ಕೇರಳ-ಕರ್ನಾಟಕ ರಸ್ತೆ ತೆರವು: ಡೀವಿ ಹೇಳಿಕೆಗೆ ನೆಟ್ಟಿಗರು ಗರಂ

By Kannadaprabha NewsFirst Published Mar 29, 2020, 8:44 AM IST
Highlights

ಕರ್ನಾಟಕದ ಎರಡು ಕಡೆ ಕೇರಳಕ್ಕೆ ಅಗತ್ಯ ವಸ್ತುಗಳ ಪೂರೈಕೆಗೆ ಗಡಿ ಭಾಗ ತೆರವುಗೊಳಿಸುವ ಬಗ್ಗೆ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಅವರು ಮಲಯಾಳಿ ಚಾನೆಲ್‌ ಜತೆ ಮಲಯಾಳಿ ಭಾಷೆಯಲ್ಲಿ ಮಾತನಾಡಿರುವ ವೀಡಿಯೋ ತುಣುಕು ಈಗ ಜಾಲತಾಣದಲ್ಲಿ ವೈರಲ್‌ ಆಗಿದ್ದು, ತವರು ಜಿಲ್ಲೆ ದ.ಕ. ಸಹಿತ ಜನತೆಯ ಆಕ್ರೋಶಕ್ಕೆ ಕಾರಣವಾಗಿದೆ.

ಮಂಗಳೂರು(ಮಾ.29): ಕರ್ನಾಟಕದ ಎರಡು ಕಡೆ ಕೇರಳಕ್ಕೆ ಅಗತ್ಯ ವಸ್ತುಗಳ ಪೂರೈಕೆಗೆ ಗಡಿ ಭಾಗ ತೆರವುಗೊಳಿಸುವ ಬಗ್ಗೆ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಅವರು ಮಲಯಾಳಿ ಚಾನೆಲ್‌ ಜತೆ ಮಲಯಾಳಿ ಭಾಷೆಯಲ್ಲಿ ಮಾತನಾಡಿರುವ ವೀಡಿಯೋ ತುಣುಕು ಈಗ ಜಾಲತಾಣದಲ್ಲಿ ವೈರಲ್‌ ಆಗಿದ್ದು, ತವರು ಜಿಲ್ಲೆ ದ.ಕ. ಸಹಿತ ಜನತೆಯ ಆಕ್ರೋಶಕ್ಕೆ ಕಾರಣವಾಗಿದೆ.

ನೆರೆಯ ಕಾಸರಗೋಡಿನಲ್ಲಿ ಕೊರೋನಾ ಸೋಂಕು ವ್ಯಾಪಕವಾಗಿ ಹಬ್ಬುತ್ತಿರುವ ಮಧ್ಯೆಯೇ ಕೇರಳದಿಂದ ಕರ್ನಾಟಕಕ್ಕೆ ಗಡಿ ಮುಕ್ತಗೊಳಿಸುವ ಈ ಹೇಳಿಕೆ ಜಾಲತಾಣಗಳಲ್ಲಿ ವಿರೋಧವಾಗಿ ಮಾರ್ಪಟ್ಟಿದ್ದು, ರಾಜ್ಯದ ಮಾತ್ರವಲ್ಲ ಜಿಲ್ಲೆಯ ಜನತೆಗೆ ಆತಂಕ ತಂದೊಡ್ಡಿದೆ. ಈಗಾಗಲೇ ಕೇರಳ ಸಂಪರ್ಕಿಸುವ ಕರ್ನಾಟಕದ ಎಲ್ಲ ರಸ್ತೆಗಳನ್ನು ಬಂದ್‌ ಮಾಡಲಾಗಿದೆ. ಅಗತ್ಯ ವಸ್ತುಗಳ ಕಾರಣಕ್ಕೆ ರಸ್ತೆಗಳನ್ನು ತೆರವುಗೊಳಿಸಲು ಮುಂದಾದರೆ, ಕೇರಳದಿಂದ ಕೊರೋನಾ ಶಂಕಿತರು ಆಗಮಿಸಿದರೆ, ಅದು ದ.ಕ. ಜಿಲ್ಲೆಗೂ ಹಬ್ಬುವ ಆತಂಕ ಇದೆ ಎನ್ನುವುದು ಜಾಲತಾಣಿಗರ ಆಕ್ರೋಶ.

ಅವರು ಹೇಳಿ​ದ್ದೇ​ನು?:

ಕಾಸರಗೋಡಿನಿಂದ ಮಂಗಳೂರಿಗೆ ರೋಗಿಗಳನ್ನು ಕರೆದುಕೊಂಡು ಬರಲು ಈಗ ಅವಕಾಶ ಇಲ್ಲ. ಯಾಕೆಂದರೆ, ಮಂಗಳೂರಿನ ಎಲ್ಲ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆ, ಮೆಡಿಕಲ್‌ ಕಾಲೇಜು ಆಸ್ಪತ್ರೆಗಳು ಭರ್ತಿಯಾಗಿವೆ. ಹಾಗಾಗಿ ಮಂಗಳೂರಿಗೆ ಯಾವುದೇ ಕಾರಣಕ್ಕೂ ಕಾಸರಗೋಡಿನಿಂದ ರೋಗಿಗಳನ್ನು ಕರೆದುಕೊಂಡು ಬರುವಂತಿಲ್ಲ. ಈ ಬಗ್ಗೆ ದ.ಕ. ಜಿಲ್ಲಾಡಳಿತ ಸ್ಪಷ್ಟಪಡಿಸಿದೆ ಎಂದಿದ್ದಾರೆ. ಅಲ್ಲದೆ ರಾಜ್ಯದ ಮುಖ್ಯಮಂತ್ರಿ ಮತ್ತು ಮುಖ್ಯ ಕಾರ್ಯದರ್ಶಿ ಜತೆಗೆ ಮಾತುಕತೆ ನಡೆಸಿರುವುದಾಗಿ ಡಿ.ವಿ. ಚಾನೆಲ್‌ಗೆ ಹೇಳಿರುವುದು ವಿಡಿಯೋ ತುಣುಕಿನಲ್ಲಿ ಇದೆ.

click me!