ಲಾಕ್‌ಡೌನ್‌: ಗರ್ಭಿಣಿಯನ್ನು 200 ಕಿ.ಮೀ. ದೂರದ ತಾಯಿ ಮನೆಗೆ ತಲುಪಿಸಿದ ಯುವಕ

By Kannadaprabha NewsFirst Published Apr 1, 2020, 8:18 AM IST
Highlights

ಲಾಕ್‌ಡೌನ್‌ನಿಂದಾಗಿ ಸಂಕಷ್ಟದಲ್ಲಿದ್ದ ಗರ್ಭಿಣಿ ಮಹಿಳೆಯನ್ನು ಅವರ ತಾಯಿ ಮನೆಗೆ ಸೇರಿಸಿ ಸುಳ್ಯದ ಯುವಕನೊಬ್ಬ ಮಾನವೀಯತೆ ಮೆರೆದಿದ್ದಾರೆ.

ಉಡುಪಿ(ಎ.01): ಲಾಕ್‌ಡೌನ್‌ನಿಂದಾಗಿ ಸಂಕಷ್ಟದಲ್ಲಿದ್ದ ಗರ್ಭಿಣಿ ಮಹಿಳೆಯನ್ನು ಅವರ ತಾಯಿ ಮನೆಗೆ ಸೇರಿಸಿ ಸಮಾಜಸೇವಕ ವಿಶು ಶೆಟ್ಟಿಅಂಬಲಪಾಡಿ ಮಾನವೀಯತೆ ಮೆರೆದಿದ್ದಾರೆ.

ಮಂಗಳವಾರ ಬೈಂದೂರಿನಲ್ಲಿ ಗಂಡನ ಮನೆಯಲ್ಲಿದ್ದ ತುಂಬು ಗರ್ಭಿಣಿ ಹೆರಿಗೆಗಾಗಿ ತಾಯಿ ಮನೆ, ದ.ಕ. ಜಿಲ್ಲೆಯ ಮೂಲ್ಕಿ ಕೊಲ್ನಾಡಿಗೆ ಹೋಗಬೇಕಾಗಿತ್ತು. ನಿಷೇಧಾಜ್ಞೆ ಇರುವುದರಿಂದ ದ.ಕ. ಜಿಲ್ಲೆಯ ಹೆಜಮಾಡಿ ಗಡಿಭಾಗದಲ್ಲಿ ವಾಹನ ಪ್ರವೇಶ ನಿರ್ಬಂಧಿಲಾಗಿದೆ.

ಕೇಂದ್ರಾಡಳಿತ ಪ್ರದೇಶವಾಗಲಿದೆಯಾ ಕಾಸರಗೋಡು..?

ಆದ್ದರಿಂದ ಬಾಡಿಗೆ ವಾಹನದಾರರು ಆಕೆಯನ್ನು ಕರೆದೊಯ್ಯಲು ಒಪ್ಪಲಿಲ್ಲ. ಸರ್ಕಾರಿ ಅಧಿಕಾರಿಗಳನ್ನು ಸಂಪರ್ಕಿಸಿದರೂ ಸ್ಪಂದನೆ ದೊರೆಯಲಿಲ್ಲ. ಇದರಿಂದ ಅಸಹಾಯಕರಾದ ಅವರು ವಿಶು ಶೆಟ್ಟಿಅಂಬಲಪಾಡಿ ಅವರಿಗೆ ಕರೆ ಮಾಡಿ ಅಳ​ಲು ಹೇಳಿಕೊಂಡರು.

ತಕ್ಷಣ ವಿಶು ಶೆಟ್ಟಿತಮ್ಮ ಸ್ವಂತ ವಾಹನದಲ್ಲಿ ಬೈಂದೂರಿಗೆ ತೆರಳಿ, ಗರ್ಭಿಣಿಯನ್ನು ಸುರಕ್ಷಿತವಾಗಿ ಕೊಲ್ನಾಡು ತಾಯಿ ಮನೆಗೆ ಮುಟ್ಟಿಸಿದ್ದಾರೆ. ಒಟ್ಟು 200 ಕಿ.ಮೀ. ಪ್ರಯಾಣದಲ್ಲಿ, ಹೆಜಮಾಡಿಯಲ್ಲಿ ಪೊಲೀಸರು ತಡೆದರೂ ಸಮಸ್ಯೆಯನ್ನು ಹೇಳಿದ ಮೇಲೆ ಮುಂದಕ್ಕೆ ಹೋಗಲು ಬಿಟ್ಟಿದ್ದಾರೆ ಎಂದು ವಿಶು ಶೆಟ್ಟಿಹೇಳಿದ್ದಾರೆ.

click me!