ರಾಜ್ಯದಲ್ಲಿ ಒಂದೇ ದಿನ 14 ಮಂದಿಗೆ ವೈರಸ್: 3ನೇ ಬಲಿ| ಗೌರಿಬಿದನೂರಲ್ಲಿ 5, ಬೆಂಗಳೂರಲ್ಲಿ 4, ದ.ಕ.ದಲ್ಲಿ 3 ಜನಕ್ಕೆ ಸೋಂಕು| 10 ತಿಂಗಳ ಮಗುವಿಗೂ ವೈರಸ್| ತುಮಕೂರಲ್ಲಿ 60ರ ವೃದ್ಧ ಸಾವು
ಬೆಂಗಳೂರು(ಮಾ.14): ರಾಜ್ಯದಲ್ಲಿ 10 ತಿಂಗಳ ಮಗು ಸೇರಿದಂತೆ ಮತ್ತೆ 14 ಜನರಿಗೆ ಕೋವಿಡ್-19 ಸೋಂಕು ದೃಢಪಟ್ಟಿದ್ದು, ಶುಕ್ರವಾರ ರಾತ್ರಿ ವೇಳೆಗೆ ಸೋಂಕಿತರ ಸಂಖ್ಯೆ 69ಕ್ಕೆ ಏರಿಕೆಯಾಗಿದೆ. ಇದೇ ವೇಳೆ 60 ವರ್ಷದ ಕೊರೋನಾ ಸೋಂಕಿತ ವೃದ್ಧರೊಬ್ಬರು ತುಮಕೂರಿನಲ್ಲಿ ಮೃತಪಟ್ಟಿದ್ದು, ರಾಜ್ಯದಲ್ಲಿ ಸೋಂಕಿತ ಮೃತರ ಸಂಖ್ಯೆ ಮೂರಕ್ಕೆ ಏರಿದಂತಾಗಿದೆ.
undefined
ಮೃತ ವ್ಯಕ್ತಿ ಮೂಲತಃ ತುಮಕೂರು ಜಿಲ್ಲೆಯ ಶಿರಾ ತಾಲೂಕಿನವರಾಗಿದ್ದು, ಮಾ.13ರಂದು ರೈಲು ಮೂಲಕ ದೆಹಲಿಗೆ ಹೋಗಿ ವಾಪಸ್ ಬಂದಿದ್ದರು. ಮಾ.27ರಂದು ತುಮಕೂರಿನ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಆ ಮೂಲಕ ತುಮಕೂರು ಜಿಲ್ಲೆಯಲ್ಲಿ ಕೊರೋನಾ ಸೋಂಕಿಗೆ ಮೊದಲ ಸಾವು ಸಂಭವಿಸಿದಂತಾಗಿದೆ.
ಗುರುವಾರದ ವರೆಗೆ 55 ಸೋಂಕಿತರಿದ್ದು, ಇದೀಗ 14 ಹೊಸ ಪ್ರಕರಣಗಳು ಪತ್ತೆಯಾಗಿವೆ. ಈ ಪೈಕಿ 10 ತಿಂಗಳ ಮಗು ಸೇರಿದಂತೆ ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರಿನ 5, ದಕ್ಷಿಣ ಕನ್ನಡದ ಮೂವರು, ದಾವಣಗೆರೆಯ ವೈದ್ಯ, ಬೆಂಗಳೂರು ಮೂಲದ ನಾಲ್ವರು ಮಹಿಳೆಯರು ಹಾಗೂ ತುಮಕೂರಿನ ಮೃತ ವೃದ್ಧ ಸೇರಿದ್ದಾರೆ. ಇದರಲ್ಲಿ ಇಬ್ಬರು ಮಹಿಳೆಯರು ಮತ್ತು ಮೂವರು ಪುರುಷರು ಕೆಲ ದಿನಗಳ ಹಿಂದೆ ವಿವಿಧ ದೇಶಗಳಿಂದ ವಾಪಸ್ಸಾದ ಹಿನ್ನೆಲೆಯುಳ್ಳವರಾಗಿದ್ದಾರೆ. ಇನ್ನಿಬ್ಬರು ಸೋಂಕಿತ ಮಹಿಳೆಯರು ಈ ಮೊದಲು ಸೋಂಕು ತಗುಲಿದ್ದ ವ್ಯಕ್ತಿಯ ನಿವಾಸಗಳಲ್ಲಿ ಮನೆಗೆಲಸಕ್ಕಿದ್ದವರು ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
10 ಜನ ಫಾರಿನ್ ರಿಟರ್ನ್:
ಸೋಂಕಿತರಲ್ಲಿ 10 ಜನರು ವಿದೇಶದಿಂದ ಬಂದವರು. ಗೌರಿಬಿದನೂರಿನಲ್ಲಿ ಸೋಂಕು ಪತ್ತೆಯಾದವರು ಹಿಂದೆ ಮೆಕ್ಕಾಕ್ಕೆ ಹೋಗಿ ಬಂದಿದ್ದರು. ಇಬ್ಬರು ಬೆಂಗಳೂರು ಮೂಲದ ಮಹಿಳೆಯರಲ್ಲಿ 20 ವರ್ಷದ ಒಬ್ಬರು ಮಾ.15ರಂದು ಕೊಲಂಬೋದಿಂದ, 25 ವರ್ಷದ ಮತ್ತೊಬ್ಬ ಮಹಿಳೆ ಲಂಡನ್‌ದಿಂದ ಮಾ.18ರಂದು ಭಾರತಕ್ಕೆ ವಾಪಸ್ಸಾಗಿದ್ದರು. ಅದೇ ರೀತಿ ಪ್ಯಾರಿಸ್‌ನಿಂದ ಮಾ.18ಕ್ಕೆ ಮರಳಿದ್ದ 24 ವರ್ಷದ ವೈದ್ಯ, ದುಬೈನಿಂದ ಮರಳಿದ್ದ ದಕ್ಷಿಣ ಕನ್ನಡ ಜಿಲ್ಲೆಯ 22 ವರ್ಷದ ಒಬ್ಬ ವ್ಯಕ್ತಿ, 21 ವರ್ಷದ ಮತ್ತೊಬ್ಬ ವ್ಯಕ್ತಿಗೆ ಸೋಂಕು ದೃಢಪಟ್ಟಿದೆ ಎಂದು ಇಲಾಖೆ ತಿಳಿಸಿದೆ.
ಫ್ರಾನ್ಸ್‌ನಿಂದ ಬಂದ ದಾವಣಗೆರೆ ವೈದ್ಯ:
ಸೋಂಕು ಪತ್ತೆಯಾಗಿರುವ ದಾವಣಗೆರೆ ಮೂಲದ 24 ವರ್ಷದ ವೈದ್ಯ ಮಾ.17ರಂದು ಫ್ರಾಸ್ಸ್ ದೇಶದ ಪ್ಯಾರಿಸ್‌ನಿಂದ ಹೊರಟು ಅಬುಧಾಬಿ ಮೂಲಕ ಮಾ.18ರಂದು ಬೆಂಗಳೂರಿಗೆ ಬಂದಿದ್ದರು. ಬಳಿಕ ಅಲ್ಲಿಂದ ಕೆಎಸ್‌ಆರ್‌ಟಿಸಿ ಬಸ್ ಮೂಲಕ ದಾವಣಗೆರೆಗೆ ತೆರಳಿದ್ದರು. ಇದು ದಾವಣಗೆರೆ ಜಿಲ್ಲೆಯಲ್ಲಿ ಕೊರೋನಾ ಸೋಂಕು ತಗುಲಿರುವ ಮೊದಲ ಪ್ರಕರಣವಾಗಿದ್ದು, ನಾಗರಿಕರಲ್ಲಿ ಆತಂಕ ಮೂಡಿಸಿದೆ.