UPSC ನೇಮಕಾತಿ 2019: IAS,IFC ಹುದ್ದೆಗಳಿಗೆ ಅರ್ಜಿ ಆಹ್ವಾನ

By Web Desk  |  First Published Feb 22, 2019, 3:41 PM IST

ಐಎಎಸ್ ಹಾಗೂ ಐಎಫ್ ಎಸ್ ಹುದ್ದೆಗಳ ನೇಮಕಾತಿಗೆ UPSC ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸುವುದು ಹೇಗೆ? ಇದಕ್ಕೆ ಬೇಕಾದ ಅರ್ಹತೆಗಳೇನು? ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ.


ಬೆಂಗಳೂರು, (ಫೆ.22): ಕೇಂದ್ರ ನಾಗರಿಕ ಸೇವಾ ಆಯೋಗ (ಯುಪಿಎಸ್ ಸಿ) ಐಎಎಸ್ ಹಾಗೂ ಐಎಫ್ ಎಸ್ ಹುದ್ದೆಗಳ ನೇಮಕಾತಿಗೆ ಸೂಚನೆ ಹೊರಡಿಸಿದೆ. 

ಒಟ್ಟು 986 ಹುದ್ದೆಗಳಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು,  ಅರ್ಹ ಆಸಕ್ತ ಅಭ್ಯರ್ಥಿಗಳು ಮಾರ್ಚ್ 18, 2019ರೊಳಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ.

Latest Videos

undefined

ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಗ್ರೂಪ್ 'B'ಹುದ್ದೆಗಳ ನೇಮಕಾತಿ

ಉದ್ಯೋಗ ಸ್ಥಳ :ಭಾರತದೆಲ್ಲೆಡೆ
ವಿದ್ಯಾರ್ಹತೆ: ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು.

ವಯೋಮಿತಿ : ಕನಿಷ್ಠ ವಯಸ್ಸು 21 ವರ್ಷ, ಗರಿಷ್ಠ ವಯಸ್ಸು 32 ವರ್ಷ ನಿಗದಿಪಡಿಸಲಾಗಿದೆ.

SDA,FDA ಹುದ್ದೆಗಳ ನೇಮಕಾತಿಗೆ KPSC ಅರ್ಜಿ ಆಹ್ವಾನ

ನೇಮಕಾತಿ ಪ್ರಕ್ರಿಯೆ: ಲಿಖಿತ ಪರೀಕ್ಷೆ, ವೈಯಕ್ತಿಕ ಸಂದರ್ಶನ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯಲಿದೆ.
ಅರ್ಜಿಶುಲ್ಕ: ಸಾಮಾನ್ಯ ಹಾಗೂ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 100 ರೂ. ಹಾಗೂ SC/ST/ಮಾಜಿ ಯೋಧ ಇನ್ನಿತರ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕವಿಲ್ಲ ಇರುವುದಿಲ್ಲ.

ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ. ಕಚೇರಿ ವೆಬ್‌ಸೈಟ್ ಗಾಗಿ ಇಲ್ಲಿ ಕ್ಲಿಕ್ ಮಾಡಿ.

click me!