ಗುಡ್‌ ನ್ಯೂಸ್: ವರ್ಷದಲ್ಲಿ 2 ಬಾರಿ ನೌಕಾಸೇನೆ ಹುದ್ದೆ ಭರ್ತಿಗೆ ಪ್ರವೇಶ ಪರೀಕ್ಷೆ

By Web DeskFirst Published May 15, 2019, 4:09 PM IST
Highlights

 ಈ ಹಿಂದೆ ನೌಕಾ ಸೇನೆಗೆ ವಿಶ್ವವಿದ್ಯಾಲಯ ಪ್ರವೇಶ ಸ್ಕೀಂ (ಯುಇಎಸ್) ಹಾಗೂ ಕಂಬೈಂಡಿಡ್ ಡಿಫೆನ್ಸ್ ಸರ್ವಿಸಸ್​ಗಳ(ಸಿಡಿಎಸ್) ಮೂಲಕ ಅಧಿಕಾರಿಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿತ್ತು. ಆದ್ರೆ ಇದೀಗ ಇದೇ ಮೊದಲ ಬಾರಿಗೆ  ಭಾರತೀಯ ನೌಕಾಪಡೆ ಹುದ್ದೆಗಳ ಭರ್ತಿಗಾಗಿ ಒಂದು ವರ್ಷದಲ್ಲಿ 2 ಬಾರಿ ಪ್ರವೇಶ ಪರೀಕ್ಷೆ ನಡೆಯಲಿದೆ.

ನವದೆಹಲಿ, (ಮೇ.15): ಭಾರತೀಯ ನೌಕಾಪಡೆ ಹುದ್ದೆಗಳ ಭರ್ತಿಗಾಗಿ ಇದೇ ಮೊದಲ ಬಾರಿಗೆ (ಐಎನ್​ಇಟಿ-ಇಂಡಿಯನ್ ನೇವಿ ಎಂಟ್ರೆನ್ಸ್ ಟೆಸ್ಟ್ ) ಪರೀಕ್ಷೆ ಪ್ರಾರಂಭಿಸಿದೆ.

ಇನ್ನು ಮುಂದೆ ವರ್ಷದಲ್ಲಿ 2 ಬಾರಿ ಐಎನ್​ಇಟಿ ಪರೀಕ್ಷೆ ನಡೆಯಲಿದ್ದು, ಪ್ರಸಕ್ತ ವರ್ಷ ಸೆಪ್ಟೆಂಬರ್​ನಲ್ಲಿ ಮೊದಲ ಪರೀಕ್ಷೆ ನಡೆಯಲಿದ್ದು, ಎಲ್ಲ ವಿಭಾಗದ ಪದವೀಧರರು ಈ ಪರೀಕ್ಷೆ ಬರೆಯಬಹುದು. 

ಹೆಚ್ಚಿನ ಜಾಬ್ಸ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದುವರೆಗೂ ನೌಕಾ ಸೇನೆಗೆ ವಿಶ್ವವಿದ್ಯಾಲಯ ಪ್ರವೇಶ ಸ್ಕೀಂ (ಯುಇಎಸ್) ಹಾಗೂ ಕಂಬೈಂಡಿಡ್ ಡಿಫೆನ್ಸ್ ಸರ್ವಿಸಸ್​ಗಳ(ಸಿಡಿಎಸ್) ಮೂಲಕ ಅಧಿಕಾರಿಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿತ್ತು.

ಬೆಂಗಳೂರಿನಲ್ಲಿ ಭಾರತೀಯ ಸೇನಾ ನೇಮಕಾತಿ ರ್‍ಯಾಲಿ: ಅರ್ಜಿ ಹಾಕಿ

ಆನ್​ಲೈನ್​ನಲ್ಲಿ ನಡೆಯುವ ಐಎನ್​ಇಟಿಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಮಾತ್ರ ನಂತರದ ಎಸ್​ಎಸ್​ಬಿ(ಸರ್ವಿಸಸ್ ಸೆಲೆಕ್ಷನ್ ಬೋರ್ಡ್)ಗೆ ಅರ್ಹತೆ ಪಡೆಯುತ್ತಾರೆ. ಅಭ್ಯರ್ಥಿಗಳ ಮನೋಬಲ, ದೈಹಿಕ ಹಾಗೂ ಬೌದ್ಧಿಕ ಪರೀಕ್ಷೆ ಮಾಡಲಾಗುತ್ತದೆ. 

ಪರೀಕ್ಷೆಯು ನಾಲ್ಕು ವಿಭಾಗಗಳನ್ನು ಹೊಂದಿರುತ್ತದೆ.
English
Reasoning and Numerical Ability 
General Science and Mathematical Aptitude
General Knowledge

ಹೆಚ್ಚಿನ ಮಾಹಿತಿಗೆ ನೌಕಾಪಡೆ ವೆಬ್​ಸೈಟ್ Joinindiannavy.go.in ಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಬಹುದು.

click me!