ಭಾರತದಲ್ಲಿ ಕೋವಿಡ್‌ ತೀವ್ರ ಇಳಿಮುಖ..!

By Kannadaprabha News  |  First Published Dec 21, 2022, 2:30 AM IST

ಭಾರತದಲ್ಲಿ ಕೋವಿಡ್‌ ಪ್ರಕರಣಗಳ ಪ್ರಮಾಣ ತೀವ್ರವಾಗಿ ಇಳಿಮುಖವಾಗಿದೆ. ಕಳೆದ ವಾರ ಕೇವಲ 1103 ಪ್ರಕರಣ ದಾಖಲಾಗಿದ್ದು, 12 ಮಂದಿ ಸಾವನ್ನಪ್ಪಿದ್ದಾರೆ. ಈ ಮೂಲಕ ಸೋಂಕು, ಸಾವು 32 ತಿಂಗಳ (ಸುಮಾರು 2.5 ವರ್ಷ) ಕನಿಷ್ಠ ಎನ್ನಿಸಿಕೊಂಡಿವೆ.


ನವದೆಹಲಿ(ಡಿ.21):  ಚೀನಾ ಸೇರಿ ಪ್ರಪಂಚದ ವಿವಿಧ ಭಾಗಗಳಲ್ಲಿ ಕೋವಿಡ್‌ ಪ್ರಕರಣಗಳು ನಿರಂತರವಾಗಿ ಏರಿಕೆಯಾಗುತ್ತಿರುವ ವೇಳೆಯಲ್ಲಿ ಭಾರತದಲ್ಲಿ ಕೋವಿಡ್‌ ಪ್ರಕರಣಗಳ ಪ್ರಮಾಣ ತೀವ್ರವಾಗಿ ಇಳಿಮುಖವಾಗಿದೆ. ಕಳೆದ ವಾರ ಕೇವಲ 1103 ಪ್ರಕರಣ ದಾಖಲಾಗಿದ್ದು, 12 ಮಂದಿ ಸಾವನ್ನಪ್ಪಿದ್ದಾರೆ. ಈ ಮೂಲಕ ಸೋಂಕು, ಸಾವು 32 ತಿಂಗಳ (ಸುಮಾರು 2.5 ವರ್ಷ) ಕನಿಷ್ಠ ಎನ್ನಿಸಿಕೊಂಡಿವೆ.

ನವೆಂಬರ್‌ ಮೊದಲ ವಾರದಿಂದಲೂ ಇಳಿಕೆ ಹಾದಿಯಲ್ಲಿರುವ ಕೋವಿಡ್‌ ಕೇಸುಗಳು ಡಿ.12-18ನೇ ತಾರೀಖಿನ ವಾರದಲ್ಲಿ ಕನಿಷ್ಠಕ್ಕಿಳಿದಿವೆ. ಈ ಅವಧಿಯಲ್ಲಿ 1103 ಪ್ರಕರಣ ದಾಖಲಾಗಿದ್ದು, ಕೇವಲ 12 ಮಂದಿ ಮಾತ್ರ ಸೋಂಕಿಗೆ ಬಲಿಯಾಗಿದ್ದಾರೆ. ಅದರಲ್ಲೂ 3 ದಿನಗಳು ಶೂನ್ಯ ಸಾವು ದಾಖಲಾಗಿದೆ. ಇಷ್ಟು ಕಡಿಮೆ ಪ್ರಕರಣಗಳು 2020ರ ಮಾರ್ಚ್‌ 23-29ನೇ ತಾರೀಖಿನ ವಾರದ ಬಳಿಕ ಅತಿ ಕನಿಷ್ಠವಾಗಿದೆ. 2020ರ ಆ ವಾರದಲ್ಲಿ 736 ಪ್ರಕರಣಗಳು ದಾಖಲಾಗಿದ್ದವು. ಇದರ ನಂತರದ ವಾರದಲ್ಲಿ 3,154 ಪ್ರಕರಣಗಳು ದಾಖಲಾಗಿದ್ದವು ಹಾಗೂ ಸೋಂಕು ಏರುತ್ತಲೇ ಹೋಗಿತ್ತು.

Tap to resize

Latest Videos

undefined

ಕರ್ನಾಟಕದಲ್ಲಿ 20 ಮಂದಿಗೆ ಕೋವಿಡ್‌ ಸೋಂಕು, 147 ಚೇತರಿಕೆ

ಜು.18-24ನೇ ತಾರೀಖಿನ ವಾರದಲ್ಲಿ 1.36 ಲಕ್ಷ ಪ್ರಕರಣ ದಾಖಲಾಗಿತ್ತು. ಆದರೆ ಇದಾದ 5 ತಿಂಗಳಿನಿಂದ ದೇಶದಲ್ಲಿ ಕೋವಿಡ್‌ ಪ್ರಕರಣಗಳ ಪ್ರಮಾಣ ಇಳಿಕೆಯ ಹಾದಿಯಲ್ಲಿದೆ.

ಸಾವೂ ಕನಿಷ್ಠ:

ಈ ನಡುವೆ ಡಿ.12ರಿಂದ 18ನೇ ದಿನಾಂಕದ ವಾರದಲ್ಲಿ ಕೇವಲ 12 ಮಂದಿ ಸಾವಿಗೀಡಾಗಿದ್ದು, ಇದು 2020ರ ಮಾ.16-22ನೇ ತಾರೀಖಿನ ವಾರಕ್ಕಿಂತ ಕನಿಷ್ಠ ಸಾವಿನ ಪ್ರಮಾಣವಾಗಿದೆ. ಅರ್ಥಾತ್‌ ಇದೂ 32 ತಿಂಗಳ ಕನಿಷ್ಠವಾಗಿದೆ.
 

click me!