ಕಾರು ಕಂಪನಿಗಳು ಯಾಕೆ ಸ್ವಂತ ಟೈರ್‌ಗಳನ್ನ ತಯಾರಿಸಲ್ಲ? ಯಾಕೆ ಇತರರ ಟೈರ್‌ಗಳನ್ನ ಪಡೆಯುತ್ತವೆ?

Published : Oct 24, 2026, 10:34 PM IST
tire manufacturing

ಸಾರಾಂಶ

ಕಾರು ತಯಾರಿಕೆ ಮತ್ತು ಟೈರ್ ತಯಾರಿಕೆ ಎರಡು ವಿಭಿನ್ನ ಕ್ಷೇತ್ರಗಳಾಗಿದ್ದು, ಕಾರು ಕಂಪನಿಗಳು ವೆಚ್ಚ ಕಡಿಮೆ ಮಾಡಲು ಟೈರ್‌ಗಳನ್ನು ಹೊರಗುತ್ತಿಗೆ ನೀಡುತ್ತವೆ. ಸ್ವಂತ ಟೈರ್ ಉತ್ಪಾದನೆಯಿಂದ ಬಂಡವಾಳ ಹೆಚ್ಚಾಗುವ ಜೊತೆಗೆ, ಸುರಕ್ಷತಾ ದೋಷಗಳು ಬ್ರಾಂಡ್ ಮೌಲ್ಯವನ್ನು ಕುಗ್ಗಿಸುವ ಅಪಾಯವಿರುತ್ತದೆ.

ಕೋಟಿ ಕೋಟಿ ಬೆಲೆಯ ಕಾರುಗಳನ್ನ ತಯಾರಿಸುವ ಐಷಾರಾಮಿ ಕಂಪನಿಗಳಿಗೆ ಒಂದು ಸಣ್ಣ ಟೈರ್‌ ಅಭಿವೃದ್ಧಿಪಡಿಸಲು ಆಗೋದಿಲ್ವಾ? ಹೀಗೊಂದು ಪ್ರಶ್ನೆ ಮೂಡೋದು ಸಹಜ. ಮಾರುತಿ, ಹುಂಡೈ, ಟಾಟಾ ಅಥವಾ ಮರ್ಸಿಡಿಸ್‌ ಸೇರಿದಂತೆ ದೈತ್ಯ ಕಂಪನಿಗಳೇ ಇರಬಹುದು. ಕಾರು ತಯಾರಿಸಿದ ಬಳಿಕ ಟೈರ್‌ಗಾಗಿ ಬೇರೆ ಕಂಪನಿಗಳ ಮೊರೆ ಹೋಗುತ್ತವೆ. ಇದರ ಹಿಂದೆ ಬೇರೆಯದ್ದೇ ತಾರ್ಕಿಕತೆ ಇದೆ.

ವಿಶ್ಲೇಷಕರ ಪ್ರಕಾರ.. ಕಾರು ಕಂಪನಿಗಳು ಸ್ವತಃ ಟೈರ್‌ಗಳನ್ನು ತಯಾರಿಸಲು ನಿರಾಕರಿಸುವುದು ಕಡ್ಡಾಯವಲ್ಲ. ಇಲ್ಲಿ ವ್ಯಾಪಾರ ತಂತ್ರ ಅಡಗಿದೆ. ಹೌದು, ಕಾರು ತಯಾರಿಕೆ ಮತ್ತು ಟೈರ್ ತಯಾರಿಕೆ ಎರಡು ವಿಭಿನ್ನ ಕ್ಷೇತ್ರ. ಕಾರು ಕಂಪನಿಗಳು ಹೆಚ್ಚಾಗಿ ಮೆಕ್ಯಾನಿಕಲ್ ಎಂಜಿನಿಯರಿಂಗ್, ವಿನ್ಯಾಸ ಮತ್ತು ಎಲೆಕ್ಟ್ರಾನಿಕ್ ವ್ಯವಸ್ಥೆಗಳ ಮೇಲೆ ಕೇಂದ್ರೀಕರಿಸುತ್ತವೆ. ಆದರೆ ಟೈರ್ ತಯಾರಿಕೆಯು Chemical Engineering ಮತ್ತು ರಬ್ಬರ್ ತಂತ್ರಜ್ಞಾನದ ಆಟವಾಗಿದೆ. ಟೈರ್ ತಯಾರಿಕೆಗೆ ನೈಸರ್ಗಿಕ ರಬ್ಬರ್, ಸಿಂಥೆಟಿಕ್ ರಬ್ಬರ್, ಕಾರ್ಬನ್ ಕಪ್ಪು, ಸಲ್ಫರ್ ಸೇರಿದಂತೆ ವಿವಿಧ ರಾಸಾಯನಿಕಗಳ ಮಿಶ್ರಣವನ್ನು ನಿಖರವಾಗಿ ಅಭಿವೃದ್ಧಿಪಡಿಸುವ ಅಗತ್ಯ ಇದೆ.

ಕಾರು ಕಂಪನಿಗಳ ಪ್ಲಾನ್‌ ಏನು?

  • ಕಾರು ಕಂಪನಿಗಳ ಪ್ಲಾನ್‌ ಏನು?
  • ವೆಚ್ಚವನ್ನು ಕಡಿಮೆ ಇಡೋದು ಭಾರೀ ಹೂಡಿಕೆ ತಪ್ಪಿಸುವುದು
  • ಟೈರ್ ಉತ್ಪಾದನಾ ಕಾರ್ಖಾನೆ ಶುರುಮಾಡಿದ್ರೆ ಬಂಡವಾಳ ಹೂಡಬೇಕು
  • ರಬ್ಬರ್ ತೋಟಗಳಿಂದ ಹಿಡಿದು ಭಾರೀ ಯಂತ್ರೋಪಕರಣಗಳವರೆಗೆ
  • ರಾಸಾಯನಿಕ ಪ್ರಯೋಗಾಲಯಗಳನ್ನ ಸಹ ನಡೆಸಬೇಕಾಗುತ್ತದೆ
  • ಇದು ಕಾರು ತಯಾರಿಕೆಯ ವೆಚ್ಚವನ್ನು ಹೆಚ್ಚಿಸುತ್ತದೆ
  • ಟೈರ್ ಕಂಪನಿಗಳು ಈಗಾಗಲೇ ದೊಡ್ಡ ಪ್ರಮಾಣದಲ್ಲಿ ಅಭಿವೃದ್ಧಿ ಹೊಂದಿವೆ
  • ಅದು ಅವರಿಗೆ ಆರ್ಥಿಕತೆಯ ಪ್ರಮಾಣದಲ್ಲಿ ಪ್ರಯೋಜನ ನೀಡುತ್ತದೆ

ಇನ್ನು ಕಾರು ಕಂಪನಿಗಳು ಹೊರಗುತ್ತಿಗೆ ಎಂಬ ತಂತ್ರದಡಿಯಲ್ಲಿ ಕೆಲಸ ಮಾಡುತ್ತವೆ. ಗೇರ್‌ಬಾಕ್ಸ್‌ಗಳು, ದೀಪಗಳು, ಆಸನಗಳು, ಸಂವೇದಕಗಳು ಮತ್ತು ಟೈರ್‌ಗಳಂತಹ ಕಾರಿನ ಸುಮಾರು 60 ರಿಂದ 70 ಪ್ರತಿಶತದಷ್ಟು ಘಟಕಗಳನ್ನ ಆಚೆ ತರಿಸಿಕೊಳ್ಳುತ್ತವೆ. ಅಂದರೆ ಕಾರು ಕಂಪನಿಗಳು ಸ್ವತಃ ಅಸೆಂಬ್ಲರ್‌ಗಳಾಗಿ ಕಾರ್ಯನಿರ್ವಹಿಸುತ್ತವೆ. ಒಂದು ವೇಳೆ ಟೈರ್ ಪೂರೈಕೆಯಲ್ಲಿ ಸಮಸ್ಯೆ ಕಂಡುಬಂದರೆ.. ಕಾರು ಉತ್ಪಾದನೆ ಸ್ಥಗಿತ ಆಗುವುದಿಲ್ಲ. ಕಾರು ಕಂಪನಿಗಳು ಆದಷ್ಟು ಬೇಗ ಬೇರೆ ಕಂಪನಿಗಳ ಜೊತೆ ಮಾತುಕತೆ ನಡೆಸುತ್ತವೆ. ಅವರು ಸ್ವತಃ ಟೈರ್‌ಗಳನ್ನು ತಯಾರಿಸಲು ಪ್ರಾರಂಭಿಸಿದರೆ ಮತ್ತು ರಬ್ಬರ್ ಅಥವಾ ಕಚ್ಚಾ ವಸ್ತುಗಳ ಕೊರತೆಯನ್ನು ಎದುರಿಸಿದರೆ ಕಾರ್ಖನೆಯನ್ನೇ ಮುಚ್ಚುವಂತಹ ಪರಿಸ್ಥಿತಿ ನಿರ್ಮಾಣ ಆಗುತ್ತದೆ,

ಇನ್ನು ಯಾವುದೇ ವಾಹನದ ಅತ್ಯಂತ ನಿರ್ಣಾಯಕ ಸುರಕ್ಷತಾ ಮ್ಯಾಟರ್‌ ಏನಂದರೆ ಟೈರ್‌ಗಳು.. ಅವು ರಸ್ತೆಯೊಂದಿಗೆ ನೇರ ಸಂಪರ್ಕದಲ್ಲಿರುತ್ತವೆ. ಸಣ್ಣ ಟೈರ್ ದೋಷವೂ ಸಹ ದೊಡ್ಡ ಅಪಘಾತಕ್ಕೆ ಕಾರಣವಾಗುವ ಸಾಧ್ಯತೆ ಇರುತ್ತದೆ. ಕಾರು ಕಂಪನಿಗಳು ತಮ್ಮದೇ ಆದ ಟೈರ್‌ಗಳನ್ನು ತಯಾರಿಸಿದ್ರೆ ದೊಡ್ಡ ದೋಷ ಸಂಭವಿಸಿದರೆ.. ಕಂಪನಿಯ ಖ್ಯಾತಿ ಮತ್ತು ಬ್ರಾಂಡ್ ಮೌಲ್ಯ ಕುಸಿಯುವ ಅಪಾಯ ಇರುತ್ತದೆ.

PREV
Read more Articles on
click me!

Recommended Stories

ಕಾರು ಅಪಘಾತದ ನಂತರ ಇನ್ಮುಂದೆ ಏನೂ ಮುಚ್ಚಿಡಲು ಸಾಧ್ಯವಿಲ್ಲ: ಸತ್ಯ ಬಯಲು ಮಾಡಲಿದೆ ವಾಹನಗಳ ಬ್ಲ್ಯಾಕ್ ಬಾಕ್ಸ್!
Upcoming 7 Seater Hybrid Cars: ಭಾರತದ ರಸ್ತೆಗಿಳಿಯಲಿವೆ ಈ ಹೊಸ 7 ಸೀಟರ್ ಹೈಬ್ರಿಡ್ ಕಾರುಗಳು!