ಅಮೆರಿಕದಲ್ಲಿ 1 ಲಕ್ಷ ಮಂದಿ ಸಾಯುವ ಸಾಧ್ಯತೆ: ಟ್ರಂಪ್‌!

By Kannadaprabha NewsFirst Published Mar 31, 2020, 7:22 AM IST
Highlights

ಅಮೆರಿಕದಲ್ಲಿ 1 ಲಕ್ಷ ಮಂದಿ ಸಾಯುವ ಸಾಧ್ಯತೆ: ಟ್ರಂಪ್‌|  ಏ.30ರವರೆಗೂ ಸಾಮಾಜಿಕ ಅಂತರ ಕಡ್ಡಾಯ| ನಾವು ಕ್ರಮ ಕೈಗೊಳ್ಳದಿದ್ದರೆ 22 ಲಕ್ಷ ಆಗುತ್ತಿತ್ತು: ಅಧ್ಯಕ್ಷ| 2600 ಜನ: ಕೊರೋನಾದಿಂದಾಗಿ ಸಾವನ್ನಪ್ಪಿದವರ ಸಂಖ್ಯೆ

ವಾಷಿಂಗ್ಟನ್‌(ಮಾ. 31): ಅಮೆರಿಕದಲ್ಲಿ ಕೊರೋನಾ ವೈರಸ್‌ನಿಂದ ಸುಮಾರು 1 ಲಕ್ಷ ಜನರು ಮರಣ ಹೊಂದಬಹುದು ಎಂದು ಸ್ವತಃ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ. ತಮ್ಮ ಆರೋಗ್ಯ ಸಲಹೆಗಾರರು ನೀಡಿರುವ ಮಾಹಿತಿ ಆಧರಿಸಿ ಅವರು ಈ ಎಚ್ಚರಿಕೆ ನೀಡಿದ್ದು, ದೇಶಾದ್ಯಂತ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿರ್ಬಂಧವನ್ನು ಏ.30ರವರೆಗೆ ವಿಸ್ತರಿಸಿದ್ದಾರೆ.

Fact Check| ಚೀನಾದಲ್ಲಿ ಬಾವಲಿಯೊಂದಿಗೇ ಸೆಕ್ಸ್: ಕೊರೋನಾ ಹುಟ್ಟಿಗೆ ಇದೇ ಕಾರಣನಾ?

‘ಮುಂದಿನ ಎರಡು ವಾರಗಳಲ್ಲಿ ದೇಶದಲ್ಲಿ ಸಾವಿನ ಸಂಖ್ಯೆ ಗರಿಷ್ಠ ಪ್ರಮಾಣಕ್ಕೆ ತಲುಪಬಹುದು. ಜೂನ್‌ 1ರ ವೇಳೆಗೆ ಅಮೆರಿಕದಲ್ಲಿ ವೈರಸ್‌ ಹರಡುವ ಪ್ರಮಾಣ ನಿಲ್ಲಬಹುದು. ನಾವು ಕೈಗೊಳ್ಳುತ್ತಿರುವ ಮುನ್ನೆಚ್ಚರಿಕೆಗಳಿಂದಾಗಿ ಸೋಂಕು ಇನ್ನಷ್ಟುಹರಡುವ ಪ್ರಮಾಣ ಕಡಿಮೆಯಾಗಬಹುದು ಮತ್ತು ಅಂತಿಮವಾಗಿ ಸಾವಿನ ಸಂಖ್ಯೆಯೂ ಕಡಿಮೆಯಾಗಬಹುದು’ ಎಂದು ಟ್ರಂಪ್‌ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

‘ನಾವೀಗ ಏನು ಮಾಡುತ್ತಿದ್ದೇವೋ ಅದನ್ನು ಮಾಡದೇ ಇದ್ದಿದ್ದರೆ 22 ಲಕ್ಷ ಜನ ಸಾಯಬಹುದಿತ್ತು. ಅಮೆರಿಕದ ಜನರ ತ್ಯಾಗ ಹಾಗೂ ಧೈರ್ಯದಿಂದ ಅಸಂಖ್ಯಾತ ಜೀವಗಳು ಉಳಿಯುತ್ತಿವೆ. ಸಾವಿನ ಸಂಖ್ಯೆಯನ್ನು 1 ಲಕ್ಷಕ್ಕೆ ನಿಲ್ಲಿಸಲು ಸಾಧ್ಯವಾದರೆ ನಾವೆಲ್ಲರೂ ಸೇರಿ ಅದ್ಭುತ ಕೆಲಸ ಮಾಡಿದಂತಾಗುತ್ತದೆ’ ಎಂದೂ ಅಭಿಪ್ರಾಯಪಟ್ಟಿದ್ದಾರೆ.

ವಿಶ್ವದ ದೊಡ್ಡಣ್ಣ ಈಗ ಕೊರೋನಾ ಕೇಸಲ್ಲೂ ವಿಶ್ವ ನಂ.1: ಅಮೆರಿಕದಲ್ಲಿ 1 ಲಕ್ಷ ಸೋಕಿತರು!

ಅಮೆರಿಕದ ನ್ಯೂಯಾರ್ಕ್, ವಾಷಿಂಗ್ಟನ್‌ನಲ್ಲಿ ಕೊರೋನಾ ತೀವ್ರಗತಿಯಲ್ಲಿ ಹರಡುತ್ತಿದ್ದು, ದೇಶದ ಬಹುತೇಕ ರಾಜ್ಯಗಳಲ್ಲಿ ಸೋಂಕು ಪತ್ತೆಯಾಗಿದೆ. ದೇಶದಲ್ಲಿ ಈಗಾಗಲೇ ಸೋಂಕಿತರ ಸಂಖ್ಯೆ 2500 ದಾಟಿದ್ದು, 1.4 ಲಕ್ಷಕ್ಕೂ ಹೆಚ್ಚು ಜನರಿಗೆ ಸೋಂಕು ತಗುಲಿದೆ. ಆದರೂ ದೇಶದಲ್ಲಿ ಸಂಪೂರ್ಣ ಲಾಕ್‌ಡೌನ್‌ ಘೋಷಿಸಿಲ್ಲ. ಬದಲಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಜನರಿಗೆ ಮಾರ್ಗಸೂಚಿಗಳನ್ನು ನಿಗದಿಪಡಿಸಲಾಗಿದೆ.

click me!