ಸೀಟ್‌ಬೆಲ್ಟ್‌ ಧರಿಸದಿದ್ದರೆ ಕಾರಿನ ಏರ್‌ಬ್ಯಾಗ್ಸ್ ನಿಷ್ಪ್ರಯೋಜಕ ಏಕೆ?

By Suvarna News  |  First Published Sep 5, 2022, 5:23 PM IST

ಕಾರಿನ ಸುರಕ್ಷತೆಗಾಗಿ ಎಷ್ಟೇ ಸೀಟ್‌ಬೆಲ್ಟ್‌ ಅಳವಡಿಕೆಯಾದರೂ, ಅದರಲ್ಲಿ ಪ್ರಯಾಣಿಸುವವರು  ಸೀಟ್ಬೆಲ್ಟ್ ಧರಿಸದೇ ಇದ್ದರೆ ಅದು ನಿಷ್ಪ್ರಯೋಜಕವಾಗುತ್ತದೆ.


ಮಾರುಕಟ್ಟೆಯಲ್ಲಿ ಹೊಸ ಕಾರುಗಳ (New cars) ಭರಾಟೆ ಹೆಚ್ಚಿದಂತೆ, ಅದರ ಸುರಕ್ಷತೆಯ ಪ್ರಾಮುಖ್ಯತೆ ಕೂಡ ಹೆಚ್ಚಾಗಿದೆ. ಜನರು ಈಗ ಸುರಕ್ಷಿತ ವಾಹನಗಳಿಗೆ (Safe vehicles) ಹೆಚ್ಚಿನ ಆದ್ಯತೆ ನೀಡುತ್ತಿರುವುದರಿಂದ ವಾಹನ ತಯಾರಕರು ಕೂಡ ತಮ್ಮ ಕಾರುಗಳಲ್ಲಿ ಹೆಚ್ಚಿನ ಸುರಕ್ಷತಾ ಅಂಶಗಳನ್ನು ಸೇರಿಸುವ ಅನಿವಾರ್ಯತೆಗೆ ಸಿಲುಕಿದ್ದಾರೆ.ಕೇಂದ್ರ ಸರ್ಕಾರ ಕೂಡ ಕಾರುಗಳ ಸುರಕ್ಷತೆಯ ಕುರಿತು ಹಲವು ಮಾರ್ಗಸೂಚಿಗಳನ್ನು (guidelines) ಹೊರಡಿಸಿದೆ. ಈ ವಾಹನ ತಯಾರಕರಿಗೆ ತಮ್ಮ ಕಾರು "ಸುರಕ್ಷಿತ" ಎಂದು ಖರೀದಿದಾರರಿಂದ ನಂಬಿಕೆಯನ್ನು ಸಾಧಿಸಲು ಇರುವ ಒಂದು ಮಾರ್ಗವೆಂದರೆ ಅವರು ಮಾರಾಟ ಮಾಡುವ ಎಲ್ಲಾ ಕಾರುಗಳಲ್ಲಿ ಏರ್ಬ್ಯಾಗ್ಗಳನ್ನು (Airbags) ಪರಿಚಯಿಸುವುದು. ಕೇಂದ್ರ ಸರ್ಕಾರ  ಈಗಾಗಲೇ, ಕಾರುಗಳ ಗಾತ್ರ, ಬೆಲೆಯನ್ನು ಲೆಕ್ಕಿಸದೆ ಡ್ಯುಯಲ್ ಏರ್ಬ್ಯಾಗ್ಗಳು, ಸೀಟ್ ಬೆಲ್ಟ್ ರಿಮೈಂಡರ್ಗಳು (Seat belt reminders) ಮತ್ತು ರಿಯರ್ ಪಾರ್ಕಿಂಗ್  (Rear parking sensor) ಅಳವಡಿಕೆಯನ್ನು ಕಡ್ಡಾಯಗೊಳಿಸಿದೆ. 

ಆದರೆ, ಕಾರಿನಲ್ಲಿ ಎಷ್ಟೇ ಸೀಟ್‌ಬೆಲ್ಟ್‌ ಅಳವಡಿಕೆಯಾದರೂ, ಅದರಲ್ಲಿ ಪ್ರಯಾಣಿಸುವವರು  ಸೀಟ್ಬೆಲ್ಟ್ ಧರಿಸದೇ ಇದ್ದಲ್ಲಿ ಕಾರಿನಲ್ಲಿ ಅಳವಡಿಸಿರುವ ಏರ್ಬ್ಯಾಗ್ಗಳು ನಿಷ್ಪ್ರಯೋಜಕವಾಗಿರುತ್ತವೆ. ಏಕೆಂದರೆ, ಕಾರು ಪ್ರಯಾಣಿಕರನ್ನು ಸುರಕ್ಷಿತವಾಗಿರಿಸಲು, ಸೀಟ್ಬೆಲ್ಟ್ಗಳು ಮತ್ತು ಏರ್ಬ್ಯಾಗ್ಗಳು ಒಟ್ಟಿಗೆ ಕೆಲಸ ಮಾಡುತ್ತವೆ ಮತ್ತು ಒಂದಿಲ್ಲದೆ ಇನ್ನೊಂದನ್ನು ಹೊಂದಿರುವುದು ಅಪಘಾತದ ಸಂದರ್ಭದಲ್ಲಿ ಪ್ರಯಾಣಿಕರ ಸುರಕ್ಷತೆಯನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ.

Cyrus Mistry Death: ಖ್ಯಾತ ವೈದ್ಯೆ ಚಲಾಯಿಸುತ್ತಿದ್ದ ಕಾರು; ಸೀಟ್ ಬೆಲ್ಟ್ ಧರಿಸಿರಲಿಲ್ಲ ಸೈರಸ್‌ ಮಿಸ್ತ್ರಿ..!

ಅಪಘಾತದ ಸಂದರ್ಭದಲ್ಲಿ ಪ್ರಯಾಣಿಕರನ್ನು ತಮ್ಮ ಆಸನದಲ್ಲಿಯೇ ಕುಳಿತಿರುವಂತೆ ನಿರ್ವಹಿಸಲು ಮತ್ತು ಡ್ಯಾಶ್ಬೋರ್ಡ್, ಕಿಟಕಿ ಅಥವಾ ಮುಂಜಿನ ಗಾಜುಗಳಿಗೆ ಬಡಿದು ಮಾರಣಾಂತಿಕ ಗಾಯಗಳಿಗೆ ತುತ್ತಾಗುವುದನ್ನು ತಡೆಯಲು ಸೀಟ್‌ಬೆಲ್ಟ್‌ ಹಾಗೂ ಏರ್‌ಬ್ಯಾಗ್‌ಗಳು ರಕ್ಷಣೆ ನೀಡುತ್ತವೆ. ಸೀಟ್ಬೆಲ್ಟ್ ನಿಮ್ಮನ್ನು ಸ್ಥಳದಲ್ಲಿ ಹಿಡಿದಿಟ್ಟುಕೊಂಡರೆ, ಏರ್ಬ್ಯಾಗ್ ನಿಮ್ಮ ತಲೆ ಮತ್ತು ಎದೆಯನ್ನು ಎದುರಿಗಿರುವ ಗಟ್ಟಿ ವಸ್ತುಗಳಿಗೆ ಡಿಕ್ಕಿ ಹೊಡೆಯುವುದನ್ನು ತಡೆಯುತ್ತದೆ. ಕೆಲವು ಉನ್ನತ-ಸ್ಪೆಕ್ ಕಾರುಗಳು ಮೊಣಕಾಲು ಏರ್ಬ್ಯಾಗ್ಗಳು ಮತ್ತು ಕರ್ಟನ್ ಏರ್ಬ್ಯಾಗ್ಗಳೊಂದಿಗೆ ಕೂಡ ಬರುತ್ತವೆ, ಕಾರಿನ ಸುರಕ್ಷತೆಯ ಇತ್ತೀಚಿನ ಆವಿಷ್ಕಾರಗಳಲ್ಲಿ ಒಂದಾದ ಏರ್ಬ್ಯಾಗ್ ಅನ್ನು ಸೀಟ್ಬೆಲ್ಟ್ನಲ್ಲಿ ಅಳವಡಿಸಲಾಗಿದೆ ಮತ್ತು ಮರ್ಸಿಡಿಸ್-ಬೆನ್ಜ್ ಎಸ್-ಕ್ಲಾಸ್ನಂತಹ ಕಾರುಗಳಲ್ಲಿಡೀ ಸೌಲಭ್ಯ ನೀಡಲಾಗುತ್ತದೆ.

ಹಿಂದಿನ ಸೀಟಿನ ಪ್ರಯಾಣಿಕರಿಗೂ ಇದು ಅನ್ವಯವಾಗುತ್ತದೆ. ಹಿಂದಿನ ಸೀಟುಗಳಲ್ಲಿ ಮೂರು-ಪಾಯಿಂಟ್ ಸೀಟ್ಬೆಲ್ಟ್ಗಳನ್ನು ಕಡ್ಡಾಯಗೊಳಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಮತ್ತು ಪ್ರಯಾಣಿಕರು ಇದನ್ನು ಯಾವಾಗಲೂ ಧರಿಸಬೇಕು. ಟಾಟಾ ಗ್ರೂಪ್ನ ಮಾಜಿ ಅಧ್ಯಕ್ಷರಾದ ಸೈರಸ್ ಮಿಸ್ತ್ರಿ ಅವರ ಮರಣವು ಸೀಟ್ಬೆಲ್ಟ್ನ ಪ್ರಾಮುಖ್ಯತೆಯನ್ನು ಪುನರುಚ್ಚರಿಸಿದೆ. 2019ರ ಜುಲೈ ತಿಂಗಳಿಂದ ಭಾರತದಲ್ಲಿ ಡ್ರೈವರ್ ಸೈಡ್ ಏರ್ಬ್ಯಾಗ್ಗಳು ಕಡ್ಡಾಯವಾಗಿದೆ. ಮತ್ತೊಂದೆಡೆ, ಮುಂಭಾಗದ ಪ್ರಯಾಣಿಕರ ಬದಿಯ ಏರ್ಬ್ಯಾಗ್ಗಳು ಏಪ್ರಿಲ್ 2021 ರಿಂದ ಕಡ್ಡಾಯವಾಗಿದೆ.

Cyrus Mistry Death ಅಪಘಾತದಲ್ಲಿ ಟಾಟಾ ಸನ್ಸ್‌ ಮಾಜಿ ಚೇರ್ಮನ್‌ ಸಾವು!

 ಮಿಸ್ತ್ರಿ ಅವರು 5-ಸ್ಟಾರ್ ಯುರೋ ಎನ್ಸಿಎಪಿ ಕ್ರ್ಯಾಶ್ ಟೆಸ್ಟ್-ರೇಟೆಡ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಹಿಂದಿನ ಸೀಟಿನಲ್ಲಿ ಸೀಟ್‌ಬೆಲ್ಟ್‌ ಧರಿಸಿಲ್ಲವಾದ್ದರಿಂದ, ಅಪಘಾತದ ವೇಳೆ ಮೃತಪಟ್ಟರು ಎಂದು ಹೇಳಲಾಗುತ್ತಿದೆ.
ಇವರು ಪ್ರಯಾಣಿಸುತ್ತಿದ್ದ ಐಷಾರಾಮಿ ಕಾರು ಮುಂಬೈನಿಂದ 120 ಕಿಮೀ ದೂರದಲ್ಲಿರುವ ಪಾಲ್ಘರ್ ಜಿಲ್ಲೆಯ ಚರೋಟಿ ಚೆಕ್ ಪೋಸ್ಟ್ ಅನ್ನು ದಾಟಿದ ನಂತರ ಕೇವಲ 9 ನಿಮಿಷಗಳಲ್ಲಿ 20 ಕಿಲೋಮೀಟರ್ ವೇಗದಲ್ಲಿ ಚಲಿಸುತ್ತಿತ್ತು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಸೂರ್ಯ ನದಿಯ ಸೇತುವೆಯ ಮೇಲೆ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದ್ದು, ಮಿಸ್ತ್ರಿ (54) ಮತ್ತು ಜಹಾಂಗೀರ್ ಪಾಂಡೋಲೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮಿಸ್ತ್ರಿ ಅವರು ಅಹಮದಾಬಾದಿನಿಂದ ಮುಂಬೈಗೆ ಹಿಂದಿರುಗುತ್ತಿದ್ದಾಗ ಮಧ್ಯಾಹ್ನ 2:30 ಕ್ಕೆ ದುರಂತ ಸಂಭವಿಸಿದೆ. ಮುಂಬೈ ಮೂಲದ ಸ್ತ್ರೀರೋಗ ತಜ್ಞೆ ಅನಾಹಿತಾ ಪಂಡೋಲೆ (55) ಕಾರು ಚಲಾಯಿಸುತ್ತಿದ್ದರು. ಅಪಘಾತದಲ್ಲಿ Accident) ಆಕೆ ಮತ್ತು ಆಕೆಯ ಪತಿ ಗಂಭೀರವಾಗಿ ಗಾಯಗೊಂಡಿದ್ದಾರೆ.

Tap to resize

Latest Videos

click me!