ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ವ್ಯಾಪಿಸುತ್ತಲೇ ಇರುವ ಕೊರೋನಾ ವೈರಸ್ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ. ಅಷ್ಟೇ ಅಲ್ಲದೇ ಕೊರೋನಾ ವಿರುದ್ಧ ಸಮರಕ್ಕೆ ಆರ್ಥಿಕ ನೆರವು ಬೇಕಿದೆ. ಹಿನ್ನೆಲೆಯಲ್ಲಿ ಸಿಎಂ ಮಾಡಿದ್ದ ನಾಲ್ಕೇ ಗಂಟೆಯಲ್ಲಿ ಅಧಿಕಾರಿ ಬರೊಬ್ಬರಿ 8 ಕೋಟಿ ರೂ.ಗಳನ್ನ ಸಿಎಂ ಪರಿಹಾರ ನಿಧಿಗೆ ನೀಡಿ ಸೈ ಎನಿಸಿಕೊಂಡಿದ್ದಾರೆ.
ಬೆಂಗಳೂರು, (ಮಾ.23): ಕೊರೋನಾ ವೈರಸ್ ವಿರುದ್ಧ ಹೋರಾಡಲು ಆರ್ಥಿಕವಾಗಿ ಸದೃಢವಾಗಿರಬೇಕು. ಈ ಹಿನ್ನೆಲೆಯಲ್ಲಿ ಸಿಎಂ ಬಿಎಸ್ ಯಡಯೂರಪ್ಪ ಅವರು ವಿವಿಧ ಇಲಾಖೆಗಳಿಗೆ ಮುಖ್ಯಮಂತ್ರಿ ಪರಿಹಾರ ನಿಧಿಗೆ ಅನುದಾನ ನೀಡುವಂತೆ ಮನವಿ ಮಾಡಿದ್ದಾರೆ.
ಅದರಂತೆ ಸಹಕಾರ ಇಲಾಖೆಯ ಸಚಿವ ಎಸ್.ಟಿ.ಸೋಮಶೇಖರ್‌ಗೆ ಸಿಎಂ ಮನವಿ ಮಾಡಿದ್ದರು. ಇದನ್ನ ತೆಗೆದುಕೊಂಡು ಹೋಗಿ ಇಂದು (ಸೋಮಾರ) ಬೆಳಗ್ಗೆ ಸಚಿವ ಸೋಮಶೇಖರ್ ಅವರು ತಮ್ಮ ಇಲಾಖೆಯ ಉನ್ನತ ಅಧಿಕಾರಿಳ ಮುಂದೆ ಮನವಿ ಮಾಡಿದ್ದರು.
ಕೊರೋನಾ ವಿರುದ್ಧ ಹೋರಾಟಕ್ಕೆ ಉದ್ಯಮಿಗಳು ಸಾಥ್, ಒಬ್ಬರಿಂದ 100 ಕೋಟಿ ಘೋಷಣೆ
ಇದಾದ ಬಳಿಕ ನಾಲ್ಕೇ ಗಂಟೆಗಳಲ್ಲಿ ಕೃಷಿ ಇಲಾಖೆಯ ನಿರ್ದೇಶಕ ಕರೀಗೌಡ ಅವರು ಒಂದಲ್ಲ ಎರಡಲ್ಲ ಬರೊಬ್ಬರಿ 8 ಕೋಟಿ ರೂ.ಗಳನ್ನ ಜಮಾಯಿಸಿ ಸಿಎಂ ಪರಿಹಾರ ನಿಧಿಗೆ ನೀಡಿದ್ದಾರೆ. ಈ ಮೂಲಕ ಸೋಮಶೇಖರ್ ಹಾಗೂ ಯಡಿಯೂರಪ್ಪ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇನ್ನು 8 ಕೋಟಿಯಲ್ಲಿ 5 ಕೋಟಿಯನ್ನು RTGS ಮೂಲಕ ವರ್ಗಾಹಿಸಿದ್ದರೆ, ಬಾಕಿ 3 ಕೋಟಿ ರೂ. ಚೆಕ್ ಅನ್ನು ಖುದ್ದು ಸಚಿವ ಸೋಮಶೇಖರ್ ಹಾಗೂ ಕೃಷಿ ಇಲಾಖೆ ನಿರ್ದೇಶಕ ಕರೀಗೌಡ ಅವರು ಸಿಎಂ ಯಡಿಯೂರಪ್ಪನವರನ್ನ ಭೇಟಿ ಮಾಡಿ ಹಸ್ತಾಂತರಿಸಿದರು.
ಅವರೇನು ಮನೆಯಿಂದ ಕೊಟ್ಟಿಲ್ಲ ನಿಜ. ಆದ್ರೆ, ಇಲಾಖೆಗೆ ಹೆಚ್ಚು-ಹೆಚ್ಚು ಅನುದಾನ ಕೇಳುವ ಬದಲು ಇಂತಹ ಸಂದರ್ಭದಲ್ಲಿ ಅಷ್ಟೊಂದು ಹಣ ಕೊಟ್ಟಿರುವುದು ನಿಜಕ್ಕೂ ಗ್ರೇಟ್.
ಮತ್ತೊಂದೆಡೆ ಬೆಂಗಳೂರಿನ ಇಂಜಿನಿಯರಿಂಗ್ ವಿದ್ಯಾರ್ಥಿನಿ ಅಮೂಲ್ಯ ಎನ್ನುವರು ಸಹ ತನ್ನ ಬಳಿ ಇದ್ದ ಒಂದು ಲಕ್ಷ ರೂ. ಪಾಕೆಟ್ ಮನಿಯನ್ನು ಸಿಎಂ ಪರಿಹಾರ ನಿಧಿಗೆ ನೀಡಿ ಎಲ್ಲರ ಗಮನಸೆಳೆದಿದ್ದಾಳೆ.