Hindustan Copper Limited Recruitment;ಗ್ರಾಜುಯೇಟ್ ಇಂಜಿನಿಯರ್ ಹುದ್ದೆಗಳಿಗೆ ನೇಮಕಾತಿ

By Gowthami K  |  First Published Oct 15, 2022, 1:11 PM IST

ಹಿಂದೂಸ್ತಾನ್ ಕಾಪರ್ ಲಿಮಿಟೆಡ್ ಖಾಲಿ ಇರುವ ಗ್ರಾಜುಯೇಟ್ ಇಂಜಿನಿಯರ್ ಟ್ರೈನಿ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಗೇಟ್ ಸ್ಕೋರ್ ಮೂಲಕ ನೇಮಕಾತಿ ನಡೆಯಲಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಅಕ್ಟೋಬರ್ 31 ಆಗಿದೆ.


ಹಿಂದೂಸ್ತಾನ್ ಕಾಪರ್ ಲಿಮಿಟೆಡ್ ಖಾಲಿ ಇರುವ ಗ್ರಾಜುಯೇಟ್ ಇಂಜಿನಿಯರ್ ಟ್ರೈನಿ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಗೇಟ್ ಸ್ಕೋರ್ ಮೂಲಕ ನೇಮಕಾತಿ ನಡೆಯಲಿದೆ. ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಹಿಂದೂಸ್ತಾನ್ ಕಾಪರ್‌ನ ಅಧಿಕೃತ ಸೈಟ್ hindustancopper.com ಮೂಲಕ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿಯಲ್ಲಿ ಒಟ್ಟು 84 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಅಕ್ಟೋಬರ್ 10 ರಿಂದ ನೋಂದಣಿ ಪ್ರಕ್ರಿಯೆ ಆರಂಭವಾಗಿದ್ದು  ಅಕ್ಟೋಬರ್ 31, 2022 ವರೆಗೂ ಅರ್ಜಿ ಸಲ್ಲಿಸಲು ಅವಕಾಶ ಇದೆ.  ಅರ್ಜಿದಾರರು GATE ಪರೀಕ್ಷೆಯಲ್ಲಿ ಅರ್ಹತೆ ಪಡೆದಿರಬೇಕು ಮತ್ತು ಅಗತ್ಯ ಅರ್ಹತಾ ಕೋಷ್ಟಕದಲ್ಲಿ ಉಲ್ಲೇಖಿಸಲಾದ ಅರ್ಹತಾ ಪದವಿ ಶಿಸ್ತಿನ ಅದೇ ವಿಭಾಗದಲ್ಲಿ  GATE-2022 ಅಥವಾ GATE-2021 ಸ್ಕೋರ್ ಅನ್ನು ಹೊಂದಿರಬೇಕು. ಸರ್ಕಾರ / ಯುಜಿಸಿ / ಎಐಯು / ಎಐಸಿಟಿಇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ / ಸಂಸ್ಥೆಗಳಿಂದ ಅರ್ಹತಾ ಪದವಿಯಲ್ಲಿ ಒಟ್ಟು 60% ಅಂಕಗಳನ್ನು (ಎಸ್‌ಸಿ / ಎಸ್‌ಟಿಗೆ 55%) ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. 

ವಯೋಮಿತಿ: ಹಿಂದೂಸ್ತಾನ್ ಕಾಪರ್ ಲಿಮಿಟೆಡ್ ಖಾಲಿ ಇರುವ ಗ್ರಾಜುಯೇಟ್ ಇಂಜಿನಿಯರ್ ಟ್ರೈನಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳ ವಯಸ್ಸಿನ ಮಿತಿಯು 28 ವರ್ಷಕ್ಕಿಂತ ಕಡಿಮೆಯಿರಬೇಕು. 

Tap to resize

Latest Videos

undefined

ಆಯ್ಕೆ ಪ್ರಕ್ರಿಯೆ: ಗ್ರಾಜುಯೇಟ್ ಇಂಜಿನಿಯರ್ ಟ್ರೈನಿ ಹುದ್ದೆಗೆ ಆಯ್ಕೆ ಪ್ರಕ್ರಿಯೆಯು ಎರಡು-ಹಂತದಲ್ಲಿ ನಡೆಯಲಿದ್ದು ಪ್ರತಿ ಹಂತಕ್ಕೆ ನಿಗದಿಪಡಿಸಲಾದ ಅಂಕ ದೊರೆಯಬೇಕು. ಗೇಟ್ ಸ್ಕೋರ್  ನಲ್ಲಿ ಶೇ.70 ಪ್ರತಿಶತ  ಮತ್ತು ವೈಯಕ್ತಿಕ ಸಂದರ್ಶನವು ಶೇಕಡಾ 30% ಅಂಕ ಹೊಂದಿದೆ.

ಅರ್ಜಿ ಶುಲ್ಕ: ಸಾಮಾನ್ಯ, OBC ಮತ್ತು EWS ವರ್ಗದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ₹500. ಎಲ್ಲಾ ಇತರ ಅಭ್ಯರ್ಥಿಗಳು PwBD ಗಳು ಸೇರಿದಂತೆ ಯಾವುದೇ ಶುಲ್ಕವನ್ನು ಪಾವತಿಸುವಂತಿಲ್ಲ.

click me!