ಚಿಕ್ಕಬಳ್ಳಾಪುರದಲ್ಲೇ ವೈದ್ಯ ಕಾಲೇಜು ಆರಂಭಕ್ಕೆ ಒತ್ತಾಯಿಸಿ ಪ್ರತಿಭನಟನೆ

By Web DeskFirst Published Oct 31, 2019, 10:21 AM IST
Highlights

ವೈದ್ಯಕೀಯ ಕಾಲೇಜನ್ನು ಚಿಕ್ಕಬಳ್ಳಾಪುರದಲ್ಲಿಯೇ ಸ್ಥಾಪಿಸಲು ಆಗ್ರಹ| ಅನರ್ಹ ಶಾಸಕ ಡಾ.ಸುಧಾಕರ್‌ ಬೆಂಬಲಿಗರು ಭಾರಿ ಪ್ರತಿಭಟನೆ| ಮಳೆಯಲ್ಲಿಯೇ ಪ್ರತಿಭಟನಾ ಮೆರವಣಿಗೆ| ಡಿಕೆಶಿ ಹೇಳಿಕೆಗೆ ಖಂಡನೆ

ಚಿಕ್ಕಬಳ್ಳಾಪುರ[ಅ.30]: ವೈದ್ಯಕೀಯ ಕಾಲೇಜನ್ನು ಚಿಕ್ಕಬಳ್ಳಾಪುರದಲ್ಲಿಯೇ ಸ್ಥಾಪಿಸಬೇಕು ಎಂದು ಒತ್ತಾಯಿಸಿ ಅನರ್ಹ ಶಾಸಕ ಡಾ.ಸುಧಾಕರ್‌ ಅವರ ಸಹಸ್ರಾರು ಬೆಂಬಲಿಗರು ಬುಧವಾರ ಭಾರಿ ಪ್ರತಿಭಟನೆ ನಡೆಸಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ನಗರದ ಪಿಎಲ್‌ಡಿ ಬ್ಯಾಂಕ್ ಮುಂಭಾಗದಲ್ಲಿ ಜಮಾಯಿಸಿದ ನೂರಾರು ಪ್ರತಿಭಟನಾಕಾರರು, ಬಿಬಿ ರಸ್ತೆ ಮೂಲಕ ಶಿಡ್ಲಘಟ್ಟ ವೃತ್ತಕ್ಕೆ ಬಂದು ಕೆಲ ಕಾಲ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು. ಶಿಡ್ಲಘಟ್ಟ ವೃತ್ತ ಸಮೀಪಿಸುತ್ತಿದ್ದಂತೆ ಜೋರುಮಳೆ ಆರಂಭವಾಯಿತು. ಹಾಗಾಗಿ ಪ್ರತಿಭಟನೆ ಮೊಟುಕುಗಳಿಸಿ ವಾಪಸ್ ಹೋಗಲು ನಾಯಕರು ಧ್ವನಿವರ್ಧಕದಲ್ಲಿ ತಿಳಿಸಿದರು. ಆದರೆ ,ಪ್ರತಿಭಟನಾಕಾರರು ಪ್ರತಿಭಟನೆ ಮೊಟುಕುಗೊಳಿಸಲು ಸಾಧ್ಯವಿಲ್ಲ, ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲೇಬೇಕು ಎಂದು ಪಟ್ಟು ಹಿಡಿದು ಮಳೆಯಲ್ಲಿಯೇ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಡಿಕೆಶಿ ಹೇಳಿಕೆಗೆ ಖಂಡನೆ

ಇದೇ ವೇಳೆ ನನ್ನ ಪ್ರಾಣ ಹೋದರೂ ವೈದ್ಯಕೀಯ ಕಾಲೇಜು ಕನಕಪುರದಿಂದ ಹೊರ ಹೋಗಲು ಬಿಡಲ್ಲಎಂದಿದ್ದ ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಹೇಳಿಕೆಯನ್ನು ಪ್ರತಿಭಟನಾಕಾರರು ಖಂಡಿಸಿದರು. ಚಿಕ್ಕಬಳ್ಳಾಪುರಕ್ಕೆ ಮಂಜೂರು ಮಾಡಲಾಗಿರುವ ವೈದ್ಯಕೀಯ ಕಾಲೇಜನ್ನುಇಲ್ಲಿಯೇ ಸ್ಥಾಪಿಸಬೇಕು. ಕನಕಪುರಕ್ಕೆ ಸ್ಥಳಾಂತರ ವಾಗಲು ಬಿಡುವುದಿಲ್ಲ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

click me!