ಕೇರಳದಲ್ಲಿ ಕೊರೋನಾ ಆರ್ಭಟ: ಕರ್ನಾಟಕದ ಗಡಿಗ್ರಾಮಗಳಲ್ಲಿ ಹೈಅಲರ್ಟ್

By Kannadaprabha News  |  First Published Dec 21, 2023, 3:00 AM IST

ನೆಗಡಿ, ಕೆಮ್ಮು, ಜ್ವರದಿಂದ ಬಳಲುವವರಿಗೆ ಕೋವಿಡ್ ಟೆಸ್ಟ್ ಮಾಡಲಾಗುತ್ತಿದ್ದು ಕೇರಳದಿಂದ ಬಂದವರಿಗೆ ಸ್ವಯಂ ಕ್ವಾರಂಟೈನ್ ಆಗಲು ಸೂಚನೆ ಕೊಡಲಾಗುತ್ತಿದೆ. ಶಬರಿಮಲೆಯಿಂದ ಯಾರಾದರೂ ಹಿಂತಿರುಗಿದ್ದರ ಬಗ್ಗೆಯೂ ಆರೋಗ್ಯ ಮಾಹಿತಿ ಕಲೆ ಹಾಕುತ್ತಿದ್ದು ಕೊರೋನಾ ಸಂಬಂಧ ಕಟ್ಟೆಚ್ಚರ ವಹಿಸಲಾಗಿದೆ.

ಚಾಮರಾಜನಗರ(ಡಿ.21): ಕೇರಳದಲ್ಲಿ ರೂಪಾಂತರಿ ಕೊರೋನಾ ಆರ್ಭಟ ಹಿನ್ನೆಲೆ ಗುಂಡ್ಲುಪೇಟೆ ತಾಲೂಕಿನ ಗಡಿಗ್ರಾಮಗಳಲ್ಲಿ ಆರೋಗ್ಯ ಇಲಾಖೆ ಹೈಅಲರ್ಟ್ ಘೋಷಿಸಿದೆ. ಕೇರಳ ಗಡಿ ಹೊಂದಿಕೊಂಡಂತಿರುವ ಗುಂಡ್ಲುಪೇಟೆ ತಾಲೂಕಿನ ಮದ್ದೂರು ಕಾಲೋನಿ, ಕಗ್ಗಳದಹುಂಡಿ ಗ್ರಾಮಗಳಿಗೆ ಬುಧವಾರ ಆರೋಗ್ಯ ಇಲಾಖೆ ಸಿಬ್ಬಂದಿ ತೆರಳಿ ಮನೆ-ಮನೆ ಸಮೀಕ್ಷೆ ನಡೆಸಿ ಕೊರೋನಾ ಬಗ್ಗೆ ಜಾಗೃತಿ ಮೂಡಿಸಿದ್ದಾರೆ.

ನೆಗಡಿ, ಕೆಮ್ಮು, ಜ್ವರದಿಂದ ಬಳಲುವವರಿಗೆ ಕೋವಿಡ್ ಟೆಸ್ಟ್ ಮಾಡಲಾಗುತ್ತಿದ್ದು ಕೇರಳದಿಂದ ಬಂದವರಿಗೆ ಸ್ವಯಂ ಕ್ವಾರಂಟೈನ್ ಆಗಲು ಸೂಚನೆ ಕೊಡಲಾಗುತ್ತಿದೆ. ಶಬರಿಮಲೆಯಿಂದ ಯಾರಾದರೂ ಹಿಂತಿರುಗಿದ್ದರ ಬಗ್ಗೆಯೂ ಆರೋಗ್ಯ ಮಾಹಿತಿ ಕಲೆ ಹಾಕುತ್ತಿದ್ದು ಕೊರೋನಾ ಸಂಬಂಧ ಕಟ್ಟೆಚ್ಚರ ವಹಿಸಲಾಗಿದೆ.

Tap to resize

Latest Videos

undefined

ಕೋವಿಡ್ 4ನೇ ಅಲೆ ಕಟ್ಟಿಹಾಕಲು ಆರೋಗ್ಯ ಇಲಾಖೆ ಪ್ಲ್ಯಾನ್ ರಿವೀಲ್ ಮಾಡಿದ ಸಚಿವ ದಿನೇಶ್ ಗುಂಡೂರಾವ್!

ಚೆಕ್‌ಪೋಸ್ಟ್‌ನಲ್ಲಿ ಹದ್ದಿನ ಕಣ್ಣು:

ಕರ್ನಾಟಕ ಮತ್ತು ಕೇರಳ ಗಡಿಭಾಗವಾದ ಮೂಲೆಹೊಳೆ ಚೆಕ್ ಪೋಸ್ಟ್‌ನಲ್ಲಿ ಬುಧವಾರದಿಂದ ವಾಹನ ತಪಾಸಣೆ ಕೈಗೊಂಡಿದ್ದು ಜ್ವರ, ಶೀತದಿಂದ ಬಳಲುವ ಕೇರಳದವರನ್ನು ವಾಪಸ್ ಕಳುಹಿಸಲಾಗುತ್ತಿದೆ. ಶಬರಿಮಲೆಯಿಂದ ಹಿಂತಿರುಗುವ ಕನ್ನಡಿಗರ ಮೇಲೆ ನಿಗಾ ಇಡಲಾಗುತ್ತಿದ್ದು ಅವರ ಸಂಪೂರ್ಣ ವಿವರ ತೆಗೆದುಕೊಂಡು ಜ್ವರ ತಪಾಸಣೆ ಹಾಗೂ ಕೆಲವರಿಗೆ ಜ್ವರ ತಪಾಸಣೆ ಮಾಡಲು ಆರೋಗ್ಯ ಇಲಾಖೆಯು ಎಲ್ಲ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ. ಜಿಎನ್‌.1 ರೂಪಾಂತರಿ ಕೊರೋನಾ ತಳಿ ಬಗ್ಗೆ ಗಡಿಜಿಲ್ಲೆಯಲ್ಲಿಯೂ ಭೀತಿ ಆವರಿಸಿದೆ. ತೀವ್ರ ನಿಗಾ ಇರಿಸುವಂತೆ ಆರೋಗ್ಯ ಇಲಾಖೆಯು ಜಿಲ್ಲೆಯ ಅಧಿಕಾರಿಗಳಿಗೆ ಸೂಚನೆ ನೀಡಿದೆ.

click me!