COVID19: ಮಂಗಳೂರಲ್ಲಿ ಕಾಂಡೋಮ್‌ಗೆ ಭಾರೀ ಬೇಡಿಕೆ

Kannadaprabha News   | Asianet News
Published : Apr 03, 2020, 11:19 AM ISTUpdated : Apr 03, 2020, 11:34 AM IST
COVID19: ಮಂಗಳೂರಲ್ಲಿ ಕಾಂಡೋಮ್‌ಗೆ ಭಾರೀ ಬೇಡಿಕೆ

ಸಾರಾಂಶ

ಅಗತ್ಯ ವಸ್ತುಗಳ ಜತೆಗೆ ಈಗ ದಕ್ಷಿಣ ಕನ್ನಡದಲ್ಲಿ ಕಾಂಡೋಮ್‌ ಕೂಡ ಸಿಗುತ್ತಿಲ್ಲ. ಸಾಮಾ​ನ್ಯ​ವಾಗಿ ಕರಾ​ವ​ಳಿ​ಯಲ್ಲಿ ಮಾಚ್‌ರ್‍ ಬಳಿಕ ಮೇ ತಿಂಗಳವರೆಗೆ ಬಿರು ಬೇಸಿಗೆಯಲ್ಲಿ ಕಾಂಡೋಮ್‌ಗೆ ಬೇಡಿಕೆ ವಿಪರೀತ ಕುಸಿಯುತ್ತದೆ. ಆದರೆ ಈ ಬಾರಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಡೋಮ್‌ಗೆ ಎಲ್ಲಿಲ್ಲದ ಬೇಡಿಕೆ. ಇದಕ್ಕೆ ಕಾರಣ ಕೊರೋನಾ!  

ಮಂಗಳೂರು(ಏ.03): ಅಗತ್ಯ ವಸ್ತುಗಳ ಜತೆಗೆ ಈಗ ದಕ್ಷಿಣ ಕನ್ನಡದಲ್ಲಿ ಕಾಂಡೋಮ್‌ ಕೂಡ ಸಿಗುತ್ತಿಲ್ಲ. ಸಾಮಾ​ನ್ಯ​ವಾಗಿ ಕರಾ​ವ​ಳಿ​ಯಲ್ಲಿ ಮಾಚ್‌ರ್‍ ಬಳಿಕ ಮೇ ತಿಂಗಳವರೆಗೆ ಬಿರು ಬೇಸಿಗೆಯಲ್ಲಿ ಕಾಂಡೋಮ್‌ಗೆ ಬೇಡಿಕೆ ವಿಪರೀತ ಕುಸಿಯುತ್ತದೆ. ಆದರೆ ಈ ಬಾರಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಡೋಮ್‌ಗೆ ಎಲ್ಲಿಲ್ಲದ ಬೇಡಿಕೆ. ಇದಕ್ಕೆ ಕಾರಣ ಕೊರೋನಾ!

21 ದಿನಗಳ ಕಾಲ ಲಾಕ್‌ಡೌನ್‌ ಘೋಷಿಸಿದ ಬಳಿಕ ಮಂಗಳೂರಿನಲ್ಲಿ ಕಳೆದ ಒಂದು ವಾರದಿಂದ ಕಾಂಡೋಮ್‌ ಭರ್ಜರಿಯಾಗಿ ಮಾರಾಟವಾಗಿದೆ. ಬಹುತೇಕ ಎಲ್ಲ ಮೆಡಿಕಲ್‌ ಸ್ಟೋರ್‌ಗಳಲ್ಲಿ ಕಾಂಡೋಮ್‌ ಈಗ ನೋ ಸ್ಟಾಕ್‌.

ಕೊರೋನಾ ವೈರಸ್ ಹೊಡೆತಕ್ಕೆ ಸೆಕ್ಸ್ ಇಂಡಸ್ಟ್ರಿಯೇ ಮಟಾಷ್!

ಮೆಡಿಕಲ್‌ ಸ್ಟೋರ್‌ಗೆ ತುರ್ತು ಔಷಧಕ್ಕೆ ಆಗಮಿಸುವ ಸಂದರ್ಭ ಕಾಂಡೋಮ್‌ ಕೇಳಿ ಪಡೆಯುತ್ತಿದ್ದಾರೆ. ಎಲ್ಲ ವಿಧದ ಕಾಂಡೋಮ್‌ಗಳೂ ಮಾರಾಟವಾಗಿವೆ ಎನ್ನುತ್ತಾರೆ ಮಂಗಳೂರಿನ ಪ್ರಮುಖ ಔಷಧ ವ್ಯಾಪಾರಸ್ಥರು.

ಭಾರತದಲ್ಲಿ ಗಗನಕ್ಕೇರಿದ ಕಾಂಡೋಂ ಬೇಡಿಕೆ, ಪೋರ್ನ್‌ ಸೈಟ್ ವೀಕ್ಷಕರೂ ದುಪ್ಪಟ್ಟು!

ಬೆಂಗಳೂರಿನಿಂದ ಖಾಸಗಿ ಟೂರಿಸ್ಟ್‌ ಬಸ್‌ಗಳಲ್ಲಿ ಮೆಡಿಸಿನ್‌ಗಳು ಮಂಗಳೂರಿನ ಡೀಲರ್‌ಗಳಿಗೆ ಪೂರೈಕೆಯಾಗುತ್ತಿತ್ತು. ವಾರದಿಂದ ಲಾಜಿಸ್ಟಿಕ್‌ ಲಾರಿಗಳಲ್ಲಿ ಮಾತ್ರ ಔಷಧಿ ಸಾಮ​ಗ್ರಿ​ಗಳು ಬರಬೇಕು. ಅದು ಕೂಡ ಬುಕ್‌ ಮಾಡಿದ ಮೂರು ದಿನದ ಬಳಿಕ ಪೂರೈಕೆ ಆಗುತ್ತದೆ.

ಕೊರೋನಾ ಹಾವಳಿ: ಕಾಂಡೋಮ್‌ಗೆ ಹೆಚ್ಚಾದ ಡಿಮ್ಯಾಂಡ್, ಉತ್ಪಾದನೆ ಬಂದ್!

ಹೀಗಾಗಿ ಇರುವ ಸ್ಟಾಕ್‌ಗಳೆಲ್ಲ ಖಾಲಿಯಾಗಿವೆ. ಮಂಗಳೂರಿನಲ್ಲಿ ಈಗಾಗಲೇ ಕಾಂಡೋಮ್‌ನ ಬೇಡಿಕೆ ಪ್ರಮಾಣ ಶೇ.40ರಷ್ಟುಹೆಚ್ಚಳವಾಗಿದೆ. ಬೇಡಿಕೆಯಷ್ಟುಕಾಂಡೋಮ್‌ ಪೂರೈಸಬೇಕಾದರೆ ಇನ್ನು ಒಂದೆರಡು ದಿನ ಬೇಕು ಎನ್ನುತ್ತಾರೆ ಡೀಲರ್‌ವೊಬ್ಬರು.

PREV
click me!

Recommended Stories

ವೈರಸ್‌ ಕಾಟ: ಕೊರೋನಾ ತಡೆಗೆ ಸಾರ್ವಜನಿಕರ ಸಹಕಾರ ಅಗತ್ಯ, ಸಚಿವ ಪಾಟೀಲ್‌
ಮತ್ತೆ ಕೊರೋನಾರ್ಭಟ: ಪೂಲಿಂಗ್ ಟೆಸ್ಟ್ ಮೊರೆಹೋದ ಆರೋಗ್ಯ ಇಲಾಖೆ, ಏನಿದು ಹೊಸ ಪರೀಕ್ಷೆ?