
ಬೆಂಗಳೂರು(ಅ.23): ರಾಜ್ಯದಲ್ಲಿ ಭಾನುವಾರ 112 ಕೊರೋನಾ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, 42 ಮಂದಿ ಗುಣಮುಖರಾಗಿದ್ದಾರೆ. ಕಲಬುರಗಿಯಲ್ಲಿ ವೃದ್ಧರೊಬ್ಬರು ಸಾವಿಗೀಡಾಗಿದ್ದಾರೆ. 7762 ಸೋಂಕು ಪರೀಕ್ಷೆಗಳು ನಡೆದಿದ್ದು, ಪಾಸಿಟಿವಿಟಿ ದರ ಶೇ.1.4ರಷ್ಟು ದಾಖಲಾಗಿದೆ. ಶನಿವಾರಕ್ಕೆ ಹೋಲಿಸಿದರೆ ಸೋಂಕು ಪರೀಕ್ಷೆಗಳು ಒಂದು ಸಾವಿರ ಕಡಿಮೆ ನಡೆದಿವೆ. ಹೀಗಾಗಿ, ಹೊಸ ಪ್ರಕರಣಗಳು 167 ಇಳಿಕೆಯಾಗಿವೆ (ಶನಿವಾರ 279 ಪ್ರಕರಣ, ಸಾವು ಶೂನ್ಯ). ಸದ್ಯ 2326 ಸಕ್ರಿಯ ಸೋಂಕಿತರಿದ್ದು, ಈ ಪೈಕಿ 25 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 10 ಮಂದಿ ಐಸಿಯು, 5 ಮಂದಿ ಆಕ್ಸಿಜನ್, 10 ಮಂದಿ ಸಾಮಾನ್ಯ ಹಾಸಿಗೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದ 2301 ಮಂದಿ ಮನೆಯಲ್ಲಿ ಆರೈಕೆಯಲ್ಲಿದ್ದಾರೆ.
ಭಾನುವಾರ ಬೆಂಗಳೂರಿನಲ್ಲಿ 38 ಮಂದಿಗೆ ಸೋಂಕು ತಗುಲಿದೆ. ಉಳಿದಂತೆ 18 ಜಿಲ್ಲೆಗಳಲ್ಲಿ ಬೆರಳೆಣಿಕೆ, 11 ಜಿಲ್ಲೆಯಲ್ಲಿ ಶೂನ್ಯ ಪ್ರಕರಣಗಳು ವರದಿಯಾಗಿವೆ.
Covid Vaccine ಖರೀದಿ ಬಂದ್: ಸರ್ಕಾರದ ಬಳಿಯಿದೆ 6 ತಿಂಗಳಿಗೆ ಸಾಕಾಗುವಷ್ಟು ಲಸಿಕೆ ಸಂಗ್ರಹ
ಕೋವಿಡ್ ಇಳಿಕೆ: 1,994 ಹೊಸ ಕೇಸು, 4 ಮಂದಿ ಸಾವು
ನವದೆಹಲಿ: ದೇಶದಲ್ಲಿ ಭಾನುವಾರ ದಾಖಲಾದ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಶನಿವಾರಕ್ಕಿಂತ ಕೊಂಚ ಇಳಿಕೆ ಕಂಡು ಬಂದಿದ್ದು ಭಾನುವಾರ ಮುಂಜಾನೆ 8 ಗಂಟೆಗೆ ಮುಕ್ತಾಯವಾದ 24 ಗಂಟೆಗಳಲ್ಲಿ ಒಟ್ಟು 1,994 ಹೊಸ ಕೇಸ್ ದಾಖಲಾಗಿವೆ. ಇದೇ ವೇಳೆ 4 ಸೋಂಕಿತರು ಮೃತಪಟ್ಟಿದ್ದಾರೆ.
ಸಕ್ರಿಯ ಪ್ರಕರಣಗಳ ಸಂಖ್ಯೆ 23,432ಕ್ಕೆ ಇಳಿಕೆಯಾಗಿದೆ. ಚೇತರಿಕೆಯ ಪ್ರಮಾಣವು 98.76ರಷ್ಟಿದೆ. ದೈನಂದಿನ ಪಾಸಿಟಿವಿಟಿ ದರ 1.24ರಷ್ಟುದಾಖಲಾಗಿದ್ದು ಈವರೆಗೆ ದೇಶದಲ್ಲಿ ಒಟ್ಟು 4.46 ಕೋಟಿ ಕೋವಿಡ್ ಪ್ರಕರಣಗಳು ದಾಖಲಾಗಿವೆ. ದೇಶದದಲ್ಲಿ ಒಟ್ಟು 219.55 ಕೋಟಿ ಕೋವಿಡ್ ಡೋಸ್ಗಳ ವಿತರಣೆಯಾಗಿದೆ.