ಬಿಎಸ್‌ಎನ್‌ಎಲ್‌ 78000 ಸಿಬ್ಬಂದಿ ಸ್ವಯಂ ನಿವೃತ್ತಿ!

By Kannadaprabha NewsFirst Published Feb 3, 2020, 10:18 AM IST
Highlights

ಬಿಎಸ್ಸೆನ್ನೆಲ್‌ನ 78000 ಸಿಬ್ಬಂದಿ ನಿವೃತ್ತಿ| ಸ್ವಯಂ ನಿವೃತ್ತಿ ಯೋಜನೆಯಡಿ ಜ.31ಕ್ಕೆ ಕಡೆಯ ದಿನದ ಸೇವೆ

ದೆಹಲಿ[ಫೆ.03]: ನಷ್ಟದ ಸುಳಿಯಲ್ಲಿ ಸಿಕ್ಕಿ ಒದ್ದಾಡುತ್ತಿರುವ ಸರ್ಕಾರಿ ಸ್ವಾಮ್ಯದ ಟೆಲಿಕಾಂ ಸಂಸ್ಥೆ ಬಿಎಸ್‌ಎನ್‌ಎಲ್‌ನಿಂದ ಜನವರಿ 31 ರಂದು 78,300 ಮಂದಿ ಸ್ವಯಂ ನಿವೃತ್ತಿ ಪಡೆದುಕೊಂಡಿದ್ದಾರೆ. ನಷ್ಟ ತಗ್ಗಿಸಲು ನೌಕರರಿಗೆ ಬಿಎಸ್‌ಎನ್‌ಎಲ್‌ ನೀಡಿದ್ದ ಸ್ವಯಂ ನಿವೃತ್ತಿ ಯೋಜನೆ (ವಿಆರ್‌ಎಸ್‌)ಯ ಫಲ ಇದು.

ಸ್ವಯಂ ನಿವೃತ್ತಿ ಯೋಜನೆಯಡಿ ಒಟ್ಟು ಬಿಎಸ್‌ಎನ್‌ಎಲ್‌ನ 78,300 ಹಾಗೂ ಎಂಟಿಎನ್‌ಎಲ್‌ನ 14,378 ನೌಕರರು ಸೇರಿ ಒಟ್ಟು 92,678 ಮಂದಿ ವಿಆರ್‌ಎಸ್‌ಗೆ ಅರ್ಜಿ ಸಲ್ಲಿಸಿದ್ದರು. ಇದರ ಜತೆಗೆ ಇನ್ನೂ 6000 ಮಂದಿ ನಿವೃತ್ತಿ ಹೊಂದಿದ್ದು, ಸಂಸ್ಥೆಯ ಒಟ್ಟು ನೌಕರರ ಸಂಖ್ಯೆ ಶೇ.50ರಷ್ಟು ಕಡಿಮೆಯಾಗಿದೆ.

ಈ ಎರಡೂ ಸಂಸ್ಥೆಯಲ್ಲಿ ಒಟ್ಟು 1,85,000 ಮಂದಿ ನೌಕರರು ಇದ್ದರು. ಇನ್ನು ಮುಂದೆ 85 ಸಾವಿರ ಮಂದಿ ಮಾತ್ರ ಮಂದಿ ಸಂಸ್ಥೆಯಲ್ಲಿ ಇರಲಿದ್ದಾರೆ. ಯೋಜನೆಯ ಆರಂಭದಲ್ಲಿ ಒಟ್ಟು 82 ಸಾವಿರ ಮಂದಿಯನ್ನು ಕಡಿತಗೊಳಿಸುವ ಉದ್ದೇಶ ಇತ್ತು.

ಫೆಬ್ರವರಿ 3ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

click me!