ರಾಜ್ಯದಲ್ಲಿ ಕೊರೋನಾಗೆ 2ನೇ ಬಲಿ? ಗೌರಿಬಿದನೂರಿನ ವೃದ್ಧೆ ಸಾವು

Suvarna News   | Asianet News
Published : Mar 25, 2020, 11:24 AM ISTUpdated : Mar 25, 2020, 01:42 PM IST
ರಾಜ್ಯದಲ್ಲಿ ಕೊರೋನಾಗೆ 2ನೇ ಬಲಿ? ಗೌರಿಬಿದನೂರಿನ ವೃದ್ಧೆ ಸಾವು

ಸಾರಾಂಶ

ಹೋಂ ಕ್ವಾರಂಟೈನ್‌ನಲ್ಲಿದ್ದ 70 ವರ್ಷದ ಕೊರೋನಾ ಶಂಕಿತ ಮಹಿಳೆ ಸಾವು| ಬೆಂಗಳೂರಿನ ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ಸಾವು| ಮೆಕ್ಕಾ ಪ್ರವಾಸದಿಂದ ಬಂದಿದ್ದ ವೃದ್ದೆ| 

ಬೆಂಗಳೂರು(ಮಾ.25): ಹೋಂ ಕ್ವಾರಂಟೈನ್‌ನಲ್ಲಿದ್ದ 70 ವರ್ಷದ ಕೊರೋನಾ ಶಂಕಿತ ಮಹಿಳೆಯೊಬ್ಬರು ಇಂದು(ಬುಧವಾರ) ನಗರದ ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಇತ್ತೀಚೆಗಷ್ಟೇ ಈ ಮಹಿಳೆ ಮೆಕ್ಕಾ ಪ್ರವಾಸದಿಂದ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿಗೆ ಬಂದಿದ್ದರು. 

 

ಪ್ರವಾಸದಿಂದ ಬಂದ ಬಳಿಕ ವೃದ್ಧೆಗೆ ಕೆಮ್ಮು, ನೆಗಡಿ, ಜ್ವರದದಿಂದ ಬಳಲುತ್ತಿದ್ದಳು. ಹೀಗಾಗಿ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ವೃದ್ಧೆಯನ್ನ ಹೋಂ ಕ್ವಾರಂಟೈನ್‌ನಲ್ಲಿ ಇಡಲಾಗಿತ್ತು. ಆದರೆ, ನಿನ್ನೆ(ಮಂಗಳವಾರ) ವೃದ್ಧೆಯ ಆರೋಗ್ಯದಲ್ಲಿ ಏರುಪೇರಾದ ಕಾರಣ ಬೆಂಗಳೂರಿನ ರಾಜೀವ್ ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಈ ವೃದ್ಧೆ ಸಾವನ್ನಪ್ಪಿದ್ದಾಳೆ ಎಂದು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಆರ್. ಲತಾ ಅವರು ಹೇಳಿದ್ದಾರೆ. 

ಉಡುಪಿ: ಒಂದೇ ದಿನ 25 ಮಂದಿ ಕೊರೋನಾ ಶಂಕಿತರು ಆಸ್ಪತ್ರೆಗೆ

ಪರೀಕ್ಷೆಯ ವರದಿ ಬಂದ ಬಳಿಕ ಕೊರೋನಾ ವೈರಸ್‌ನಿಂದ ಮೃತಪಟ್ಟಿದ್ದಾರಾ ಎಂಬುದಕ್ಕೆ ಮಾಹಿತಿ ಸಿಗಲಿದೆ. ಇದುವರೆಗೆ ರಾಜ್ಯದಲ್ಲಿ ಕೊರೋನಾಗೆ ಕಲಬುರಗಿಲ್ಲಿ ಒಬ್ಬರು ಬಲಿಯಾಗಿದ್ದಾರೆ. 
 

PREV
click me!

Recommended Stories

ವೈರಸ್‌ ಕಾಟ: ಕೊರೋನಾ ತಡೆಗೆ ಸಾರ್ವಜನಿಕರ ಸಹಕಾರ ಅಗತ್ಯ, ಸಚಿವ ಪಾಟೀಲ್‌
ಮತ್ತೆ ಕೊರೋನಾರ್ಭಟ: ಪೂಲಿಂಗ್ ಟೆಸ್ಟ್ ಮೊರೆಹೋದ ಆರೋಗ್ಯ ಇಲಾಖೆ, ಏನಿದು ಹೊಸ ಪರೀಕ್ಷೆ?