5,987 ಸೋಂಕು ಪರೀಕ್ಷೆಗಳು ನಡೆದಿದ್ದು, ಪಾಸಿಟಿವಿಟಿ ದರ ಶೇ.0.6ರಷ್ಟು ದಾಖಲಾಗಿದೆ. ಶನಿವಾರಕ್ಕೆ ಹೋಲಿಸಿದರೆ ಸೋಂಕು ಪರೀಕ್ಷೆಗಳು 100 ಹೆಚ್ಚು ನಡೆದಿವೆ. ಆದರೆ, ಹೊಸ ಪ್ರಕರಣಗಳು 20 ಇಳಿಕೆ
ಬೆಂಗಳೂರು(ನ.21): ರಾಜ್ಯದಲ್ಲಿ ಭಾನುವಾರ 38 ಮಂದಿಗೆ ಕೊರೋನಾ ಸೋಂಕು ತಗುಲಿದ್ದು, 17 ಮಂದಿ ಗುಣಮುಖರಾಗಿದ್ದಾರೆ. ಸಾವಿನ ವರದಿಯಾಗಿಲ್ಲ.
5,987 ಸೋಂಕು ಪರೀಕ್ಷೆಗಳು ನಡೆದಿದ್ದು, ಪಾಸಿಟಿವಿಟಿ ದರ ಶೇ.0.6ರಷ್ಟು ದಾಖಲಾಗಿದೆ. ಶನಿವಾರಕ್ಕೆ ಹೋಲಿಸಿದರೆ ಸೋಂಕು ಪರೀಕ್ಷೆಗಳು 100 ಹೆಚ್ಚು ನಡೆದಿವೆ. ಆದರೆ, ಹೊಸ ಪ್ರಕರಣಗಳು 20 ಇಳಿಕೆಯಾಗಿವೆ (ಶನಿವಾರ 58 ಪ್ರಕರಣ, ಶೂನ್ಯ ಸಾವು). ಬೆಂಗಳೂರಿನಲ್ಲಿ 13 ಮಂದಿಗೆ ಸೋಂಕು ತಗುಲಿದೆ. 6 ಜಿಲ್ಲೆಗಳಲ್ಲಿ ಬೆರಳೆಣಿಕೆ ಹಾಗೂ 23 ಜಿಲ್ಲೆಯಲ್ಲಿ ಶೂನ್ಯ ಪ್ರಕರಣ ದಾಖಲಾಗಿದೆ.
undefined
2.5 ವರ್ಷ ಬಳಿಕ ದೇಶದಲ್ಲಿ ಶೂನ್ಯ ಕೊರೋನಾ ಸಾವು..!
ಸದ್ಯ 1,554 ಸಕ್ರಿಯ ಸೋಂಕಿತರಿದ್ದು, ಈ ಪೈಕಿ 24 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 9 ಮಂದಿ ಐಸಿಯು, 5 ಮಂದಿ ಆಕ್ಸಿಜನ್, 10 ಮಂದಿ ಸಾಮಾನ್ಯ ಹಾಸಿಗೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದ 1,530 ಮಂದಿ ಮನೆಯ ಆರೈಕೆಯಲ್ಲಿದ್ದಾರೆ.