ಬೆಂಗಳೂರಿಂದ ತೆರಳುತ್ತಿದ್ದ ಬಸ್ - ಲಾರಿ ನಡುವೆ ಅಪಘಾತ : ಹೊತ್ತಿ ಉರಿದ ಬಸ್

Published : Oct 27, 2019, 12:25 PM IST
ಬೆಂಗಳೂರಿಂದ ತೆರಳುತ್ತಿದ್ದ ಬಸ್ - ಲಾರಿ ನಡುವೆ ಅಪಘಾತ : ಹೊತ್ತಿ ಉರಿದ ಬಸ್

ಸಾರಾಂಶ

ಲಾರಿ ಹಾಗೂ ಬಸ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಖಾಸಗಿ ಬಸ್ ಹೊತ್ತಿ ಉರಿದಿದೆ. ಹಲವರು ಗಾಯಗೊಂಡಿದ್ದು, ಓರ್ವ ವ್ಯಕ್ತಿ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.

ಚಿತ್ರದುರ್ಗ [ಅ.27]: ಖಾಸಗಿ ಬಸ್  ಹಾಗೂ ಲಾರಿ ನಡುವೆ ಭೀಕರ ಅಪಘಾತವಾಗಿದ್ದು,  ಈ ವೇಳೆ ಲಾರಿ ಚಾಲಕ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. 

ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಕಪಿಲೆಹಟ್ಟಿ ಬಳಿ ಲಾರಿ-ಬಸ್ ಅಪಘಾತವಾಗಿದ್ದು, ಬಸ್ ಹೊತ್ತಿ ಉರಿದಿದೆ. ಲಾರಿ ಚಾಲಕ ವೆಂಕಟೇಶ್ [40] ಸ್ಥಳದಲ್ಲಿ ಸಾವಿಗೀಡಾಗಿದ್ದು,  ಬಸ್ಸಿನಲ್ಲಿದ್ದ 15 ಮಂದಿ ಗಾಯಗೊಂಡಿದ್ದಾರೆ.  ಗಾಯಾಳುಗಳನ್ನು ಚಿತ್ರದುರ್ಗ ಆಸ್ಪತ್ರೆಗೆ ದಾಖಲಿಸಲಾಗಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಬೆಂಗಳೂರಿನಿಂದ ಬಳ್ಳಾರಿಗೆ ಖಾಸಗಿ ಬಸ್ ತೆರಳುತ್ತಿದ್ದು, ಲಾರಿ ಚಳ್ಳಕೆರೆಯಿಂದ ಬೆಂಗಳೂರಿಗೆ ತೆರಳುತಿತ್ತು. ಬಸ್ಸಿನಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಲೇ ಪ್ರಯಾಣಿಕರೆಲ್ಲಾ ತಕ್ಷಣವೇ ಬಸ್ಸಿನಿಂದ ಇಳಿದಿದ್ದು, ಭಾರಿ ಅವಘಡವೊಂದು ತಪ್ಪಿದೆ. 

ಈ ಸಂಬಂಧ ಇದೀಗ ಐಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

PREV
click me!

Recommended Stories

ಚಿತ್ರದುರ್ಗದಲ್ಲಿ ಭೀಕರ ಅಪಘಾತ, DYSP ವೈಷ್ಣವಿ ಗಂಭೀರ ಗಾಯ, ತಾಯಿ ಸೇರಿ ಇಬ್ಬರು ಮೃತ
ಚಿತ್ರದುರ್ಗ: ಮದುವೆ ಮಾಡಲಿಲ್ಲವೆಂದು ಜಗಳ ಮಾಡಿ ಅಪ್ಪನನ್ನೇ ಕಬ್ಬಿಣ ರಾಡ್‌ನಿಂದ ಹೊಡೆದು ಕೊಂದ ಮಗ!