ಕೊರೋನಾ ಸೋಂಕು ಪತ್ತೆಗೆ ಉಚಿತ ತಪಾಸಣೆ

By Kannadaprabha NewsFirst Published Mar 25, 2020, 12:13 PM IST
Highlights

ರಾಮಕೃಷ್ಣನಗರದ ಸುಯೋಗ್‌ ಆಸ್ಪತ್ರೆಯಲ್ಲಿ ಕೊರೋನಾ ಸೋಂಕಿಗೆ ಬಹುಬೇಗ ತುತ್ತಾಗುವ ಸಾಧ್ಯತೆ ಇರುವ ಸಕ್ಕರೆಕಾಯಿಲೆ ರೋಗಿಗಳು, ವೃದ್ಧರು, ಮಕ್ಕಳು, ಗರ್ಭಿಣಿಯರು ಮತ್ತು ಕ್ಯಾನ್ಸರ್‌ ರೋಗಿಗಳಿಗೆ ಉಚಿತವಾಗಿ ರೋಗ ಪತ್ತೆ ತಪಾಸಣಾ ಕಾರ್ಯ ಹಮ್ಮಿಕೊಳ್ಳಲಾಗಿದೆ.

ಮೈಸೂರು(ಮಾ.25): ರಾಮಕೃಷ್ಣನಗರದ ಸುಯೋಗ್‌ ಆಸ್ಪತ್ರೆಯಲ್ಲಿ ಕೊರೋನಾ ಸೋಂಕಿಗೆ ಬಹುಬೇಗ ತುತ್ತಾಗುವ ಸಾಧ್ಯತೆ ಇರುವ ಸಕ್ಕರೆಕಾಯಿಲೆ ರೋಗಿಗಳು, ವೃದ್ಧರು, ಮಕ್ಕಳು, ಗರ್ಭಿಣಿಯರು ಮತ್ತು ಕ್ಯಾನ್ಸರ್‌ ರೋಗಿಗಳಿಗೆ ಉಚಿತವಾಗಿ ರೋಗ ಪತ್ತೆ ತಪಾಸಣಾ ಕಾರ್ಯ ಹಮ್ಮಿಕೊಳ್ಳಲಾಗಿದೆ.

ಜ್ವರ, ಕೆಮ್ಮು, ನೆಗಡಿ ಈ ತೊಂದರೆಗಳಿರುವವರು ಆಸ್ಪತ್ರೆಯ ದೂ. 0821-2566966ಗೆ ಕರೆಮಾಡಿ ಆಸ್ಪತ್ರೆಯ ಆಂಬುಲೆನ್ಸ್‌ನಿಂದಲೇ ಸುಯೋಗ್‌ ಆಸ್ಪತ್ರೆಗೆ ಕರೆದೊಯ್ದು, ಪರೀಕ್ಷಿಸಿ ಮುಂದಿನ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುವುದು.

ಮಡಿಕೇರಿ: 10 ಕೊರೋನಾ ಟೆಸ್ಟ್ ಫಲಿ​ತಾಂಶ ನೆಗೆ​ಟಿ​ವ್‌

ಈ ಕಾರ್ಯ ಕೊರೋನಾ ಸೋಂಕು ತೊಲಗುವವರೆವಿಗೂ ಲಭ್ಯವಿರುತ್ತದೆ. ಇವೆಲ್ಲವೂ ಉಚಿತಸೇವೆಯಾಗಿದ್ದು, ಮೈಸೂರು ನಗರದಲ್ಲಿನ ನಿವಾಸಿಗಳು ಮಾತ್ರ ಸಂಪರ್ಕಿಸಬಹುದು. ಸುಯೋಗ್‌ ಆಸ್ಪತ್ರೆಗೆ ಬರುವವರೆಲ್ಲರಿಗೂ ಕೊರೋನಾ ಸಾಧ್ಯತೆಗಾಗಿ ಆಸ್ಪತ್ರೆಯ ಮುಂಭಾಗದಲ್ಲಿಯೇ ತಪಾಸಣಾ ವಿಭಾಗವನ್ನು ತೆರೆಯಲಾಗಿದೆ. ಸಾರ್ವಜನಿಕರು ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕಾಗಿ ಆಸ್ಪತ್ರೆಯ ಅಧ್ಯಕ್ಷ ಡಾ.ಎಸ್‌.ಪಿ. ಯೋಗಣ್ಣ ತಿಳಿಸಿದ್ದಾರೆ.

click me!