ಕೊರೋನಾ ತಾಂಡವ: ಸದ್ಯ ಭಾರತದ ಸ್ಥಿತಿಗತಿ ಹೇಗಿದೆ? ರಾಜ್ಯವಾರು ಚಿತ್ರಣ

By Kannadaprabha NewsFirst Published Mar 24, 2020, 10:28 AM IST
Highlights

ಚೀನಾದಲ್ಲಿ ಕಂಡು ಬಂದ ಮಾರಕ ಕೊರೋನಾ ಸದ್ಯ ಭಾರತದಲ್ಲೂ ಅಟ್ಟಹಾಸ ಆರಂಭಿಸಿದೆ. ಈ ಮಾರಕ ವೈರಸ್‌ಗೆ ಒಂಭತ್ತು ಮಂದಿ ಬಲಿಯಾಗಿದ್ದು, ನಾಲ್ನೂರಕ್ಕೂ ಅಧಿಕ ಮಂದಿಗೆ ಸೋಂಕು ತಗುಲಿದೆ. ಹೀಗಿರುವಾಗ ಭಾರತದಲ್ಲಿ ರಾಜ್ಯವಾರು ಸ್ಥಿತಿಗತಿ ಹೇಗಿದೆ? ಇಲ್ಲಿದೆ ಒಂದು ನೋಟ

ಆಂಧ್ರಪ್ರದೇಶ: ಪ್ರಕರಣ: 6: 

ಕೊರೋನಾ ತಡೆಗೆ ಕ್ರಮ:

- ರಾಜ್ಯಕ್ಕೆ ಸಂಪರ್ಕಿಸುವ ಹೊರರಾಜ್ಯಗಳ ಎಲ್ಲ ಗಡಿಗಳು ಬಂದ್‌

- ತಿರುಪತಿ ತಿರುಮಲ, ಶ್ರೀಶೈಲ ದೇವಸ್ಥಾನ ಸೇರಿ ಪ್ರಮುಖ ದೇವಾಲಯಗಳಲ್ಲಿ ಭಕ್ತರ ಪ್ರವೇಶ ನಿಷೇಧ

- ವಿದೇಶದಿಂದ ಬಂದವರು ಮನೆಯಲ್ಲೇ ಕಡ್ಡಾಯವಾಗಿ ಇರಬೇಕು

- ಮಾ.31ರವರೆಗೆ ಚಿತ್ರಮಂದಿರಗಳು, ಮಾಲ್‌, ವ್ಯಾಪಾರ ಮಳಿಗೆಗಳು, ಶಾಲೆಗಳು ಬಂದ್‌

ಬಿಹಾರ: ಪ್ರಕರಣ: 3: ಸಾವು: 1

ಕೊರೋನಾ ತಡೆಗೆ ಕ್ರಮ:

- ಬಿಹಾರದ ನಗರ ಪ್ರದೇಶಗಳೆಲ್ಲ ಮಾ.31ರವರೆಗೆ ಲಾಕ್‌ಡೌನ್‌

- ಬಸ್ಸುಗಳು, ಆಟೋಗಳು ನಗರಗಳಲ್ಲಿ ಸಂಚರಿಸುವಂತಿಲ್ಲ

- ನಿಷೇಧ ಉಲ್ಲಂಘಿಸಿ ಬಸ್ಸು, ವಾಹನ ಓಡಿಸಿದರೆ ಪೊಲೀಸರಿಂದ ಜಪ್ತಿ

- ನಗರಗಳಲ್ಲಿ ಅಗತ್ಯ ಸೇವೆ ಹೊರತುಪಡಿಸಿ ಮಿಕ್ಕೆಲ್ಲ ಸೇವೆಗಳು ಬಂದ್‌

ಪ.ಬಂಗಾಳ: ಪ್ರಕರಣ: 7

ಕೊರೋನಾ ತಡೆಗೆ ಕ್ರಮ:

- ಮಾ.27ರವರೆಗೆ ರಾಜ್ಯದ ನಗರ ಪ್ರದೇಶಗಳು, ಕೆಲ ಗ್ರಾಮೀಣ ಪ್ರದೇಶಗಳು ಲಾಕೌಟ್‌

- ಸರ್ಕಾರಿ ಸಾರಿಗೆ, ಟ್ಯಾಕ್ಸಿ, ಆಟೋ ರಿಕ್ಷಾ ಸೇವೆಗಳು ಇರಲ್ಲ

-ಆಹಾರ, ವೈದ್ಯಕೀಯ ಸಾಮಗ್ರಿ ಸಾಗಿಸುವ ಗೂಡ್ಸ್‌ ವಾಹನಗಳಿಗೆ ಮಾತ್ರ ಅವಕಾಶ

-ಖಾಸಗಿ ಕಚೇರಿಗಳು, ಉದ್ಯಮಗಳು, ಎಲ್ಲ ಅಂಗಡಿಗಳು ಬಂದ್‌

-ನಿಯಮ ಉಲ್ಲಂಘಿಸಿದವರಿಗೆ ಕಠಿಣ ಶಿಕ್ಷೆ

---

ತೆಲಂಗಾಣ: ಪ್ರಕರಣ: 33: ಗುಣಮುಖ: 1

ಕೊರೋನಾ ತಡೆಗೆ ಕ್ರಮ:

-ಸೋಮವಾರದಿಂದ ತಿಂಗಳಾಂತ್ಯದವರೆಗೆ ರಾಜ್ಯ ಸಂಪೂರ್ಣ ಬಂದ್‌

- ಸರ್ಕಾರಿ ಬಸ್ಸುಗಳು, ಮೆಟ್ರೋ, ಟ್ಯಾಕ್ಸಿಗಳು ಆಟೋ ರಿಕ್ಷಾ, ಅಂಗಡಿ, ಉದ್ದಿಮೆ, ಕಚೇರಿ ಬಂದ್‌

-ವೈದ್ಯಕೀಯ, ದಿನಸಿ-ತರಕಾರಿ ಸೇರಿ ಇತರೆ ಅಂಗಡಿಗಳ ಸೇವೆಗಳಿಗೆ ಅಡಚಣೆಯಿಲ್ಲ

-ಬ್ಯಾಂಕ್‌, ಎಟಿಎಂಗಳು, ಮಾಧ್ಯಮಗಳು, ಐಟಿ, ಟೆಲಿಕಾಂ ಸೇವೆಗಳು ಯಥಾಸ್ಥಿತಿ

ಪುದುಚೇರಿ: ಪ್ರಕರಣ: 1

ಕೊರೋನಾ ತಡೆಗೆ ಕ್ರಮ:

- ಪುದುಚೇರಿ ಕೇಂದ್ರಾಡಳಿತ ಮಾ.31ರವರೆಗೆ ಪೂರ್ಣ ಪ್ರಮಾಣದಲ್ಲಿ ಬಂದ್‌

- ಎಲ್ಲಾ ಜನನಿಬಿಡ ಸ್ಥಳಗಳಲ್ಲಿ ಕಫä್ರ್ಯ ಜಾರಿ

- ಬಾರ್‌, ಕಾರ್ಖಾನೆಗಳು, ಉತ್ಪಾದನಾ ಕೇಂದ್ರಗಳು ಬಂದ್‌

- ಕಿರಾಣಿ, ತರಕಾರಿ, ಔಷಧ ಅಂಗಡಿ, ಹಾಲು-ಮೊಸರು ಮಾರಾಟ ಕೇಂದ್ರಗಳು, ಪೆಟ್ರೋಲ್‌ ಬಂಕ್‌, ಅಡುಗೆ ಅನಿಲ ಏಜೆನ್ಸಿಗಳಿಗೆ ವಿನಾಯ್ತಿ

- ಮುನ್ನೆಚ್ಚರಿಕಾ ಕ್ರಮವಾಗಿ 150 ಹಾಸಿಗೆಗಳ ಕೊಠಡಿ ಸಿದ್ಧ

ಕೇರಳ:  ಪ್ರಕರಣ: 91: ಗುಣಮುಖ: 3

ಕೊರೋನಾ ತಡೆಗೆ ಕ್ರಮ:

- ಕೇರಳದಾದ್ಯಂತ ಲಾಕ್‌ಡೌನ್‌ ಜರಿ

- ಹೆಚ್ಚು ಪ್ರಕರಣ ದಾಖಲಾಗಿರುವ ಕಾಸರಗೋಡಿನಲ್ಲಿ ಕಠಿಣ ನಿರ್ಬಂಧ ಕ್ರಮ

- ಅತ್ಯ ಸೇವೆ ಬಿಟ್ಟು ಮಿಕ್ಕ ಎಲ್ಲ ಸೇವೆಗಳು ಬಂದ್‌

- ಹೊರರಾಜ್ಯ ಸಂಪರ್ಕಿಸುವ ರಾಜ್ಯದ ಎಲ್ಲ ಗಡಿಗಳು ಬಂದ್‌

- ಕೊರೋನಾ ತಪಾಸಣೆಯನ್ನು ತೀವ್ರಗೊಳಿಸಲು ಕ್ರಮ

ಚಂಡೀಗಢ: ಪ್ರಕರಣ: 7

ಕೊರೋನಾ ತಡೆಗೆ ಕ್ರಮ:

- ಕೇಂದ್ರಾಡಳಿತಕೆ ಒಳಪಟ್ಟಚಂಡೀಗಢ ನಗರದಾದ್ಯಂತ ಕಫä್ರ್ಯ

- ಅಗತ್ಯ ವಸ್ತುಗಳ ವ್ಯವಹಾರಕ್ಕೆ ಮಾತ್ರ ಅವಕಾಶ

- ಸಾರಿಗೆ ಸೇವೆ, ಅಂಗಡಿ-ಮುಂಗಟ್ಟು, ಕಚೇರಿಗಳು ಬಂದ್‌

- ತುರ್ತು ಸಂದರ್ಭ ಹೊರತುಪಡಿಸಿ ಮಿಕ್ಕ ವೇಳೆ ಜನರು ಮನೆಯಿಂದ ಹೊರಬರುವಂತಿಲ್ಲ

ಜಮ್ಮು-ಕಾಶ್ಮೀರ: ಪ್ರಕರಣ: 4

ಕೊರೋನಾ ತಡೆಗೆ ಕ್ರಮ:

- ಕೊರೋನಾ ಕೇಸು ಪತ್ತೆ ಆದ ಶ್ರೀನಗರ ಸಂಪೂರ್ಣ ಲಾಕ್‌ಡೌನ್‌

- ಸರ್ಕಾರಿ ಸಾರಿಗೆ, ಮಾರುಕಟ್ಟೆಗಳು ಸೇರಿದಂತೆ ಇನ್ನಿತರ ಸೇವೆಗಳು ಬಂದ್‌

- ಅಗತ್ಯ, ತುರ್ತು ಸೇವೆಗಳು ಮಾತ್ರ ಲಭ್ಯ

- ರಾಜ್ಯದ ಉಳಿದೆಡೆ ಭಾಗಶಃ ಪ್ರತಿಬಂಧಕಾಜ್ಞೆ

ಛತ್ತೀಸ್‌ಗಢ: ಪ್ರಕರಣ: 1

ಕೊರೋನಾ ತಡೆಗೆ ಕ್ರಮ:

- 28 ಜಿಲ್ಲೆಗಳ ನಗರ ಪ್ರದೇಶದ ವ್ಯಾಪ್ತಿಯಲ್ಲಿ ಮಾ.31ರವರೆಗೆ ಸಂಪೂರ್ಣ ನಿರ್ಬಂಧ

- ಸರ್ಕಾರಿ-ಖಾಸಗಿ ಬಸ್ಸು, ಆಟೋ, ಇ-ರಿಕ್ಷಾಗಳು, ಬಾಡಿಗೆ ಟ್ಯಾಕ್ಸಿ ಸೇವೆ ಬಂದ್‌

- ಅತ್ಯಗತ್ಯ ಸೇವೆಗಳಿಗೆ ಯಾವುದೇ ನಿರ್ಬಂಧ ಇಲ್ಲ

- ಜನ ಸಾಮಾನ್ಯರಿಗೆ 2 ತಿಂಗಳ ಪಡಿತರ ವಿತರಣೆಗೆ ವ್ಯವಸ್ಥೆ.

ದಿಲ್ಲಿ: ಪ್ರಕರಣ: 30: ಗುಣಮುಖ: 5: ಸಾವು: 1

ರೋಗ ತಡೆಗೆ ಕ್ರಮ:

- ಮಾ.31ರವರೆಗೂ ದಿಲ್ಲಿ ಬಂದ್‌

- ಡೈರಿಗಳು, ದಿನಸಿ ಅಂಗಡಿಗಳು, ವೈದ್ಯಕೀಯ, ಪೆಟ್ರೋಲ್‌ ಪಂಪ್‌, ಎಟಿಎಂಗಳು ಮಾತ್ರ ಓಪನ್‌

- ಕೈಗಾರಿಕೆಗಳು, ಕಚೇರಿಗಳು, ಕಂಪನಿಗಳು, ಶಾಪಿಂಗ್‌ ಮಾಲ್‌ಗಳು ಬಂದ್‌

- ಮೆಟ್ರೋ, ಆಟೋ, ಬಾಡಿಗೆ ಕಾರು ಸೇವೆಯ ಓಲಾ, ಊಬರ್‌ ಸೇವೆ ಸ್ತಬ್ಧ

- ಏಮ್ಸ್‌ ಆಸ್ಪತ್ರೆಯ ಹೊರರೋಗಿಗಳ ವಿಭಾಗ ಬಂದ್‌, ವಿಶೇಷ ಸೇವೆಗಳು ಸೇರಿ ಇನ್ನಿತರ ಸೇವೆಗಳು ಸಹ ಸ್ಥಗಿತ

ಗುಜರಾತ್‌: ಪ್ರಕರಣ: 29: ಸಾವು: 1

ಕೊರೋನಾ ತಡೆಗೆ ಕ್ರಮ:

- ರಾಜ್ಯದ 6 ಕೊರೋನಾ ಬಾಧಿತ ಜಿಲ್ಲೆಗಳಲ್ಲಿ ಮಾ.31ರವರೆಗೆ ಲಾಕ್‌ಡೌನ್‌

- ಈ ಜಿಲ್ಲೆಗಳಿಗೆ ಉಳಿದ ಜಿಲ್ಲೆಗಳಿಂದ ಸಂಚಾರ ನಿರ್ಬಂಧ

- ಅಗತ್ಯವಲ್ಲದ ಕೆಲಸಗಳಿಗೆ ಜನರು ಮನೆಯಿಂದ ಹೊರಬರದಂತೆ ಸೂಚನೆ

- ಜನರಿಗೆ ಅನ್ಯ ಊರುಗಳು, ರಾಜ್ಯಗಳಿಗೆ ತೆರಳದಂತೆ ಮನವಿ

ಗೋವಾ: ಪ್ರಕರಣ: 0

ಕೊರೋನಾ ತಡೆಗೆ ಕ್ರಮ:

- ಮಾಚ್‌ರ್‍ 25ರವರೆಗೆ ‘ಜನತಾ ಕಫä್ರ್ಯ’ ಜಾರಿ

- ಬೆಳಗ್ಗೆ 7ರಿಂದ 10ರವರೆಗೆ ಮಾತ್ರ ಅಗತ್ಯವಸ್ತು ಖರೀದಿಗೆ ಅವಕಾಶ

- ಮಿಕ್ಕ ಎಲ್ಲ ಸಮಯದಲ್ಲಿ ಮಾರುಕಟ್ಟೆ, ವ್ಯಾಪಾರ ವಹಿವಾಟು ಬಂದ್‌

- ರಾಜ್ಯದ ಎಲ್ಲ ಗಡಿಗಳು ಬಂದ್‌

- ಬಸ್‌, ಟ್ಯಾಕ್ಸಿ ಸೇವೆ ಸ್ಥಗಿತ

ಹರ್ಯಾಣ: ಪ್ರಕರಣ: 26

ಕೊರೋನಾ ತಡೆಗೆ ಕ್ರಮ:

-ಮಂಗಳವಾರದಿಂದ ಮಾ.31ರವರೆಗೆ ರಾಜ್ಯದ 22 ಜಿಲ್ಲೆಗಳು ಬಂದ್‌

-ಅಂತರ್‌ ರಾಜ್ಯಗಳ ಗಡಿಗಳಿಗೆ ಸೀಲ್‌, ಅಂತಾರಾಜ್ಯ ಬಸ್‌ ಸೇವೆಗೂ ಕಡಿತ

-ತುರ್ತು ಅಗತ್ಯ ಸೇವೆಗಳಿಗೆ ಮಾತ್ರವೇ ಅವಕಾಶ

ಹಿಮಾಚಲ ಪ್ರದೇಶ: ಪ್ರಕರಣ: 2: ಸಾವು: 1

ಕೊರೋನಾ ತಡೆಗೆ ಕ್ರಮ:

- ಅನಿರ್ದಿಷ್ಟಾವಧಿ ಸಂಪೂರ್ಣ ಲಾಕ್‌ಡೌನ್‌

- ಅಗತ್ಯ ವಸ್ತುಗಳ ಸೇವೆ ಅಭಾದಿತ

- ವೈದ್ಯಕೀಯ ಸೂಚನೆ ಪಾಲಿಸದಿದ್ದರೆ ಕ್ರಮ

- ಎಲ್ಲಾ ಆಚೇರಿ ಬಂದ್‌, ಆದರೆ ರಜೆ ನೆಪದಲ್ಲಿ ನೌಕರರ ಸಂಬಳ ಕಟ್‌ ಮಾಡುವಂತಿಲ್ಲ

ಕರ್ನಾಟಕ: ಪ್ರಕರಣ: 33: ಸಾವು: 1: ಗುಣಮುಖ: 2

ಕೊರೋನಾ ತಡೆಗೆ ಕ್ರಮ:

- ಮಾ.31ರವರೆಗೆ 9 ಜಿಲ್ಲೆಗಳಲ್ಲಿ ಸಂಪೂರ್ಣ ಕಫä್ರ್ಯ ಮಾದರಿ ಲಾಕ್‌ಡೌನ್‌

- ಮಿಕ್ಕ ಜಿಲ್ಲೆಗಳಲ್ಲಿ ಭಾಗಶಃ ಲಾಕ್‌ಡೌನ್‌ ಜಾರಿ

- ಅಗತ್ಯಸೇವೆ ಹೊರತುಪಡಿಸಿ ಮಿಕ್ಕೆಲ್ಲ ಸೇವೆಗಳು ಬಂದ್‌

- ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿ ಸೇವೆ ಮಾ.31ರವರೆಗೆ ಬಂದ್‌

ಮಧ್ಯಪ್ರದೇಶ: ಪ್ರಕರಣ: 6

ಕೊರೋನಾ ತಡೆಗೆ ಕ್ರಮ:

- 52 ಜಿಲ್ಲೆಗಳ ಪೈಕಿ 36 ಜಿಲ್ಲೆಗಳು ಲಾಕ್‌ಡೌನ್‌

- ಕೆಲ ಜಿಲ್ಲೆಗಳಲ್ಲಿ 4 ದಿನ, ಕೆಲ ಜಿಲ್ಲೆ ಮಾಚ್‌ರ್‍ 31ರವರೆಗೆ ಪ್ರತಿಬಂಧಕಾಜ್ಞೆ

- ಕೆಲ ಜಿಲ್ಲೆ ಏ.3, ಕೆಲ ಜಿಲ್ಲೆಗಳು ಅನಿರ್ದಿಷ್ಟಾವಧಿ ಸ್ತಬ್ಧ

- ತುರ್ತು ಸಂದರ್ಭದಲ್ಲಿ ಮಾತ್ರ ಜನರು ಮನೆಯಿಂದ ಹೊರಬರಬೇಕು

- ಅಗತ್ಯ ಸೇವೆ ಹೊರತುಪಡಿಸಿ ಮಿಕ್ಕ ಸೇವೆಗಳು ಸ್ತಬ್ಧ

ಮಹಾರಾಷ್ಟ್ರ: ಪ್ರಕರಣ: 97: ಗುಣಮುಖ: 5: ಸಾವು: 3

ಕೊರೋನಾ ತಡೆಗೆ ಕ್ರಮ:

- ರಾಜ್ಯಾದ್ಯಂತ ಮುಂಜಾಗ್ರತಾ ಕ್ರಮವಾಗಿ ಕಫä್ರ್ಯ ಜಾರಿ

- ಅಗತ್ಯ ಸೇವೆ ಹೊರತುಪಡಿಸಿ ಮಿಕ್ಕ ಎಲ್ಲ ಸೇವೆಗಳು ಬಂದ್‌

- ಎಲ್ಲ ಉದ್ದಿಮೆಗಳು, ಕಚೇರಿಗಳು, ಖಾಸಗಿ ಸಂಸ್ಥೆಗಳು, ಅಂಗಡಿಗಳು ಬಂದ್‌

- ಮನೆಯಿಂದ ಯಾರೂ ಹೊರಬರುವಂತಿಲ್ಲ

- ಅಂತಾರಾಜ್ಯ ಗಡಿಗಳೂ ಬಂದ್‌

ಒಡಿಶಾ: ಪ್ರಕರಣ: 2: 

ಕೊರೋನಾ ತಡೆಗೆ ಕ್ರಮಗಳು

- 14 ಜಿಲ್ಲೆಗಳು ಲಾಕ್‌ಡೌನ್‌

- ಬಸ್ಸು ಹಾಗೂ ರೈಲು ಸೇವೆಗಳು ಸಂಪೂರ್ಣ ಸ್ತಬ್ಧ; ತುರ್ತು ಸೇವೆಗಳು ಮಾತ್ರ ಮುಕ್ತ

- ಕ್ವಾರಂಟೈನ್‌ನಲ್ಲಿರುವ ಜನರ ಮನೆ ಮೇಲೆ ಸ್ಟಿಕ್ಕರ್‌ ಅಂಟಿಸಿ ಜನರಲ್ಲಿ ಜಾಗೃತಿ ಮೂಡಿಸುವಿಕೆ

ರಾಜಸ್ಥಾನ: ಪ್ರಕರಣ: 29: ಗುಣಮುಖ: 2

ಕೊರೋನಾ ತಡೆಗೆ ಕ್ರಮ:

- ಭಾನುವಾರದಿಂದ ಮಾ.31ರ ವರೆಗೆ ರಾಜ್ಯವೇ ಲಾಕ್‌ಡೌನ್‌

- ಬಂದ್‌ ಪಾಲಿಸದಿದ್ದರೆ ಕೇಸ್‌

- ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಡಿದರೆ ಕ್ರಮ

- ಸರ್ಕಾರಿ ಕಚೇರಿ, ಮಾಲ್‌, ಸಾರ್ವಜನಿಕ ಸಾರಿಗೆ ಸ್ತಬ್ಧ

- ಅಗತ್ಯ ಸೇವೆಗಳಿಗೆ ತೊಂದರೆ ಇಲ್ಲ

ಪಂಜಾಬ್‌: ಪ್ರಕರಣ: 21: ಸಾವು: 1

ಕೊರೋನಾ ತಡೆಗೆ ಕ್ರಮ:

- ಮಂಗಳವಾರದಿಂದ ಮಾಸಾಂತ್ಯದವರಗೆ ಕಫä್ರ್ಯ

- ಅಗತ್ಯ ಸೇವೆ ಮಾತ್ರ ಲಭ್ಯ, ಸಾರ್ವಜನಿಕ ಸಾರಿಗೆ ಇಲ್ಲ

- ಸರ್ಕಾರಿ ಕಚೇರಿಗೆ ಸಾರ್ವಜನಿಕರ ಪ್ರವೇಶ ಇಲ್ಲ

- 10, 12ನೇ ತರಗತಿ ಪರೀಕ್ಷೆ ಮುಂದಕ್ಕೆ

ತಮಿಳುನಾಡು: ಪ್ರಕರಣ: 8: ಗುಣಮುಖ: 1

ಕೊರೋನಾ ತಡೆಗೆ ಕ್ರಮ:

- ಮಂಗಳವಾರದಿಂದ ಮಾ.31ರ ವರೆಗೆ ಸಂಪೂರ್ಣ ಲಾಕ್‌ಡೌನ್‌

- ಸೆಕ್ಷನ್‌ 144 ಜಾರಿ, ಜಿಲ್ಲೆ ಹಾಗೂ ಅಂತಾರಾಜ್ಯ ಗಡಿಗಳು ಬಂದ್‌

- ಅಗತ್ಯ ಸೇವೆ ಬಿಟ್ಟು ಎಲ್ಲಾ ಉದ್ಯಮಗಳು ಸ್ಥಗಿತ

ಲಡಾಖ್‌: ಪ್ರಕರಣ: 13

ಕೊರೋನಾ ತಡೆಗೆ ಕ್ರಮ:

-ಮಾ.31ರವರೆಗೆ ಸಂಪೂರ್ಣ ಲಾಕ್‌ಡೌನ್‌

-ಲೇಹ್‌, ಕಾರ್ಗಿಲ್‌ ಜಿಲ್ಲೆಗಳಲ್ಲಿ ನಿಷೇಧಾಜ್ಞೆ

-ಅಗತ್ಯ ಸೇವೆಗಳಿಗೆ ಯಾವುದೇ ಬಾಧೆಯಿಲ್ಲ

ಉತ್ತರ ಪ್ರದೇಶ: ಪ್ರಕರಣ: 29: ಗುಣಮುಖ: 11

ಕೊರೋನಾ ತಡೆಗೆ ಕ್ರಮ:

- 16 ಜಿಲ್ಲೆಗಳಲ್ಲಿ ಲಾಕ್‌ಡೌನ್‌ ಘೋಷಣೆ

- ಅಯೋಧ್ಯೆ, ವಾರಾಣಸಿ ಸೇರಿ ಎಲ್ಲ ತೀರ್ಥಕ್ಷೇತ್ರಗಳು ಪ್ರವಾಸಿಗರಿಗೆ ನಿರ್ಬಂಧ

- ಕಾಶಿ ವಿಶ್ವನಾಥ ಸೇರಿ ಅನೇಕ ಅನೇಕ ಪ್ರಸಿದ್ಧ ದೇವಾಲಯಗಳು ಬಂದ್‌

- ಲಾಕ್‌ಡೌನ್‌ ಆದ ಜಿಲ್ಲೆಗಳಲ್ಲಿ ಅಗತ್ಯ ಸೇವೆ ಬಿಟ್ಟು ಉಳಿದ ಸೇವೆಗಳು ಸ್ತಬ್ಧ

ಉತ್ತರಾಖಂಡ: ಪ್ರಕರಣ: 3

ಕೊರೋನಾ ತಡೆಗೆ ಕ್ರಮ:

- ರಾಜ್ಯಾದ್ಯಂತ ಮಾ.31ರ ವರೆಗೆ ಸಂಪೂರ್ಣ ಬಂದ್‌

- ದಿನಸಿ, ಔಷಧ, ಹಣ್ಣು-ತರಕಾರಿ, ಬ್ಯಾಂಕ್‌ ಮತ್ತು ಎಟಿಎಂಗಳನ್ನು ಹೊರತು ಪಡಿಸಿ ಉಳಿದೆಲ್ಲಾ ಅಂಗಡಿಗಳು ಬಂದ್‌

- ವಾಹನಗಳ ಸಂಚಾರಕ್ಕೆ ಅವಕಾಶವಿಲ್ಲ

- 5ಕ್ಕಿಂತ ಹೆಚ್ಚು ಮಂದಿ ಸಾರ್ವಜನಿಕ ಪ್ರದೇಶದಲ್ಲಿ ಯಾವ ಕಾರಣಕ್ಕೂ ಸೇರುವಂತಿಲ್ಲ

- ಬೇರೆ ರಾಜ್ಯಗಳಿಂದ ಬರುವ ಎಲ್ಲಾ ವಾಹನಗಳಿಗೆ ಪ್ರವೇಶ ನಿರ್ಬಂಧ

ಅಸ್ಸಾಂ: ಪ್ರಕರಣ: 0

ಕೊರೋನಾ ತಡೆಗೆ ಕ್ರಮ:

- ದೀಮಾ ಹಸಾವೊ ಜಿಲ್ಲೆ ಮಂಗಳವಾರದಿಂದ 5 ದಿನ ಲಾಕ್‌ಡೌನ್‌

- ತುರ್ತು ಅಗತ್ಯ ಸೇವೆಗಳಾದ ಹಾಲು, ಪತ್ರಿಕೆ, ವೈದ್ಯಕೀಯ ಸೇರಿ ಇನ್ನಿತರ ಸೇವೆಗಳು ಲಭ್ಯ

- ಅಸ್ಸಾಂನ ಇತರ ಜಿಲ್ಲೆಗಳಿಂದ ಯಾವುದೇ ವಾಹನಕ್ಕೆ ದೀಮಾ ಜಿಲ್ಲೆಗೆ ಪ್ರವೇಶವಿಲ್ಲ

- ಈ ಭಾಗದ ಸರ್ಕಾರಿ ಸಿಬ್ಬಂದಿಗೆ ಮನೆಯಿಂದಲೇ ಕೆಲಸ ಮಾಡಲು ಅವಕಾಶ

ನಾಗಾಲ್ಯಾಂಡ್‌: ಪ್ರಕರಣ: 0

- ಮಾ.22ರಿಂದ ಮುಂದಿನ ಆದೇಶದವರೆಗೆ ಲಾಕೌಟ್‌

- ಕೈಗಾರಿಕೆಗಳು ಸೇರಿದಂತೆ ಇನ್ನಿತರ ಚಟುವಟಿಕೆಗಳಿಗೆ ನಿಷೇಧ

- ಮೆಡಿಕಲ್‌, ಪೆಟ್ರೋಲ್‌ ಪಂಪ್‌, ದಿನಸಿ ಅಂಗಡಿಗಳು, ಡೈರಿ, ಮಾಧ್ಯಮ ಕಚೇರಿಗಳಿಗೆ ವಿನಾಯ್ತಿ

- ಮುಂದಿನ ಆದೇಶದವರೆಗೂ ಖಾಸಗಿ, ಸಾರ್ವನಿಕ ಸಂಚಾರ ಸೇವೆಯೂ ಇಲ್ಲ

- ಮಣಿಪುರ, ಅಸ್ಸಾಂ, ಅರುಣಾಚಲ ಪ್ರದೇಶದ 14 ಅಂತರ್‌ ರಾಜ್ಯ ಗಡಿಗಳು ಬಂದ್‌

ಅರುಣಾಚಲ ಪ್ರದೇಶ: ಪ್ರಕರಣ: 0

- ಸೋಮವಾರ ಸಂಜೆಯಿಂದ ಮಾ.31ರ ವರೆಗೆ ಫುಲ್‌ ಲಾಕ್‌ಡೌನ್‌

- ಎಟಿಎಂ, ಆಹಾರೋತ್ಪನ್ನ, ವೈದ್ಯಕೀತ ಸೇವೆ ಎಂದಿನಂತೆ

- ಸಾರ್ವಜನಿಕ ಸಾರಿಗೆ, ಟಾಕ್ಸಿ, ಆಟೋ ಬಂದ್‌, ಅಂಗಡಿ, ಕಚೇರಿ, ಉದ್ದಿಮೆ ಬಂದ್‌

- ಸಾಮಾಜಿಕ ಅಂತರ ಕಡ್ಡಾಯ, ಅತ್ಯಗತ್ಯ ಹೊರೆತು ಮನೆಯಿಂದ ಹೊರ ಬರುವ ಹಾಗಿಲ್ಲ

- ಖಾಸಗಿ ಉದ್ಯೋಗಿಗಳೂ ಮನೆಯಲ್ಲೇ ಇರಬೇಕು. ಅವರ ವೇತನ ಕಡಿತ ಮಾಡುವಂತಿಲ್ಲ

ಮಿಜೋ​ರಂ: ಪ್ರಕರಣ 0:

ಕೊರೋನಾ ತಡೆಗೆ ಕ್ರಮ:

- ಕಚೇ​ರಿ​ಗ​ಳಲ್ಲಿ ಅರ್ಧ​ದಷ್ಟುಜನರು ಕಾರ್ಯ​ನಿ​ರ್ವ​ಹಿ​ಸಲು ಮಾತ್ರ ಅವ​ಕಾಶ. ಉಳಿ​ದ​ವ​ರಿಗೆ ವರ್ಕ್ ಫ್ರಂ ಹೋಮ್‌

- ಕೊರೋನಾ ವೈರಸ್‌ ಕಾಣಿ​ಸಿ​ಕೊಂಡ ರಾಜ್ಯ​ಗ​ಳಿಂದ ಬಂದ ಜನ​ರಿಗೆ ಸಾಮೂ​ಹಿಕ ಕ್ವಾರಂಟೈ​ನಲ್ಲಿ ಇಡಲು ವ್ಯವ​ಸ್ಥೆ

- ಹೊರ ರಾಜ್ಯ​ಗಳ ಜನರಿಗೆ ಸೋಂಕು ಇಲ್ಲ ಎಂಬು​ದನ್ನು ಖಚಿ​ತ​ಪ​ಡಿ​ಸಿ​ಕೊಂಡ ಬಳಿ​ಕ​ವೇ ವಾಸ್ತ​ವ್ಯಕ್ಕೆ ಅವ​ಕಾ​ಶ.

- ರಾಜ್ಯ ಮತ್ತು ಅಂತಾ​ರಾ​ಷ್ಟ್ರೀ​ಯ ಗಡಿಯ ಮೂಲಕ ಸಂಚ​ರಿ​ಸುವ ಎಲ್ಲಾ ವಾಹ​ನ​ಗಳ ತಾಪ​ಸ​ಣೆ

- ಅಗತ್ಯ ಸೇವೆ​ಗಳು, ಹೊರ ರಾಜ್ಯ​ಗ​ಳಲ್ಲಿ ಸಿಕ್ಕಿ​ಹಾ​ಕಿ​ಕೊಂಡ ಜನ​ರನ್ನು ಕರೆ​ತ​ರುವ ವಾಹ​ನ​ಗ​ಳಿ​ಗಷ್ಟೇ ಅವ​ಕಾ​ಶ

ಜಾರ್ಖಂಡ್‌: ಪ್ರಕರಣ: 0

ಕೊರೋನಾ ತಡೆಗೆ ಕ್ರಮ:

- ರಾಜ್ಯದಲ್ಲಿ ಯಾವುದೇ ಪ್ರಕರಣ ವರದಿಯಾಗದಿದ್ದರೂ ಮುಂಜಾಗ್ರತೆ ಕ್ರಮವಾಗಿ ಲಾಕ್‌ಡೌನ್‌

- ಲಾಕ್‌ಡೌನ್‌ ವೇಳೆ ಜನರಿಗೆ ತೊಂದರೆ ಆಗದಂತೆ ಊಟಕ್ಕೆ ರಾಜ್ಯಾದ್ಯಂತ 350 ಖಿಚಡಿ ಕೇಂದ್ರಗಳು

- ಅಗತ್ಯ ಸೇವೆಗಳನ್ನು ಹೊರತುಪಡಿಸಿ ಮಿಕ್ಕ ಸೇವೆಗಳು ಬಂದ್‌

- ಸಾರ್ವಜನಿಕ ಸಾರಿಗೆ, ರೈಲು ಸಂಪರ್ಕ ಸ್ಥಗಿತ

- ವದಂತಿ ಹರಡಿಸುವವರ ವಿರುದ್ಧ ಪೊಲೀಸರಿಂದ ಕೇಸು

ಮಣಿಪುರ: ಪ್ರಕರಣ: 0

ಕೊರೋನಾ ತಡೆಗೆ ಕ್ರಮ:

- ಮಾಚ್‌ರ್‍ 31ರವರೆಗೆ ರಾಜ್ಯ ಸಂಪೂರ್ಣ ಲಾಕ್‌ಡೌನ್‌

- ಲಾಕ್‌ಡೌನ್‌ ವ್ಯಾಪ್ತಿಯಿಂದ ಅಗತ್ಯ ಸೇವೆಗಳು ಹೊರಕ್ಕೆ

- ಏಪ್ರಿಲ್‌ ತಿಂಗಳಿನ ಪಡಿತರ ಅಕ್ಕಿ ಈಗಲೇ ಉಚಿತ ವಿತರಣೆ

- ಕಚೇರಿ ಬಂದ್‌; ಮನೆಯಲ್ಲೇ ಇದ್ದು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸೂಚನೆ

ಸಿಕ್ಕಿಂ: ಪ್ರಕರಣ: 0

ಕೊರೋನಾ ತಡೆಗೆ ಕ್ರಮ:

- ಸಿಕ್ಕಿಂಗೆ ವಿದೇಶೀಯರ ಪ್ರವೇಶ ನಿಷೇಧ

- ಚೀನಾ ಗಡಿಯಾದ ನಾಥು ಲಾ ಪಾಸ್‌ ಪ್ರವೇಶಕ್ಕೆ ಪ್ರವಾಸಿಗರಿಗೆ ನಿಷೇಧ

ತ್ರಿಪುರಾ: ಪ್ರಕರಣ: 0

ಕೊರೋನಾ ತಡೆಗೆ ಕ್ರಮ:

- ಮಾಚ್‌ರ್‍ 31ರವರೆಗೆ ರಾಜ್ಯ ಸಂಪೂರ್ಣ ಲಾಕ್‌ಡೌನ್‌

- ಅಗತ್ಯ ಸೇವೆ ಹೊರತುಪಡಿಸಿ ಮಿಕ್ಕ ಎಲ್ಲ ಸೇವೆ ಸ್ತಬ್ಧ

- ಮನೆಯಿಂದ ಜನರು ಹೊರಬರದಂತೆ ತಾಕೀತು, ಶಾಲೆ-ಕಚೇರಿಗಳಿಗೆ ರಜೆ

ಮೇಘಾಲಯ: ಪ್ರಕರಣ: 0

ಕೊರೋನಾ ತಡೆಗೆ ಕ್ರಮ:

- ಶನಿವಾರದಿಂದಲೇ ರಾಜ್ಯದಲ್ಲಿ ಲಾಕ್‌ಡೌನ್‌

- 12ನೇ ತರಗತಿಯ ಪರೀಕ್ಷೆಗಳು ರದ್ದು

- ವೈದ್ಯರು, ಯೋಧರನ್ನು ಹೊರತುಪಡಿಸಿದರೆ ಮಿಕ್ಕವರ ಸಂಚಾರಕ್ಕೆ ನಿರ್ಬಂಧ

- ಅಗತ್ಯ ವಸ್ತುಗಳ ಮಾರಾಟ ಬಿಟ್ಟರೆ ಮಿಕ್ಕ ಮಾರುಕಟ್ಟೆಬಂದ್‌

click me!