ನನ್ನ ಕ್ಷೇತ್ರಕ್ಕೆ ಯಾರೇ ಕೈ ಹಾಕಿದರೂ ಕೈ ಕತ್ತರಿಸುವುದಾಗಿ ಕಾಂಗ್ರೆಸ್ ಶಾಸಕರೋರ್ವರು ಎಚ್ಚರಿಕೆ ನೀಡಿದ್ದಾರೆ. ಅನರ್ಹ ಶಾಸಕರೋರ್ವರಿಗೆ ಈ ಸಂದೇಶ ರವಾನಿಸಲಾಗಿದೆ.
ಚಿಕ್ಕಬಳ್ಳಾಪುರ [ಅ.21]: ಗೌರಿಬಿದನೂರು ತಾಲೂಕಿಗೆ ಸೇರಿದ ಹೋಬಳಿಯೊಂದನ್ನು ನೂತನವಾಗಿ ರಚನೆಯಾಗಲಿರುವ ಮಂಚೇನಹಳ್ಳಿ ತಾಲೂಕಿಗೆ ಸೇರ್ಪಡೆ ಮಾಡುತ್ತಿದ್ದಾರೆ ಎಂಬ ವಿಚಾರಕ್ಕೆ ಸಂಬಂಧಿಸಿ ಪ್ರಸ್ತುತ ಕಿಡಿ ಹೊತ್ತಿಕೊಂಡಿದ್ದು, ಗೌರಿಬಿದನೂರು ಶಾಸಕ ಎನ್.ಎಚ್.ಶಿವಶಂಕರರೆಡ್ಡಿ ಮತ್ತು ಚಿಕ್ಕಬಳ್ಳಾಪುರದ ಅನರ್ಹ ಶಾಸಕ ಡಾ.ಕೆ.ಸುಧಾಕರ್ ನಡುವೆ ಮಾತಿನ ಸಮರಕ್ಕೆ ವೇದಿಕೆ ಒದಗಿಸಿದಂತಾಗಿದೆ.
‘ನನ್ನ ಕ್ಷೇತ್ರಕ್ಕೆ ಕೈ ಹಾಕಿದರೆ ಕೆ ಕತ್ತರಿಸುತ್ತೇನೆ ಎಂದು ಎನ್.ಎಚ್.ಶಿವಶಂಕರರೆಡ್ಡಿ ಹೇಳಿದ್ದರೆ, ಅದಕ್ಕೆ ಟ್ವೀಟರ್‌ನಲ್ಲಿ ತಿರುಗೇಟು ನೀಡಿರುವ ಡಾ. ಸುಧಾಕರ್ ನನ್ನ ಕೈ ಅಲ್ಲ, ಎದೆ ಬಗೆದರೂ ಮಂಚೇನಹಳ್ಳಿ ತಾಲೂಕು ರಚನೆ ವಿಚಾರದಲ್ಲಿ ನಾನು ನನ್ನ ಜನರಿಗೆ ಬದ್ಧನಾಗಿದ್ದೇನೆ’ ಎಂದು ತಿಳಿಸಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಗೌರಿಬಿದನೂರು ತಾಲೂಕಿನ ಹಿರೇಬಿದನೂರು ಗ್ರಾಮದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಎನ್.ಎಚ್. ಶಿವಶಂಕರರೆಡ್ಡಿ, ತೊಂಡೇಬಾವಿ ಹೋಬಳಿಯನ್ನು ನೂತನವಾಗಿ ರಚನೆಯಾಗಲಿರುವ ಮಂಚೇನಹಳ್ಳಿ ತಾಲೂಕಿಗೆ ಸೇರ್ಪಡೆ ಮಾಡಲು ಚಿಕ್ಕಬಳ್ಳಾಪುರದ ಸುಧಾಕರ್ ಯತ್ನಿಸುತ್ತಿದ್ದು, ಇದಕ್ಕೆ ತೊಂಡೇಬಾವಿ ಹೋಬಳಿಯ ಹಲವು ಕಳ್ಳರು ಸಹಕಾರ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಇದೇವೇಳೆ ಮಂಚೇನಹಳ್ಳಿ ತಾಲೂಕು ಮಾಡಲು ತಮ್ಮ ವಿರೋಧವಿಲ್ಲ, ಜೊತೆಗೆ ಚಿಕ್ಕಬಳ್ಳಾಪುರ ತಾಲೂಕಿನ ನಂದಿ ಅಥವಾ ಮಂಡಿಕಲ್ ಹೋಬಳಿಗಳನ್ನೂ ಅಗತ್ಯವಿದ್ದರೆ ಮಂಚೇನಹಳ್ಳಿ ತಾಲೂಕಿಗೆ ಸೇರ್ಪಡೆಗೊಳಿಸಲಿ. ಅದನ್ನು ಬಿಟ್ಟು ನನ್ನ ಕ್ಷೇತ್ರಕ್ಕೆ ಕೈ ಹಾಕಿದರೆ ಕೈ ಕತ್ತರಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.