ವಿಕ್ಟೋರಿಯಾ ಆಸ್ಪತ್ರೆ ಕೊರೋನಾ ವಾರಿಯರ್ಸ್‌ಗೆ ರಾಜೀವ್ ಚಂದ್ರಶೇಖರ್ ಅನಂತ ಧನ್ಯವಾದ

Published : Apr 07, 2020, 06:20 PM ISTUpdated : Apr 07, 2020, 06:25 PM IST
ವಿಕ್ಟೋರಿಯಾ ಆಸ್ಪತ್ರೆ ಕೊರೋನಾ ವಾರಿಯರ್ಸ್‌ಗೆ ರಾಜೀವ್ ಚಂದ್ರಶೇಖರ್ ಅನಂತ ಧನ್ಯವಾದ

ಸಾರಾಂಶ

ಕೊರೋನಾ ವಿರುದ್ಧ ನಿರಂತರ ಹೋರಾಟ ಮಾಡುತ್ತಿರುವ ವೈದ್ಯ ಸಿಬ್ಬಂದಿಗೆ ಸಂಸದ ರಾಜೀವ್ ಚಂದ್ರಶೇಖರ್ ಧನ್ಯವಾದ/ ವಿಕ್ಟೋರಿಯಾ ಆಸ್ಪತ್ರೆ ವೈದ್ಯರ ಕೆಲಸ ಕೊಂಡಾಡಿದ ಸಂಸದ/ ಕೊರೋನಾ ವಿರುದ್ಧದ ಹೋರಾಟಕ್ಕೆ ಎಲ್ಲರ ಸಹಕಾರ ಬೇಕು/ ಮನೆಯಿಂದ ಹೊರಬರಬೇಡಿ

ಬೆಂಗಳೂರು(ಏ. 07) ಕೊರೋನಾ ವೈರಸ್ ವಿರುದ್ಧ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹೋರಾಟ ಮಾಡಿಕೊಂಡೇ ಬಂದಿವೆ.  ಸಂಸದ ರಾಜೀವ್ ಚಂದ್ರಶೇಖರ್ ಸಹ ವಿಡಿಯೋ ಸಂದೇಶಗಳ ಮೂಲಕ ಆಗಾಗ ಜನರನ್ನು ಜಾಗೃತಗೊಳಿಸುತ್ತಲೇ ಬಂದಿದ್ದಾರೆ.

ಕೊರೋನಾ ವೈರಸ್ ವಿರುದ್ಧ ಹೋರಾಟ ಮಾಡುತ್ತಿರುವ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ವೈದ್ಯರು, ದಾದಿಯರು ಸೇರಿದಂತೆ ಎಲ್ಲ ಸಿಬ್ಬಂದಿಗೆ ಸಂಸದ ರಾಜೀವ್ ಚಂದ್ರಶೇಖರ್ ಧನ್ಯವಾದ ಸಲ್ಲಿಸಿದ್ದಾರೆ. 

ಮನೆಯೊಳಗೆ ಯಾಕಿರಬೇಕು? ತಿಳಿಸಿಕೊಟ್ಟ ರಾಜೀವ್ ಚಂದ್ರಶೇಖರ್

ನಾವೆಎಲ್ಲರೂ ಮನೆಯಲ್ಲೆ ಇದ್ದು ಸರ್ಕಾರದ ಹೋರಾಟಕ್ಕೆ ಕೈಜೋಡಿಸಬೇಕಾಗಿದೆ. ಆ ಕೆಲಸ ಮಾಡಿಕೊಂಡು ಬಂದಿದ್ದೇವೆ. ಇದೆಲ್ಲದರ ನಡುವೆ ತಮ್ಮ ಎಲ್ಲ ಹಿತಾಸಕ್ತಿ ತೊರೆದು ನಿಗದಿಗಿಂತ ಹೆಚ್ಚಿನ ಅವಧಿ ಕೆಲಸ ಮಾಖಡುತ್ತಿರುವ ವಿಕ್ಟೋರಿಯಾ ಆಸ್ಪತ್ರೆಯ ಸಿಬ್ಬಂದಿಗೆ ಧನ್ಯವಾದ ಸಲ್ಲಿಸುವುದು ನಮ್ಮ ಕರ್ತವ್ಯ ಎಂದು ರಾಜೀವ್ ಚಂದ್ರಶೇಖರ್ ತಿಳಿಸಿದ್ದಾರೆ.

ಬೆಂಗಳೂರು ಮಹಾನಗರವನ್ನು ವೈದ್ಯ ಸಿಬ್ಬಂದಿ ಸೇಫ್ ಮಾಡಿದ್ದಾರೆ. ನಮ್ಮ ಬೆಂಗಳೂರು ಕಾಪಾಡುವ ಜವಾಬ್ದಾರಿ ನಮ್ಮೆಲ್ಲರದ್ದು. ಸರ್ಕಾರದೊಂದಿಗೆ ಕೈ ಜೋಡಿಸಿ ಈ ಮಹಾಮಾರಿಯಿಂದ ಮುಕ್ತಿ ಕಾಣಬೇಕು ಎಂದು ರಾಜೀವ್ ಚಂದ್ರಶೇಖರ್ ತಿಳಿಸಿದ್ದಾರೆ.

"

 

"

PREV
click me!

Recommended Stories

ವೈರಸ್‌ ಕಾಟ: ಕೊರೋನಾ ತಡೆಗೆ ಸಾರ್ವಜನಿಕರ ಸಹಕಾರ ಅಗತ್ಯ, ಸಚಿವ ಪಾಟೀಲ್‌
ಮತ್ತೆ ಕೊರೋನಾರ್ಭಟ: ಪೂಲಿಂಗ್ ಟೆಸ್ಟ್ ಮೊರೆಹೋದ ಆರೋಗ್ಯ ಇಲಾಖೆ, ಏನಿದು ಹೊಸ ಪರೀಕ್ಷೆ?