ಚಿಕ್ಕಮಗಳೂರಲ್ಲಿ ಹೊಸ ತಾಲೂಕು : 13 ಗ್ರಾಮ ಸೇರ್ಪಡೆ

By Web Desk  |  First Published Nov 15, 2019, 2:29 PM IST

ಚಿಕ್ಕಮಗಳೂರು ಜಿಲ್ಲೆಯಲ್ಲಿ ಹೊಸ ತಾಲೂಕು ರಚನೆಗೆ ಭರದ ಸಿದ್ಧತೆ ನಡೆಯುತ್ತಿದ್ದು, ಯಾವ ಯಾವ ಗ್ರಾಮಗಳು ಈ ತಾಲೂಕಿಗೆ ಸೇರಲಿವೆ ಎಂಬ ಕುತೂಹಲಕ್ಕೆ ಅಂತೂ ಇಂತೂ ತೆರೆ ಬಿದ್ದಿದೆ. 


ಚಿಕ್ಕಮಗಳೂರು (ನ.15):  ಜಿಲ್ಲೆಯ ಕಳಸ ಹೊಸ ತಾಲೂಕು ರಚನೆಗೆ ಭರದ ಸಿದ್ಧತೆ ನಡೆಯುತ್ತಿದ್ದು, ಯಾವ ಯಾವ ಗ್ರಾಮಗಳು ಈ ತಾಲೂಕಿಗೆ ಸೇರಲಿವೆ ಎಂಬ ಕುತೂಹಲಕ್ಕೆ ಅಂತೂ ಇಂತೂ ತೆರೆ ಬಿದ್ದಿದೆ. ಮೂಡಿಗೆರೆ ತಾಲೂಕಿನ 5 ಗ್ರಾಮ ಪಂಚಾಯಿತಿಯ 13 ಗ್ರಾಮಗಳನ್ನು ಕಳಸ ಹೊಸ ತಾಲೂಕು ವ್ಯಾಪ್ತಿಗೆ ಸೇರಿಕೊಳ್ಳಲಿವೆ.

ಅಂದರೆ, ಮಾವಿನ ಕೆರೆ ಗ್ರಾಮ ಪಂಚಾಯಿತಿಯ ಮಾವಿನಕೆರೆ, ಅಂಬಿನಕುಡಿಗೆ, ಹೊರನಾಡು, ಸಂಸೆ ಗ್ರಾಪಂನ ಸಂಸೆ, ಕೆಳಕೋಡು, ತೋಟದೂರು ಗ್ರಾಪಂನ ತೋಟದೂರು, ತಲಗೋಡು, ತನೂಡಿ, ಇಡಕಣಿ ಗ್ರಾಪಂ ಇಡಕಣಿ, ಹೆಮ್ಮಕ್ಕಿ, ಕೆ. ಕೆಳಗೂರು, ಮರಸಣಿಗೆ ಗ್ರಾಪಂ ಮರಸಣಿಗೆ, ಯಡೂರು ಗ್ರಾಮಗಳು ಸೇರಿಕೊಳ್ಳಲಿವೆ.

Tap to resize

Latest Videos

ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ. ರವಿ ಹಾಗೂ ಮೂಡಿಗೆರೆ ಶಾಸಕ ಎಂ.ಪಿ. ಕುಮಾರಸ್ವಾಮಿ, ವಿಧಾನಪರಿಷತ್‌ ಸದಸ್ಯ ಎಂ.ಕೆ. ಪ್ರಾಣೇಶ್‌, ಮಾಜಿ ಸಚಿವ ಬಿ.ಬಿ. ನಿಂಗಯ್ಯ ಮತ್ತು ಜಿಲ್ಲಾ ಪಂಚಾಯಿತಿ, ತಾಪಂ ಸದಸ್ಯರ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಕಳಸ ತಾಲೂಕಿಗೆ ಯಾವ ಯಾವ ಗ್ರಾಮಗಳು ಸೇರಿಸಿಕೊಳ್ಳಬೇಕೆಂಬ ನಿರ್ಣಯವನ್ನು ಕೈಗೊಳ್ಳಲಾಗಿದ್ದು, ಆ ವರದಿಯನ್ನು ಜಿಲ್ಲಾಡಳಿತ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರಿಗೆ ಕಳೆದ ಅ. 30 ರಂದು ಕಳುಹಿಸಿಕೊಟ್ಟಿದೆ.

ಮುಂದೇನು ?

ಕಳಸ ತಾಲೂಕುಗೆ ಗುರುತು ಮಾಡಿರುವ ಗ್ರಾಮಗಳನ್ನು ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಬೇಕು. ನಂತರದಲ್ಲಿ ತಾಲೂಕು ಆಡಳಿತಕ್ಕೆ ಸಂಬಂಧಿಸಿದಂತೆ ತಾಲೂಕು ಕಚೇರಿ, ತಾಲೂಕು ಮಟ್ಟದ ಕೃಷಿ, ತೋಟಗಾರಿಕೆ, ಸಮಾಜಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ, ಕ್ಷೇತ್ರ ಶಿಕ್ಷಣಾಧಿಕಾರಿ, ಶಿಶು ಅಭಿವೃದ್ಧಿ ಇಲಾಖೆ, ಪಶುಪಾಲನಾ ಇಲಾಖೆ, ಹೀಗೆ ತಾಲೂಕು ಮಟ್ಟದ ಕಚೇರಿಗಳನ್ನು ತೆರೆಯಲು ಕಟ್ಟಡಗಳನ್ನು ಗುರುತು ಮಾಡಬೇಕಾಗುತ್ತದೆ. ಇದು, ಮುಂದಿನ ಹಂತದ ಕೆಲಸವಾಗಿದೆ. ಸದ್ಯ ಕಳಸ ಹೋಬಳಿ ಕೇಂದ್ರದಲ್ಲಿ ತಾಲೂಕು ಮಟ್ಟದ ಕಚೇರಿಗಳನ್ನು ತೆರೆಯಲು ಸರ್ಕಾರಿ ಕಟ್ಟಡಗಳು ಲಭ್ಯವಿಲ್ಲ. ಆರಂಭದಲ್ಲಿ ಖಾಸಗಿ ಕಟ್ಟಡಗಳನ್ನು ಬಾಡಿಗೆ ಆಧಾರದ ಮೇಲೆ ಬಳಸಿಕೊಳ್ಳುವ ಸಾಧ್ಯತೆ ಇದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಹಲವು ವರ್ಷದ ಕನಸು: ಕಳಸ ತಾಲೂಕು ಕೇಂದ್ರವಾಗಬೇಕೆಂದು ಈ ಭಾಗದ ಜನರ ಹಲವು ವರ್ಷಗಳ ಕನಸು. ಇದು, ಕೈಗೂಡಿದ್ದು, ಹಿಂದಿನ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸಮ್ಮಿಶ್ರ ಸರ್ಕಾರದಲ್ಲಿ. ಇದರಲ್ಲಿ ಜೆಡಿಎಸ್‌ ಪಕ್ಷ ಪ್ರಮುಖವಾದುದಾಗಿದೆ. ಈಗ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದು, ಅಧಿಸೂಚನೆ ಪ್ರಕಟ, ತಾಲೂಕು ಮಟ್ಟದ ಕಚೇರಿಗಳ ಪ್ರಾರಂಭದ ಕೆಲಸ ಎಷ್ಟುತ್ವರಿತಗತಿಯಲ್ಲಿ ಆಗುತ್ತವೆಯೇ ಎಂಬುದು ಸಾರ್ವಜನಿಕರ ಮುಂದಿರುವ ಪ್ರಶ್ನೆ.

click me!