ಕೃಷಿ ಮಾಡಿರುವ ಜಮೀನುಗಳನ್ನು ರೈತರಿಗೆ ಬಿಟ್ಟುಕೊಡಿ: ಅರಣ್ಯ ಇಲಾಖೆಗೆ ಮನವಿ

By Sathish Kumar KH  |  First Published Nov 16, 2022, 4:02 PM IST

ಕಂದಾಯ ಇಲಾಖೆಯ ಸರ್ಕಾರಿ ಜಮೀನಿಗೆ ಹೊರಡಿಸಿರುವ 4(1) ನೋಟಿಫಿಕೇಶನ್ ಸರಿಪಡಿಸಬೇಕು. ಅರಣ್ಯ ಅಧಿಕಾರಿಗಳು ರೈತರಿಗೆ ಸ್ಪಂದಿಸದೇ ಇದ್ದರೆ ಹೋರಾಟ ಮಾಡುವುದಾಗಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಶೃಂಗೇರಿ ತಾಲೂಕಿನ ಪದಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.


ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ 
ಚಿಕ್ಕಮಗಳೂರು (ನ.16):  ಕಂದಾಯ ಇಲಾಖೆಯ ಸರ್ಕಾರಿ ಜಮೀನುಗಳಿಗೆ ಅವೈಜ್ಞಾನಿಕವಾಗಿ ಮಾಡಿರುವ 4(1) ನೋಟಿಫಿಕೇಶನ್ ಅನ್ನು ಸರಿಪಡಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಶೃಂಗೇರಿ ತಾಲೂಕಿನ ಪದಾಧಿಕಾರಿಗಳು ಚಿಕ್ಕಮಗಳೂರು ಜಿಲ್ಲೆಯ  ಶೃಂಗೇರಿಯ ವಲಯ ಅರಣ್ಯ ಅಧಿಕಾರಿಗೆ ಇಂದು ಮನವಿ ಸಲ್ಲಿಸಿದ್ದಾರೆ.

ಕಂದಾಯ ಇಲಾಖೆಯ ಜಮೀನುಗಳಿಗೆ ಹೊರಡಿಸಲಾಗಿರುವ 4(1) ನೋಟಿಫಿಕೇಶನ್  (Notification) ಅನ್ನು ತಕ್ಷಣವೇ ಹಿಂಪಡೆಯಬೇಕು. ಈ ಜಮೀನು ಬಗ್ಗೆ ರೈತರು ನೀಡಿರುವ ತಕರಾರು ಅರ್ಜಿಗಳನ್ನು ಪರಿಶೀಲಿಸಿ ಸಂಬಂಧಪಟ್ಟ ಜಮೀನು (Lands)ಗಳನ್ನು ರೈತರಿಗೆ ಬಿಟ್ಟುಕೊಡಬೇಕು. ಈ ಕುರಿತಾಗಿ ಅರಣ್ಯ (Forest) ವ್ಯವಸ್ಥಾಪನಾಧಿಕಾರಿಗಳ ಗಮನಕ್ಕೆ ವಿಷಯವನ್ನು ತಲುಪಿಸಿದ್ದರೂ ಕೂಡ ಯಾವುದೇ ಕ್ರಮಗಳನ್ನು ಕೈಗೊಳ್ಳದೇ ಇರುವುದು ಸರಿಯಲ್ಲ. ಫೋರ್ ಒನ್ ನೋಟಿಫಿಕೇಶನ್ ಹೊರಡಿಸಿರುವುದರಿಂದ ಫಾರಂ (Farm) ನಂಬರ್ 53, 57, 94ಸಿ ಅಡಿಯಲ್ಲಿ ಮಂಜೂರಾತಿಗೆ ತಡೆ ಉಂಟಾಗಿದೆ. ಕೂಡಲೇ ಅರಣ್ಯ ವ್ಯವಸ್ಥಾಪನಾಧಿಕಾರಿಗಳು ಶೃಂಗೇರಿ (Shringeri)ತಾಲೂಕಿಗೆ ಆಗಮಿಸಿ ಪರಿಶೀಲನೆ ನಡೆಸಿ ರೈತರು ಕೃಷಿ ಮಾಡಿರುವ ಜಮೀನುಗಳನ್ನು ರೈತರಿಗೆ ಬಿಟ್ಟುಕೊಡಬೇಕೆಂದು ಮನವಿ ಸಲ್ಲಿಸಿದರು. 

Latest Videos

undefined

ಅರಣ್ಯ ಭೂಮಿ ಡಿನೋಟಿಫೈ: ಕೇಂದ್ರಕ್ಕೆ ಬಿಎಸ್‌ವೈ ಮನವಿ

ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ: ಅರಣ್ಯ ಇಲಾಖೆಯು ಈ ಹಿಂದೆ ನೆಟ್ಟಿರುವ ಕಲ್ಲಿನ (Standing Stone) ಗುರುತಿನ ಪಕ್ಕ ಈಗ ಮತ್ತೆ ಗುರುತಿನ ಕಲ್ಲುಗಳನ್ನು ನೆಡುತ್ತಾ ಇರುವುದು ಸರಿಯಲ್ಲ. ಅರಣ್ಯ ವ್ಯವಸ್ಥಾಪನಾಧಿಕಾರಿಗೆ ಈಗಾಗಲೇ ರೈತರು ಮಾಡಿರುವ ಜಮೀನು 4(1) ಸೇರಿದ್ದರೆ, ಕೈ ಬಿಡುವಂತೆ ಅರ್ಜಿ ಸಲ್ಲಿಸಿರುತ್ತಾರೆ. ಆದರೆ ಅಧಿಕಾರಿಗಳು ಇನ್ನೂ ಯಾವುದೇ ಸ್ಥಳಗಳಿಗೆ ಭೇಟಿ ನೀಡಿ (Place Visit) ಪರಿಶೀಲನೆ ಮಾಡಿಲ್ಲ. ಕೂಡಲೇ ಅರಣ್ಯ ವ್ಯವಸ್ಥಾಪನಾ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ರೈತರು ಕೃಷಿ ಮಾಡಿರುವ ಜಮೀನು ಮತ್ತು ವಾಸದ ಮನೆ (Residential house) ಮುಂತಾದ ರೈತರಿಗೆ ಆವಶ್ಯಕತೆಯಿರುವ ಪ್ರದೇಶಗಳನ್ನು ಅವರಿಗೆ ಬಿಟ್ಟುಕೊಡಬೇಕು. ರೈತರು ಉಪಯೋಗಿಸದ ಜಮೀನುಗಳ ಬಗ್ಗೆ ಮುಂದಿನ ಕ್ರಮ ಕೈಗೊಳ್ಳಬೇಕು ಎಂದು ಕೋರಲಾಗಿದೆ. ಹೀಗಾಗಿ ರೈತರ ಬಳಕೆ ಮಾಡುತ್ತಿರುವ ಜಮೀನಿನಲ್ಲಿ ಯಾವುದೇ ಕ್ರಮಗಳನ್ನು ಕೈಗೊಳ್ಳದೇ, ತಕ್ಷಣದಿಂದ ಕಲ್ಲು ನೆಡುವುದನ್ನು ನಿಲ್ಲಿಸಬೇಕೆಂದು ಆಗ್ರಹಿಸಿದ್ದಾರೆ.

ಸಿಎಂ ನೇತೃತ್ವದಲ್ಲಿ ಕಡೂರು ತಾಲೂಕಿನಲ್ಲಿ ಜನ ಸಂಕಲ್ಪ ಸಮಾವೇಶ

ಅತೀವೃಷ್ಟಿ, ಎಲೆಚುಕ್ಕಿ ರೋಗಗಳಿಂದ ಬೆಳೆ ನಾಶ:  ಶೃಂಗೇರಿ ತಾಲ್ಲೂಕಿನದ್ಯಾಂತ ರೈತರು ಅತೀವೃಷ್ಟಿ (Flood), ವಾಣಿಜ್ಯ ಬೆಳೆಯಾದ ಅಡಿಕೆಗೆ ಹಳದಿ ಎಲೆ ರೋಗ (Yellow leaf disease) ಮತ್ತು ಎಲೆ ಚುಕ್ಕಿ ರೋಗ ಮುಂತಾದ ಸಂಕಷ್ಟಕ್ಕೆ ತುತ್ತಾಗಿದ್ದಾರೆ. ಸರ್ಕಾರಿ ಜಮೀನಿನಲ್ಲಿ ಮಾಡಿರುವ ಕೃಷಿಯೂ (Agriculture) ಜೀವನಕ್ಕೆ ಅವಶ್ಯಕವಾಗಿರುತ್ತದೆ. ಆದ್ದರಿಂದ ಈ ಪ್ರದೇಶಗಳನ್ನು ಮೀಸಲು ಅರಣ್ಯ (Reserved Forest)ಎಂಬುದಾಗಿ ಘೋಷಣೆ ಮಾಡಿದಲ್ಲಿ ರೈತರಿಗೆ ತುಂಬಾ ತೊಂದರೆಯಾಗುತ್ತದೆ. ಅರಣ್ಯ ಇಲಾಖೆಯು ಈ ವಿಷಯಗಳನ್ನು ಗಮನಿಸಿ ರೈತರಿಗೆ ನೆರವಾಗದೇ ಹೋದಲ್ಲಿ ಉಗ್ರವಾದ ಹೋರಾಟ (Protest) ಮಾಡುವುದಾಗಿ ತಿಳಿಸಿದರು. ಈ ವೇಳೆ ಕರ್ನಾಟಕ ರಾಜ್ಯ ರೈತ ಸಂಘ - ಹಸಿರು ಸೇನೆಯ ಅಧ್ಯಕ್ಷರು, ಸದಸ್ಯರು ಪದಾಧಿಕಾರಿಗಳು ಹಾಗೂ ರೈತರು ಇದ್ದರು.

click me!