ಕೊರೋನಾ ಭೀತಿ: ಗ್ರಾ. ಪಂ ನಿರ್ಲಕ್ಷ್ಯಕ್ಕೆ ಬೇಸತ್ತು ಯುವಕನಿಂದ ಚರಂಡಿ ಸ್ವಚ್ಛತೆ!

Kannadaprabha News   | Asianet News
Published : Apr 04, 2020, 07:53 AM IST
ಕೊರೋನಾ ಭೀತಿ: ಗ್ರಾ. ಪಂ ನಿರ್ಲಕ್ಷ್ಯಕ್ಕೆ ಬೇಸತ್ತು ಯುವಕನಿಂದ ಚರಂಡಿ ಸ್ವಚ್ಛತೆ!

ಸಾರಾಂಶ

ಕೊರೋನಾಗೆ ಹೆದರಿ ಚರಂಡಿ ಸ್ವಚ್ಛ ಮಾಡಿದ ಯುವಕ| ಧಾರವಾಡ ಜಿಲ್ಲೆ ಕಲಘಟಗಿ ತಾಲೂಕಿನ ಗಳಗಿ ಹುಲಕೊಪ್ಪದ ಗ್ರಾಮದಲ್ಲಿ ನಡೆದ ಘಟನೆ| ಊರಿನ ಚರಂಡಿ ಸ್ವಚ್ಛ ಮಾಡದ ಗ್ರಾಮ ಪಂಚಾಯಿತಿ| 

ಕಲಘಟಗಿ(ಏ.04): ಕೊರೋನಾ ಮರಣ ಮೃದಂಗ ಬಾರಿಸುತ್ತಿದ್ದರೂ ಊರಿನ ಚರಂಡಿ ಸ್ವಚ್ಛ ಮಾಡದ ಗ್ರಾಮ ಪಂಚಾಯಿತಿ ನಿರ್ಲಕ್ಷ್ಯಕ್ಕೆ ಬೇಸತ್ತ ಯುವಕನೋರ್ವ ಸ್ವತಃ ಸಲಿಕೆ ಹಿಡಿದು ಚರಂಡಿ ಸ್ವಚ್ಛತೆಗೊಳಿಸಿ ಮಾದರಿಯಾಗಿದ್ದಾರೆ.

ಗ್ರಾಮ ಪಂಚಾಯಿತಿ ಬಳಿ ಮನೆ ಹೊಂದಿರುವ ತಾಲೂಕಿನ ಗಳಗಿ ಹುಲಕೊಪ್ಪದ ಬಸವರಾಜ ಕ್ಯಾರಕೊಂಡ ಎಂಬುವರು ತಮ್ಮ ಮನೆಯ ಬಳಿ ಗಬ್ಬು ನಾರುತ್ತಿದ್ದ ಚರಂಡಿ ಸ್ವಚ್ಛಗೊಳಿಸಲು ಗ್ರಾಪಂಗೆ ಹಲವು ಬಾರಿ ಹೇಳಿದ್ದರೂ ಯಾವುದೇ ಪ್ರಯೋಜನವಾಗಲಿಲ್ಲ. ಈ ಮಧ್ಯೆ ಕೊರೋನಾ ಹಾವಳಿ ಹೆಚ್ಚಿದ್ದರಿಂದ ಸ್ವತಃ ತಾವೇ ಸಲಿಕೆ ಹಿಡಿದು ಸ್ವಚ್ಛಗೊಳಿಸಿದ್ದಾರೆ. ಬಸವರಾಜ ಅವರು ಗಟಾರು ಸ್ವಚ್ಛಗೊಳಿಸುತ್ತಿರುವುದನ್ನು ಗ್ರಾಮದ ಯುವಕ ವಿಡಿಯೋ ಮಾಡಿದ್ದು ಇದೀಗ ಆ ವಿಡಿಯೋ ವೈರಲ್‌ ಆಗಿದೆ.

ಲಾಕ್‌ಡೌನ್‌: ರೋಗಿಗಳ ಪರದಾಟ, ಜನತೆಗೆ ಕೇಂದ್ರ ಸಚಿವ ಜೋಶಿ ಉಚಿತ ಕ್ಯಾಬ್‌ ಸೌಲಭ್ಯ

‘ಕಳೆದ ಎರಡು ವರ್ಷಗಳಿಂದ ಪಂಚಾಯಿತಿ ಈ ಗಟಾರು ಸ್ವಚ್ಛಗೊಳಿಸಿಲ್ಲ. ಈ ಕುರಿತು ಹಲವು ಬಾರಿ ಮನವಿ ಮಾಡಿದೆ. ಅನುದಾನ ಇದ್ದರೆ ಮಾತ್ರ ಈ ಕಡೆ ಬರುತ್ತಾರೆ. ಇಲ್ಲದಿದ್ದರೆ ಬರುವುದಿಲ್ಲ. ಹಾಗಾಗಿ ನಾನೇ ಬಳಿಯುತ್ತಿದ್ದೇನೆ ಎಂದರು ಬಸವರಾಜ.
 

PREV
click me!

Recommended Stories

ವೈರಸ್‌ ಕಾಟ: ಕೊರೋನಾ ತಡೆಗೆ ಸಾರ್ವಜನಿಕರ ಸಹಕಾರ ಅಗತ್ಯ, ಸಚಿವ ಪಾಟೀಲ್‌
ಮತ್ತೆ ಕೊರೋನಾರ್ಭಟ: ಪೂಲಿಂಗ್ ಟೆಸ್ಟ್ ಮೊರೆಹೋದ ಆರೋಗ್ಯ ಇಲಾಖೆ, ಏನಿದು ಹೊಸ ಪರೀಕ್ಷೆ?