Fact Check: ಮೋದಿಗೆ ಅಡ್ಡಬಿದ್ದ  UK, USA, 18 ದೇಶಗಳ ಟಾಸ್ಕ್ ಫೋರ್ಸ್‌ಗೆ  ನರೇಂದ್ರನೇ ನಾಯಕ!

By Suvarna NewsFirst Published Apr 3, 2020, 2:58 PM IST
Highlights


ಕೊರೋನಾ ವಿರುದ್ಧ ವಿಶ್ವದ ಹೋರಾಟ/ 18 ರಾಷ್ಟ್ರಗಳ ಟಾಸ್ಕ್ ಫೋರ್ಸ್ ಮುನ್ನಡೆಸಲಿದ್ದಾರೆ ನರೇಂದ್ರ ಮೋದಿ/ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಸುದ್ದಿ/ ಸುದ್ದಿಯ ಅಸಲಿಯತ್ತು ಏನು?

ನವದೆಹಲಿ(ಏ. 03)  ಪ್ರಧಾನಿ ನರೇಂದ್ರ ಮೋದಿ ಅಮೆರಿಕ, ಇಂಗ್ಲೆಂಡ್ ಸೇರಿದಂತೆ 18 ರಾಷ್ಟ್ರಗಳನ್ನು ಕೊರೋನಾ ವಿರುದ್ಧದ ಹೋರಾಟದಲ್ಲಿ ಮುಂದುವರಿಸಲಿದ್ದಾರೆ ಎಂಬ ಸಂದೇಶವೊಂದು ವೈರಲ್ ಆಗುತ್ತಿದೆ.

ಆದರೆ ಇದರ ಅಸಲಿಯತ್ತೇ ಬೇರೆ.  18 ರಾಷ್ಟ್ರಗಳ ಟಾಸ್ಕ್ ಫೋರ್ಸ್ ನ್ನು ಮೋದಿ ಮುನ್ನಡೆಸಲಿದ್ದಾರೆ ಎಂದು ಸಂದೇಶ ರವಾನೆಯಾಗುತ್ತಿದೆ. ಪೆಂಡಮಿಕ್ ರೂಪ ಪಡೆದುಕೊಂಡಿರುವ ಮಹಾಮಾರಿ ವಿರುದ್ಧದ ಹೋರಾಟಕ್ಕೆ ಮೋದಿ ನಾಯಕತ್ವ ಎಂದು ಹೇಳಲಾಗಿದೆ.  ವಾಟ್ಸಪ್ ಸಹಾಯವಾಣಿ 7700906111 ನಂಬರ್ ಮೂಲಕ ಈ ಸಂದೇಶ ರವಾನೆಯಾಗಿದೆ.

ದೇಶಕ್ಕೆ ಕೊರೋನಾ ಐಲ್ಯಾಂಡ್ ಆದ ದೆಹಲಿ ಮಸೀದಿ

ಅಮೆರಿಕ ಮತ್ತು ಇಂಗ್ಲೆಂಡ್ ಒಳಗೊಂಡಂತೆ ಕೊರೋನಾ ವಿರುದ್ಧದ 18 ದೇಶಗಳ ಟಾಸ್ಕ್ ಪೋರ್ಸ್ ನ್ನು ಮೋದಿ ಮುನ್ನಡೆಸಲಿದ್ದಾರೆ, ಭಾರತಕ್ಕೆ ಇದು ಅತ್ಯಂತ ದೊಡ್ಡ ಹೆಮ್ಮೆಯ ವಿಚಾರ ಎಂಬ ಸಂದೇಶ ಹರಿದಾಡುತ್ತಲೇ ಇದೆ.

WION ಅಂತಾರಾಷ್ಟ್ರೀಯ ನ್ಯೂಸ್ ಚಾನಲ್ ಈ ಸುದ್ದಿ ಪ್ರಸಾರ ಮಾಡಿದೆ ಎಂದು ವಿಡಿಯೋ ಕೂಡ ಹರಿದಾಡುತ್ತಿದೆ.  ಆದರೆ ವರದಿಯನ್ನು ಜನರು ತಪ್ಪಾಗಿ ಭಾವಿಸಿದ್ದಾರೆ. ಭಾರತ ಮತ್ತು ಇತರ ರಾಷ್ಟ್ರಗಳು ಕೊರೋನಾ ತಡೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಸಿದ ವಿಡಿಯೋ ಸಂವಾದದ ವರದಿ ಇದಾಗಿದೆ.

ಭಾರತತದಲ್ಲಿ ನರೇಂದ್ರ ಮೋದಿ ತೆಗೆದುಕೊಂಡ ಮುನ್ನೆಚ್ಚರಿಕೆ ಕ್ರಮಗಳು, ಸಾರ್ಕ್ ರಾಷ್ಟ್ರಗಳೊಂದಿಗೆ ಮಾತನಾಡಿದ ರೀತಿಯ ವಿವರಣೆಯನ್ನು ಟಾಸ್ಕ್ ಪೋರ್ಸ್ ಎಂದು ಭಾವಿಸಲಾಗಿದೆ.

ಇಂಗ್ಲೆಂಡ್ ಪ್ರಧಾಣಿ ಬೋರಿಸ್ ಜಾನ್ಸ್ನ್ ಜತೆಗೆ ನರೇಂದ್ರ ಮೋದಿ ನಡೆಸಿದ ದೂರವಾಣಿ ಸಂಭಾಷಣೆಯನ್ನು ಇದಲ್ಲೆ ಲಿಂಕ್ ಮಾಡಲಾಗಿದೆ. ಅಸಲಿಗೆ ಇಲ್ಲಿ ವಿದೇಶ ವ್ಯವಹಾರಗಳು, ವಾತಾವರಣದಲ್ಲಿನ ಬದಲಾವಣೆ ವಿಚಾರ ಚರ್ಚೆಯಾಗಿದೆ.

ಖಾಸಗಿ ಆಸ್ಪತ್ರೆಯಲ್ಲೇ ಸರ್ಕಾರಿ ಆಸ್ಪತ್ರೆ ಸೇವೆ

ನರೇಂದ್ರ ಮೋದಿ ಮತ್ತು ಜಿ 20 ರಾಷ್ಟ್ರಗಳ ನಡುವಿನ ಮಾತುಕತೆ, ಆಸ್ಟ್ರೇಲಿಯಾದೊಂದಿಗೆ ನಡೆದ ಚರ್ಚೆ, ಸೌದಿ ಅರೇಬಿಯಾ ರಾಜನೊಂದಿಗೆ ನಡೆದ ಮಾತುಕತೆ ಎಲ್ಲವನ್ನು ಇಲ್ಲಿಗೆ ಲಿಂಕ್ ಮಾಡಲಾಗಿದೆ.

ಈ ರೀತಿ ಆಗುತ್ತಿರುವುದು ಇದು ಮೊದಲೇನಲ್ಲ. ಅನೇಕ ಸುಳ್ಳು ಸುದ್ದಿಗಳು, ನಕಲಿ ಪ್ರಮಾಣ ಪತ್ರಗಳು ಸೋಶಿಯಲ್ ಮೀಡಿಯಾದಲ್ಲಿ ದಿನ ಬೆಳಗಾದರೆ ಹರಿದಾಡುತ್ತಲೇ ಇವೆ. ಮಾಹಾರಾಷ್ಟ್ರ ಸರ್ಕಾರ ಲಾಕ್ ಡೌನ್ ಅವಧಿಯನ್ನು ಏಪ್ರಿಲ್ 30ರ ತನಕ ವಿಸ್ತರಿಸಿದೆ, ಹಣಕಾಸು ವರ್ಷವನ್ನು ಜುಲೈ 1ರ ತನಕ ವಿಸ್ತರಣೆ ಮಾಡಲಾಗಿದೆ ಎಂಬ ಸುದ್ದಿಗಳು ಹರಿದಾಡಿವೆ.

 

18 nations including USA and UK wants NARENDER MODI as leader for TASK FORCE for CORONA..what a proud moment for INDIA..believe in him and INDIA will win 🙏 pic.twitter.com/y1BNgwJqty

— rAaAhUl (@NaMo4Bharath)

At PM emphasized the need to put human beings at the center of our vision of global prosperity & cooperation while calling on to come out with a concrete action plan to fight global pandemic
Full Press Release🔗https://t.co/E2TMr8x7N4 pic.twitter.com/RFbQgD8sqL

— Raveesh Kumar (@MEAIndia)
click me!