ಅರ್ಜಿ ಹಾಕಿದ್ದ ಅಭ್ಯರ್ಥಿಗಳಿಗೆ ಗುಡ್‌ ನ್ಯೂಸ್: 1,40 ಲಕ್ಷ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಶುರು

By Suvarna News  |  First Published Sep 6, 2020, 2:24 PM IST

ಕೊರೋನಾದಿಂದ ಸ್ಥಗಿತಗೊಂಡಿದ್ದ 1,40,640 ಹುದ್ದೆಗಳ ನೇಮಕಾತಿ ಪ್ರಕ್ರಿಯೆಗೆ ಶರುವಾಗಿದೆ. ಇದರಿಂದ ಅರ್ಜಿ ಹಾಕಿದ್ದ ಅಭ್ಯರ್ಥಿಗಳು ನಿಟ್ಟುಸಿರು ಬಿಡುವಂತಾಗಿದೆ.


ನವದೆಹಲಿ, (ಸೆ.06): ಭಾರತೀಯ ರೈಲ್ವೆಯಲ್ಲಿನ ನೇಮಕಾತಿ ಪ್ರಕ್ರಿಯೆ  ಡಿಸೆಂಬರ್ 15ರಿಂದ ಮೊದಲ ಹಂತದ ಕಂಪ್ಯೂಟರ್ ಆಧಾರಿತ ಪರೀಕ್ಷೆಗಳನ್ನು ನಡೆಸಲು ಪ್ರಾರಂಭಿಸಲಿದೆ.

ಈ ಕುರಿತು ರಾಷ್ಟ್ರೀಯ ಸಾರಿಗೆ ಮಂಡಳಿಯ ಅಧ್ಯಕ್ಷ ವಿ.ಕೆ. ಯಾದವ್ ತಿಳಿಸಿದ್ದಾರೆ. ವಿವಿಧ ವಿಭಾಗಗಳಲ್ಲಿ ಖಾಲಿ ಇರುವ 1,40,640 ಹುದ್ದೆಗಳಿಗೆ ಕೊರೋನಾ ಭೀತಿ ಶುರುವಾಗುವ ಮುನ್ನ ಅರ್ಜಿ ಆಹ್ವಾನಿಸಲಾಗಿತ್ತು. 

Tap to resize

Latest Videos

undefined

 ಬಳಿಕ ಕೊರೋನಾ ಸಂಕಷ್ಟದಿಂದಾಗಿ ಈ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಸ್ಥಗಿತವಾಗಿತ್ತು. ಇದೀಗ ಅವುಗಳ ನೇಮಕಾತಿ ಪ್ರಕ್ರಿಯೆ  ಇದೇ ಡಿ.15ರಿಂದ ಆರಂಭವಾಗಲಿದೆ.

ಅಂಚೆ ಇಲಾಖೆಯಲ್ಲಿ ನೇಮಕಾತಿ: ವಿದ್ಯಾರ್ಹತೆ 10ನೇ ತರಗತಿ

1,40,640 ಹುದ್ದೆಗಳಿಗೆ  2.42 ಕೋಟಿ ಅರ್ಜಿಗಳು ಬಂದಿವೆ. ಈ ಅರ್ಜಿಗಳನ್ನು ಮುಂದಿನ ಹಂತಕ್ಕಾಗಿ ಈಗಾಗಲೇ ಅಂತಿಮಗೊಳಿಸಲಾಗಿದೆ.  ವಿ.ಕೆ.ಯಾದವ್ ಮಾಹಿತಿ ನೀಡಿದ್ದಾರೆ.

ಗಾರ್ಡ್​, ಕ್ಲರ್ಕ್​, ಟ್ರ್ಯಾಕ್​ ನಿರ್ವಹಣಕಾರ, ಪಾಯಿಂಟ್ಸ್​ಮೆನ್​ಗ ಹುದ್ದೆಗಳಿನ್ನು ಇದು ಒಳಗೊಂಡಿದೆ. ಈ ಕುರಿತು ರೈಲ್ವೆ ಸಚಿವ ಪಿಯೂಷ್​ ಗೋಯಲ್​ ಕೂಡ ಟ್ವಿಟರ್‌ ಮೂಲಕ ಮಾಹಿತಿ ನೀಡಿದ್ದಾರೆ. ಸಂಪೂರ್ಣ ಮಾಹಿತಿಯನ್ನು ಶೀಘ್ರದಲ್ಲಿಯೇ ಪ್ರಕಟಿಸಲಾಗುವುದು ಎಂದು ಅವರು ಹೇಳಿದ್ದಾರೆ.

click me!