ಪ್ರಕರಣ ದಾಖಲಾಗಿತ್ತು.
undefined
ಕರ್ನಾಟಕದಲ್ಲಿ ಕೊರೋನಾ ಹೆಚ್ಚಳ: ಹೊಸ ಅಲೆಯ ಮುನ್ಸೂಚನೆಯಾ?
ಇದೀಗ 170 ಸೋಂಕಿತ ಪ್ರಕರಣಗಳು ಪತ್ತೆಯಾಗುವ ಮೂಲಕ ಪಾಸಿಟಿವಿಟಿ ದರ ಶೇ.3.39 ದಾಖಲಾಗಿದೆ. ಸೋಂಕಿನಿಂದ 106 ಮಂದಿ ಗುಣಮುಖರಾಗಿದ್ದು, ಮೃತಪಟ್ಟವರದಿಯಾಗಿಲ್ಲ. ಸದ್ಯ ನಗರದಲ್ಲಿ 551 ಸಕ್ರಿಯ ಸೋಂಕು ಪ್ರಕರಣಗಳಿವೆ. ಈ ಪೈಕಿ 41 ಮಂದಿ ಆಸ್ಪತ್ರೆಯಲ್ಲಿದ್ದು, 2 ಐಸಿಯು ವೆಂಟಿಲೇಟರ್, 5 ಮಂದಿ ಐಸಿಯು ಮತ್ತು ಓರ್ವ ಎಚ್‌ಡಿಯು ಮತ್ತು 33 ಮಂದಿ ಸಾಮಾನ್ಯ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 3411 ಮಂದಿ ಕೊರೋನಾ ಪರೀಕ್ಷೆಗೆ ಒಳಗಾಗಿದ್ದು 1,602 ರಾರಯಂಟಿಜನ್ ಮತ್ತು 1,809 ಆರ್‌ಟಿಪಿಸಿಆರ್ ಪರೀಕ್ಷೆಗಳು ನಡೆದಿವೆ.
ಕೋವಿಡ್ ವಿರುದ್ಧ ಲಸಿಕೆ ಪಡೆದುಕೊಂಡ 53 ಮಂದಿಯ ಪೈಕಿ 12 ಮಂದಿ ಮೊದಲ ಡೋಸ್, 16 ಮಂದಿ ಎರಡನೇ ಡೋಸ್ ಮತ್ತು 25 ಮಂದಿ ಬೂಸ್ಟರ್ ಡೋಸ್ ಲಸಿಕೆ ಪಡೆದಿದ್ದಾರೆ ಎಂದು ಬಿಬಿಎಂಪಿ ಮಾಹಿತಿ ನೀಡಿದೆ.