ಕೊರೋನಾ ವೈರಸ್ ನಿಯಂತ್ರಣಕ್ಕಾಗಿ ದೇಶದಲ್ಲಿ ಜಾರಿಗೊಳಿಸಿರುವ 21 ದಿನಗಳ ಲಾಕ್‌ಡೌನ್ ವೇಳೆ ಸುಳ್ಳುಸುದ್ದಿಗಳ ತಡೆಗಾಗಿ ಮತ್ತು ಜನರ ಆತಂಕವನ್ನು ತಗ್ಗಿಸುವ ನಿಟ್ಟಿನಲ್ಲಿ ಭಾರತದಾದ್ಯಂತ ಪ್ರಧಾನಿ ನರೇಂದ್ರ ಮೋದಿ 1 ವಾರ ಇಂಟರ್‌ನೆಟ್ ಬಂದ್ ಮಾಡುವುದಾಗಿ ಘೊಷಿಸಿದ್ದಾರೆ ಎನ್ನುವ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿಡಾಡುತ್ತಿದೆ.ನಿಜನಾ ಈ ಸುದ್ದಿ?
ಕೊರೋನಾ ವೈರಸ್ ನಿಯಂತ್ರಣಕ್ಕಾಗಿ ದೇಶದಲ್ಲಿ ಜಾರಿಗೊಳಿಸಿರುವ 21 ದಿನಗಳ ಲಾಕ್‌ಡೌನ್ ವೇಳೆ ಸುಳ್ಳುಸುದ್ದಿಗಳ ತಡೆಗಾಗಿ ಮತ್ತು ಜನರ ಆತಂಕವನ್ನು ತಗ್ಗಿಸುವ ನಿಟ್ಟಿನಲ್ಲಿ ಭಾರತದಾದ್ಯಂತ ಪ್ರಧಾನಿ ನರೇಂದ್ರ ಮೋದಿ 1 ವಾರ ಇಂಟರ್‌ನೆಟ್ ಬಂದ್ ಮಾಡುವುದಾಗಿ ಘೊಷಿಸಿದ್ದಾರೆ ಎನ್ನುವ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿಡಾಡುತ್ತಿದೆ.
Fact check: ಕುಡುಕರಿಗೆ ಶುಭ ಸುದ್ದಿ, ಬಾರ್, ವೈನ್ ಶಾಪ್ ಓಪನ್, ಕಂಡಿಶನ್ ಅಪ್ಲೈ!
undefined
ಆಜ್‌ತಕ್ ಸುದ್ದಿ ಮಾಧ್ಯಮದ ಲೋಗೊ ಇರುವ ಬ್ರೇಕಿಂಗ್ ನ್ಯೂಸ್ ಸ್ಕ್ರೀನ್ ಶಾಟ್ ಜೊತೆಗೆ ಈ ಸುದ್ದಿ ಹರಡುತ್ತಿದೆ. ಈ ಸ್ಕ್ರೀನ್‌ಶಾಟ್‌ನಲ್ಲಿ ‘ಕೊರೋನಾ ಬಗೆಗೆ ಜನರಲ್ಲಿ ಆತಂಕವನ್ನು ದೂರ ಮಾಡಲು ಪ್ರಧಾನಿ ಒಂದು ವಾರ ದೇಶಾದ್ಯಂತ ಇಂಟರ್‌ನೆಟ್ ಬಂದ್ ಮಾಡಲು ಆದೇಶಿಸಿದ್ದಾರೆ’ ಎಂದಿದೆ.
ಇದೀಗ ಫೇಸ್‌ಬುಕ್, ವಾಟ್ಸ್‌ಆ್ಯಪ್‌ಗಳಲ್ಲಿ ವೈರಲ್ ಆಗುತ್ತಿದೆ. ಮೊದಲೇ ಕೆಲಸವಿಲ್ಲದೆ ಮನೆಯಲ್ಲಿ ಕುಳಿತಿರುವಾಗ ಹೇಗೋ ಟೈಂ ಪಾಸ್ ಮಾಡಲು ಇಂಟರ್ನೆಟ್ ನೆರವಿಗೆ ಬರುತ್ತಿದೆ. ಆದರೆ, ಅದನ್ನೂ ಬಂದ್ ಮಾಡಿದರೆ ನಾವು ಎಲ್ಲಿಗೆ ಹೋಗಬೇಕು ಎಂಬ ಪ್ರತಿಕ್ರಿಯೆಗಳು ಬರುತ್ತಿವೆ. ಆದರೆ ಬೂಮ್ ಈ ಫೋಟೋ ಹಿಂದಿನ ಸತ್ಯಾಸತ್ಯ ಪರಿಶೀಲಿಸಿದಾಗ ಫೋಟೋಶಾಪ್ ಮೂಲಕ ಎಡಿಟ್ ಮಾಡಿ ಮಾಧ್ಯಮವೊಂದರ ಹೆಸರಿನಲ್ಲಿ ಸುಳ್ಳುಸುದ್ದಿ ಹಬ್ಬಿಸಲಾಗುತ್ತಿದೆ ಎಂದು ತಿಳಿದುಬಂದಿದೆ.
ಅಲ್ಲದೆ ಆಜ್‌ತಕ್ ಸುದ್ದಿವಾಹಿನಿಯು ಸುದ್ದಿಯನ್ನು ಹಿಂದಿ ಭಾಷೆಯಲ್ಲಿ ಬಿತ್ತರಿಸುತ್ತದೆಯೇ ಹೊರತು ಇಂಗ್ಲಿಷ್‌ನಲ್ಲಿ ಅಲ್ಲ. ಇಲ್ಲಿ ಬಳಸಿರುವ ಫಾಂಟ್ ಸೈಜ್ ಎಬಿಸಿ ಸುದ್ದಿ ವಾಹಿನಿಯಲ್ಲಿ ಬಳಸುವ ಫಾಂಟ್ ಸೈಜ್. ಆಜ್‌ತಕ್ ಸುದ್ದಿವಾಹಿನಿಯ ಹಳೆಯ ಬ್ರೇಕಿಂಗ್ ನ್ಯೂಸ್‌ಗಳಿಗೂ ಇದಕ್ಕೂ ಹೊಂದಾಣಿಕೆಯೂ ಇಲ್ಲ. ಹಾಗಾಗಿ ಇದೊಂದು ಸುಳ್ಳು ಸುದ್ದಿ.
- ವೈರಲ್ ಚೆಕ್