ಮಹಾಮಾರಿ ಕೋವಿಡ್ 19: ಫ್ರಾನ್ಸ್‌ನ ಪ್ರಜೆಗೆ ಕೊರೋನಾ ಸೋಂಕು ದೃಢ

By Kannadaprabha News  |  First Published Mar 28, 2020, 11:32 AM IST

ವಿದೇಶಿ ಪ್ರಜೆಗೆ ಕೊರೋನಾ ಸೋಂಕು ದೃಢ| ಫ್ರಾನ್ಸ್‌ನಿಂದ ಬಂದಿದ್ದ 64 ವರ್ಷದ ವಿದೇಶಿ ಪ್ರವಾಸಿಗ| ಈ ಬಗ್ಗೆ ಮಾಹಿತಿ ನೀಡಿದ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಪಿ.ಎನ್‌.ರವೀಂದ್ರ|


ನೆಲಮಂಗಲ(ಮಾ.28): ಫ್ರಾನ್ಸ್‌ನಿಂದ ಬಂದಿದ್ದ 64 ವರ್ಷದ ವಿದೇಶಿ ಪ್ರಜೆಗೆ ಕೊರೋನಾ ಸೋಂಕು ದೃಢಪಟ್ಟಿರುವುದು ನೆಲಮಂಗಲ ತಾಲೂಕು ಆಸ್ಪತ್ರೆಯಲ್ಲಿ ಬೆಳಕಿಗೆ ಬಂದಿದೆ.

ಮಾ.21ರಂದು ಈ ವಿದೇಶಿ ಪ್ರವಾಸಿಗ ಬೆಂಗಳೂರಿಗೆ ಬಂದಿದ್ದ. ಈ ವ್ಯಕ್ತಿಯು ಆಂಧ್ರದ ಪುಟ್ಟಪರ್ತಿಗೆ ಹೋದಾಗ ರೂಂ ಕೊಡಲು ನಿರಾಕರಿಸಲಾಗಿತ್ತು. ಅಲ್ಲಿಂದ ಬೆಂಗಳೂರಿಗೆ ಬಂದಾಗ ಜ್ವರ ಕಾಣಿಸಿದೆ ನಂತರ ಆತನನ್ನು ಬೆಂಗಳೂರಿನ ರಾಜೀವ್‌ಗಾಂಧಿ ಆಸ್ಪತ್ರೆಯವರು ನೆಲಮಂಗಲ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿ ಐಸೋಲೇಷನ್‌ಗಾಗಿ ದಾಖಲಾಗಿದ್ದರು.

Tap to resize

Latest Videos

ಕಾರವಾರ ಮೂಲಕ ಭಟ್ಕಳಕ್ಕೆ ತೆರಳಿದ ಕೊರೋನಾ ಪಾಸಿಟಿವ್‌ ಯುವಕ

ಆತನ ರಕ್ತ ಮತ್ತು ಗಂಟಲು ದ್ರವವನ್ನು ಪರೀಕ್ಷೆಗಾಗಿ ಬೆಂಗಳೂರಿನ ರಾಜೀವ್‌ಗಾಂಧಿ ಆಸ್ಪತ್ರೆಗೆ ಕಳುಹಿಸಿ ಪರೀಕ್ಷೆಯಲ್ಲಿ ಕೊರೋನಾ ಸೋಂಕು ದೃಢವಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ರಾಜೀವ್‌ಗಾಂಧಿ ಆಸ್ಪತ್ರೆಗೆ ಆತನನ್ನು ಶಿಫ್ಟ್‌ ಮಾಡಲಾಗುವುದೆಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಪಿ.ಎನ್‌.ರವೀಂದ್ರ ತಿಳಿಸಿದ್ದಾರೆ.
 

click me!