ಕೊರೋನಾ ವೈರಸ್ ವಿರುದ್ಧದ ಹೋರಾಟ/ ರಾಣೆಬೇನ್ನೂರು ಶಾಸಕನ ಪ್ರಚಾರದ ಗೀಳು/ ಬಡವರು, ನಿರ್ಗತಿಕರಿಗೆ ನೀಡುವ ದಿನಸಿ ಪ್ಯಾಕೆಟ್ ಮೇಲೆ ತಮ್ಮ ಭಾವಚಿತ್ರ/ ಶಾಸಕರ ಕಾರ್ಯಕ್ಕೆ ಜನಾಕ್ರೋಶ
ಹಾವೇರಿ(ಏ. 09) ಕೊರೋನಾ ವೈರಸ್ ಭೀತಿಯಲ್ಲೂ ಶಾಸಕನ ಬಿಟ್ಟಿ ಪ್ರಚಾರಕ್ಕೆ ಜನಾಕ್ರೋಶ ವ್ಯಕ್ತವಾಗಿದೆ. ಬಡವರಿಗೆ ಹಂಚುವ ದಿನಸಿ ಪ್ಯಾಕೇಟ್‌ನ ಮೇಲೆ ಶಾಸಕರು ಭಾವಚಿತ್ರ ಹಾಕಿಸಿ ಪ್ರಚಾರ ಪಡೆಯುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಈ ಎಡವಟ್ಟು ಮಾಡಿರುವುದು ಹಾವೇರಿ ಜಿಲ್ಲೆ ರಾಣೆಬೇನ್ನೂರು ಶಾಸಕ ಅರುಣ ಕುಮಾರ ಪೂಜಾರ. ಬಡವರು, ನಿರ್ಗತಿಕರಿಗೆ ನೀಡುವ ದಿನಸಿ ಪ್ಯಾಕೆಟ್ ಮೇಲೆ ತಮ್ಮ ಭಾವಚಿತ್ರ ಹಾಕಿಸಿದ್ದಾರೆ. ಇದಲ್ಲದೇ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಕ್ಯಾಮರಾಗೆ ಫೋಸ್ ನೀಡುತ್ತಿದ್ದಾರೆ ಎಂದು ಹೇಳಲಾಗಿದೆ.
ಸಚಿವರ ಮುಂದೆ ಸಿಎಂ ಅಳಲು; ಕ್ಯಾಬಿನೇಟಟ್ ಮಿಟಿಂಗ್ ಇನ್ ಸೈಡ್
ಭಾವಚಿತ್ರ ಹಾಕಿ ಪ್ರಚಾರ ಪಡೆಯುತ್ತಿರುವ ಶಾಸಕ ಅರುಣಕುಮಾರ ವಿರುದ್ಧ ಅಲ್ಲಿನ ಜನರು ಆಕ್ರೋಶ ವ್ಯಕ್ತವಾಗಿದೆ. ಕೊರೋನಾ ಲಾಕ್ ಡೌನ್ ಕಾರಣಕ್ಕೆ ಅನೇಕ ಜನರು ಆಹಾರದ ಸಮಸ್ಯೆ ಎದುರಿಸುತ್ತಿದ್ದು ಶಾಸಕರು, ಸಂಸದರ ಆದಿಯಾಗಿ ಸಂಘ ಸಂಸ್ಥೆಗಳು ಮುಂದೆ ಬಂದು ಆಹಾರ ನೀಡುವ ಕೆಲಸ ಮಾಡುತ್ತಿವೆ. ಕೆಲವರು ಪುಕ್ಕಟೆ ಪ್ರಚಾರ ಪಡೆದುಕೊಳ್ಳುತ್ತಿದ್ದಾರೆ ಎಂಬ ಆಪಾದನೆಗಳು ಅಲ್ಲಲ್ಲಿ ಕೇಳಿ ಬಂದಿವೆ.