ಪಂಜರ ಗಿಳಿಗಳು ಹಾರಿಹೋದಾವು - ಸರ್ವರು ಎಚ್ಚರ..ಎಚ್ಚರ : ಮೈಲಾರ ಕಾರಣಿಕ

By Web Desk  |  First Published Oct 9, 2019, 11:24 AM IST

ಹಾವೇರಿ ರಾಣೆಬೆನ್ನೂರಿನ ಕಾರಣಿಕ ನುಡಿದ ಬೆನ್ನಲ್ಲೇ ಚಿಕ್ಕಮಗಳೂರಿನ ಮೈಲಾರಲಿಂಗೇಶ್ವರ ಕೂಡ ರಾಜ್ಯ, ರಾಷ್ಟ್ರ ರಾಜಕೀಯ ಹಾಗೂ ಮುಂದಿನ ಆಗು ಹೋಗುಗಳ ಬಗ್ಗೆ  ಕಾರಣಿಕ ನುಡಿದಿದ್ದಾರೆ. 


ಚಿಕ್ಕಮಗಳೂರು [ಅ.09]:  ರಾಜ್ಯ ರಾಜಕೀಯ ಹಾಗೂ ಆಗುಹೋಗುಗಳ ಬಗ್ಗೆ ಚಿಕ್ಕಮಗಳೂರಿನ ಮೈಲಾರಲಿಂಗೇಶ್ವರ ಕಾರಣಿಕ ನುಡಿದಿದ್ದಾರೆ. 

ಇಟ್ಟ ರಾಮನ ಬಾಣಕ್ಕೆ ಹುಸಿಯಿಲ್ಲ, ಪಂಜರದ ಗಿಳಿಗಳು ಹಾರಿ ಹೋದಾವು, ಕಟ್ಟಿದ ಕೋಟೆ ಪರರದಾಯಿತು, ಎಚ್ಚರ.. ಎಚ್ಚರ ಎಂದು ರಾಜ್ಯ, ರಾಷ್ಟ್ರದ ರಾಜಕೀಯದ ಬಗ್ಗೆ ಚಿಕ್ಕಮಗಳೂರು ಮೈಲಾರಲಿಂಗ ಭವಿಷ್ಯ ನುಡಿದಿದ್ದಾರೆ. 

Latest Videos

undefined

ಪಂಜರದ ಗಿಳಿಗಳು ಎಂದು ಅನರ್ಹರು ಹಾಗೂ ರಾಜ್ಯ ಸರ್ಕಾರದ ಬಗ್ಗೆ ಭವಿಷ್ಯ ನುಡಿದಿರುವ ಸಾಧ್ಯತೆ ಇದ್ದು, ಮುಂದಿನ ಆಗು ಹೋಗುಗಳ ಬಗ್ಗೆ ತಿಳಿಸಿದ್ದಾರೆ.

ರಾಜ್ಯದಲ್ಲಿ ಈಗಾಗಲೇ ಅತ್ಯಧಿಕ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಕಳೆದ ಎರಡು ತಿಂಗಳ ಹಿಂದೆ ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಸರ್ವರು ಎಚ್ಚರ ಎಚ್ಚರ ಎಂದು ಸಂದೇಶ ನೀಡಲಾಗಿದೆ.  

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ರಾಷ್ಟ್ರ ಮತ್ತು ರಾಜ್ಯದ ಆಗುಹೋಗುಗಳ ಮೇಲೆ ದಶರಥ ಪೂಜಾರರ ಬಾಯಲ್ಲಿ ಮೈಲಾರ ಲಿಂಗೇಶ್ವರರು ಕಾರಣಿಕ ನುಡಿದಿದ್ದಾರೆ. 

click me!