200ಕ್ಕೂ ಹೆಚ್ಚು ದೇಶಕ್ಕೆ ಕೊರೋನಾ: 8 ಲಕ್ಷ ಜನಕ್ಕೆ ವೈರಸ್‌, 1.75 ಲಕ್ಷ ಗುಣಮುಖ!

By Kannadaprabha News  |  First Published Apr 1, 2020, 7:12 AM IST

ವಿಶ್ವದಲ್ಲಿ 8 ಲಕ್ಷ ಜನಕ್ಕೆ ವೈರಸ್‌, 40 ಸಾವಿರಕ್ಕೂ ಹೆಚ್ಚು ಸಾವು!|  3 ತಿಂಗಳಲ್ಲಿ 200ಕ್ಕೂ ಹೆಚ್ಚು ದೇಶಕ್ಕೆ ಕೊರೋನಾ ಬಾಧೆ| ಅಮೆರಿಕದಲ್ಲಿ ಅತಿ ಹೆಚ್ಚು| ಒಟ್ಟು 1.75 ಲಕ್ಷ ಗುಣಮುಖ| 


ಮ್ಯಾಡ್ರಿಡ್‌/ಪ್ಯಾರಿಸ್‌(ಏ.01): 2019 ವರ್ಷಾಂತ್ಯದಲ್ಲಿ ಚೀನಾದ ವುಹಾನ್‌ನಲ್ಲಿ ಪತ್ತೆಯಾಗಿ, ಜನವರಿ ತಿಂಗಳಲ್ಲಿ ವಿಶ್ವದ ವಿವಿಧ ದೇಶಗಳಿಗೆ ಹಬ್ಬಲು ಆರಂಭವಾದ ಮಾರಕ ಕೊರೋನಾ ಸೋಂಕು ಮಾರ್ಚ್ ಮಾಸಾಂತ್ಯದ ವೇಳೆಗೆ ವಿಶ್ವದ 200 ದೇಶಗಳ 8 ಲಕ್ಷಕ್ಕೂ ಹೆಚ್ಚು ಜನರಿಗೆ ವ್ಯಾಪಿಸಿದೆ. ಸೋಂಕು ಹಬ್ಬಿದ ದೇಶಗಳ ಪೈಕಿ 129 ದೇಶಗಳಲ್ಲಿ ಈವರೆಗೆ 40000 ಜನ ಸಾವನ್ನಪ್ಪಿದ್ದಾರೆ.

ಏಷ್ಯಾ ಖಂಡಕ್ಕೆ ಸೇರಿದ ಚೀನಾದಲ್ಲಿ ಮೊದಲು ಸೋಂಕು ಕಾಣಿಸಿಕೊಂಡಿತ್ತಾದರೂ, ನಂತರ ಯುರೋಪ್‌ ಮತ್ತು ಅಮೆರಿಕ ಸೋಂಕಿನ ಕೇಂದ್ರ ಸ್ಥಾನವಾಗಿ ಹೊರಹೊಮ್ಮಿವೆ. ಅದರಲ್ಲೂ 198 ದೇಶಗಳಲ್ಲಿನ ಒಟ್ಟು ಸೋಂಕಿತರು ಮತ್ತು ಸಾವಿನ ಪ್ರಮಾಣದಲ್ಲಿ ಕೇವಲ 44 ದೇಶಗಳ ಒಕ್ಕೂಟವಾಗಿರುವ ಯುರೋಪ್‌ ದೇಶಗಳ ಪಾಲೇ ಅಧಿಕ ಎಂಬುದು ಆತಂಕಕಾರಿಯಾಗಿದೆ. ಯುರೋಪ್‌ ದೇಶಗಳಲ್ಲಿ ಈವರೆಗೆ 25000ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ. ಅದರಲ್ಲೂ ಇಟಲಿ, ಸ್ಪೇನ್‌, ಫ್ರಾನ್ಸ್‌ನಲ್ಲಿ ಅತಿ ಹೆಚ್ಚಿನ ಸಾವು ಸಂಭವಿಸಿದೆ.

Latest Videos

undefined

ದೇಶದಲ್ಲಿ ಕೊರೋನಾಕ್ಕೆ ಮತ್ತೆ 3 ಬಲಿ, ಹೊಸದಾಗಿ 220 ಜನರಿಗೆ ಸೋಂಕು!

ಇನ್ನು ಸೋಂಕು ಪೀಡಿತರ ಸಂಖ್ಯೆಯಲ್ಲಿ ಅಮೆರಿಕ ವಿಶ್ವದಲ್ಲೇ ನಂ.1 ಸ್ಥಾನದಲ್ಲಿ ಮುಂದುವರೆದಿದೆ. ಹಾಲಿ ಅಮೆರಿಕದ 1.65 ಲಕ್ಷಕ್ಕೂ ಹೆಚ್ಚು ಜನ ಸೋಂಕಿಗೆ ತುತ್ತಾಗಿದ್ದು, 3000ಕ್ಕಿಂತ ಹೆಚ್ಚು ಜನ ಬಲಿಯಾಗಿದ್ದಾರೆ.

ಕೊರೋನಾ ನಿಗ್ರಹಕ್ಕಾಗಿ ವಿಶ್ವ ಆರೋಗ್ಯ ಸಂಸ್ಥೆ ಪ್ರತಿಯೊಂದು ದೇಶಗಳ ಸಹಕಾರದಲ್ಲಿ ನಾನಾ ರೀತಿಯ ಕ್ರಮಗಳನ್ನು ಘೋಷಿಸುತ್ತಾ, ಅರಿವು ಮೂಡಿಸುವ ಕೆಲಸ ಮಾಡುತ್ತಲೇ ಇದೆ. ಈ ಕಾರಣಕ್ಕಾಗಿಯೇ ವಿಶ್ವದ 780 ಕೋಟಿ ಜನರ ಪೈಕಿ ಈಗಾಗಲೇ 300 ಕೋಟಿಗೂ ಹೆಚ್ಚಿನ ಜನರನ್ನು ಗೃಹಬಂಧನಕ್ಕೆ ಒಳಪಡಿಸಲಾಗಿದೆ.

ದಿಲ್ಲಿ ಮಸೀದಿ ಜಮಾತ್‌: ರಾಜ್ಯದ 9 ಜಿಲ್ಲೆಯಿಂದ 300 ಜನ ಭಾಗಿ!

ಟಾಪ್‌ 6 ರಾಷ್ಟ್ರಗಳು

ದೇಶ- ಸೋಂಕಿತರು- ಸಾವು

ಅಮೆರಿಕ- 1,65,665- 3177

ಇಟಲಿ- 1,01,739- 11,591

ಸ್ಪೇನ್‌- 94,417- 8189

ಚೀನಾ- 81,518- 3,305

ಜರ್ಮನಿ- 67,051- 682

click me!