EMI ಕಟ್ಟಲು 3 ತಿಂಗಳ ಟೈಮ್: RBI ಕ್ರಮ ಸ್ವಾಗತಿಸಿದ ಶ್ರೀರಾಮುಲು

Suvarna News   | Asianet News
Published : Mar 27, 2020, 12:25 PM ISTUpdated : Mar 27, 2020, 01:29 PM IST
EMI ಕಟ್ಟಲು 3 ತಿಂಗಳ ಟೈಮ್: RBI ಕ್ರಮ ಸ್ವಾಗತಿಸಿದ ಶ್ರೀರಾಮುಲು

ಸಾರಾಂಶ

ರಾಷ್ಟ್ರೀಕೃತ ಬ್ಯಾಂಕ್ ಸೇರಿದಂತೆ ಎಲ್ಲಾ ಬ್ಯಾಂಕುಗಳಲ್ಲಿನ ಗ್ರಾಹಕರ ಗೃಹಸಾಲ,ವೈಯಕ್ತಿಕ ಸಾಲ,ವಾಹನ ಸಾಲಗಳ ಇಎಂಐ ಪಾವತಿಯನ್ನು ಮಂದೂಡಿರುವ ಎಸ್‌ಬಿಐ ಕ್ರಮವನ್ನು ಆರೋಗ್ಯ ಸಚಿವ ಬಿ. ಶ್ರೀರಾಮುಲು ಸ್ವಾಗತಿಸಿದ್ದಾರೆ.

ಬೆಂಗಳೂರು(ಮಾ.27): ರಾಷ್ಟ್ರೀಕೃತ ಬ್ಯಾಂಕ್ ಸೇರಿದಂತೆ ಎಲ್ಲಾ ಬ್ಯಾಂಕುಗಳಲ್ಲಿನ ಗ್ರಾಹಕರ ಗೃಹಸಾಲ,ವೈಯಕ್ತಿಕ ಸಾಲ,ವಾಹನ ಸಾಲಗಳ ಇಎಂಐ ಪಾವತಿಯನ್ನು ಮಂದೂಡಿರುವ ಎಸ್‌ಬಿಐ ಕ್ರಮವನ್ನು ಆರೋಗ್ಯ ಸಚಿವ ಬಿ. ಶ್ರೀರಾಮುಲು ಸ್ವಾಗತಿಸಿದ್ದಾರೆ.

"

ಈ ಸಂಬಂಧ ಟ್ವೀಟ್ ಮಾಡಿರುವ ಅವರು ರಾಷ್ಟ್ರೀಕೃತ ಬ್ಯಾಂಕ್ ಸೇರಿದಂತೆ ಎಲ್ಲಾ ಬ್ಯಾಂಕುಗಳಲ್ಲಿನ ಗ್ರಾಹಕರ ಗೃಹಸಾಲ,ವೈಯಕ್ತಿಕ ಸಾಲ,ವಾಹನ ಸಾಲಗಳ EMI ಯನ್ನು 3 ತಿಂಗಳು ಮುಂದೂಡಿದ RBI ಕ್ರಮ ಸ್ವಾಗತರ್ಹ. ಲಾಕ್ ಡೌನ್ ನಂತಹ ಸಂಕಷ್ಟದ ಸಮಯದಲ್ಲಿ ಜನರೊಂದಿಗೆ ಹಾಗೂ ಜನರಿಗಾಗಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವಿದೆ ಎಂದಿದ್ದಾರೆ.

ಗುರುವಾರ ಪತ್ರಿಕಾಗೋಷ್ಠಿ ನಡೆಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮುಂದಿನ ಮೂರು ತಿಂಗಳ ರಾಷ್ಟ್ರದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು 1.7 ಲಕ್ಷ ಕೋಟಿ ಪ್ಯಾಕೇಜ್ ಘೋಷಿಸಿದ್ದಾರೆ.

ಕೊರೋನಾ ಆತಂಕ, ಕೆಲ ತಿಂಗಳು EMI ವಿನಾಯಿತಿ!?

ಈ ಪ್ಯಾಕೇಜ್‌ನಲ್ಲಿ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಅನುಕೂಲವಾಗುವ ಅನೇಕ ನೂತನ ಯೋಜನೆಗಳನ್ನು ಘೋಷಿಸಲಾಗಿದೆ. ಅಲ್ಲದೇ ಆರೋಗ್ಯ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ, ಕೊರೋನಾದಿಂದ ಜನರನ್ನು ಕಾಡುತ್ತಿರುವ ವೈದ್ಯರು, ಪ್ಯಾರಾ ಮೆಡಿಕಲ್ ಸ್ಟಾಫ್‌ಗಳಿಗೆ 50 ಲಕ್ಷ ರೂ. ಆರೋಗ್ಯ ವಿಮೆಯನ್ನೂ ಘೋಷಿಸಿದ್ದರು.

PREV
click me!

Recommended Stories

ವೈರಸ್‌ ಕಾಟ: ಕೊರೋನಾ ತಡೆಗೆ ಸಾರ್ವಜನಿಕರ ಸಹಕಾರ ಅಗತ್ಯ, ಸಚಿವ ಪಾಟೀಲ್‌
ಮತ್ತೆ ಕೊರೋನಾರ್ಭಟ: ಪೂಲಿಂಗ್ ಟೆಸ್ಟ್ ಮೊರೆಹೋದ ಆರೋಗ್ಯ ಇಲಾಖೆ, ಏನಿದು ಹೊಸ ಪರೀಕ್ಷೆ?