ಫೋಕ್ಸ್‌ವ್ಯಾಗನ್‌ ವರ್ಟಸ್‌ ಎಂಬ ಸೆಡಾನ್‌ ವರ್ಚಸ್ಸು

By Kannadaprabha News  |  First Published Aug 30, 2022, 11:24 AM IST

40 ಸೇಫ್ಟಿಫೀಚರ್ಸ್‌ ಇರುವ ಕಾರನ್ನು ನೀವು ಟೆಸ್ಟ್‌ ಡ್ರೈವ್‌ ಮಾಡಬಹುದು. ಡೀಲರ್‌ ಜತೆ ಮಾತಾಡಿ ಹೆಚ್ಚಿನ ವಿವರ ಪಡೆಯಬಹುದು. ನಾವು ಟೆಸ್ಟ್‌ ಡ್ರೈವ್‌ ಮಾಡಿದ ಕಾರಿನ ಆನ್‌ ರೋಡ್‌ ಬೆಲೆ 22,45, 657.


ಮಹಾನಗರಗಳಲ್ಲಿ ವಾಸ ಮಾಡುವ, ದಿನವೂ ಆಫೀಸಿಗೆ ಕಾರಿನಲ್ಲಿ ಹೋಗಿ ಬರುವ, ಅಲ್ಲಲ್ಲಿ ಪಾರ್ಕಿಂಗ್‌ ಮಾಡಿ ಶಾಪಿಂಗ್‌ ಮಾಡಲು ಬಯಸುವ ಮಂದಿಯಿಂದಾಗಿ ಹ್ಯಾಚ್‌ಬ್ಯಾಕ್‌ ಕಾರುಗಳು ಜನಪ್ರಿಯವಾದವು. ಮಹಾನಗರಕ್ಕೆ ಹ್ಯಾಚ್‌ಬ್ಯಾಕೇ ಅತ್ಯುತ್ತಮ ಎಂಬ ಭಾವನೆ ಬೆಳೆಯಿತು.

ಆದರೆ ಅತ್ಯುತ್ತಮ ಸೆಡಾನ್‌ ಕಾರುಗಳನ್ನು ನೋಡಿದಾಗ, ಜೇಮ್ಸ್‌ಬಾಂಡ್‌ ಸಿನಿಮಾಗಳಲ್ಲಿ ಅಂಥ ಕಾರುಗಳ ಓಡಾಟ ಗಮನಿಸಿದಾಗ ನಮಗೂ ಅಂಥ ಕಾರುಗಳಲ್ಲಿ ಓಡಾಡಬೇಕು ಅಂತ ಹೊಟ್ಟೆಕಿಚ್ಚಾಗುತ್ತದೆ. ಹಾಗೆ ಹೊಟ್ಟೆಕಿಚ್ಚು ಹುಟ್ಟಿಸುವ ಕಾರುಗಳ ಪಟ್ಟಿಗೆ ಫೋಕ್ಸ್‌ವ್ಯಾಗನ್‌ ವರ್ಟಸ್‌ ಕೂಡ ಸೇರುತ್ತದೆ.

Latest Videos

undefined

ಇದೇ ಕಂಪೆನಿಯ ಜೆಟ್ಟಾಕಾರು ಮರುಹುಟ್ಟಿಬಂದಂತಿದೆ ಅಂತ ಹೇಳಬಹುದಾದ ವರ್ಟಸ್‌, ಮಹಾನ್‌ ಇಂಟೆಲಿಜೆಂಟ್‌ ಕಾರು. ನೋಡಿದರೆ ಅಕ್ಕರೆ ಉಕ್ಕಿಸುವಂತೆ ಇದನ್ನು ವಿನ್ಯಾಸಗೊಳಿಸಲಾಗಿದೆ. ಹೊರವಿನ್ಯಾಸ ಮತ್ತು ಒಳಾಂಗಣದ ಅಂದಚೆಂದ ಕೂಡ ಅಚ್ಚುಕಟ್ಟು. ಕೊಂಚವೂ ಬೆನ್ನು ನೋಯಿಸದ ಸೀಟು, ಹಿತವಾದ ಅನುಭವ ಕೊಡುವಂಥ ಬಣ್ಣ, ಕುಳಿತುಕೊಳ್ಳಲು ವಿಶಾಲವಾದ ಜಾಗ, 521 ಲೀಟರ್‌ ಬೂಟ್‌ ಸ್ಪೇಸ್‌, ಒಳ್ಳೆಯ ಸಸ್ಪೆನ್ಷನ್‌, ರಸ್ತೆಹಂಪುಗಳನ್ನು ಹೊಟ್ಟೆಗೆ ತಾಕಿಸಿಕೊಳ್ಳದಷ್ಟುಗ್ರೌಂಡ್‌ ಕ್ಲಿಯರೆನ್ಸ್‌, ಆರು ಏರ್‌ಬ್ಯಾಗು, ವೆಂಟಿಲೇಟೆಡ್‌ ಸೀಟ್‌, ಸನ್‌ರೂಫ್‌, ವೈರ್‌ಲೆಸ್‌ ಆ್ಯಂಡ್ರೋ ವೈಪರ್‌ಗಳು...

ಫೋಕ್ಸ್‌ವ್ಯಾಗನ್‌ ಖ್ಯಾತಿಯನ್ನು ಒಂಚೂರು ಹೆಚ್ಚಿಸುವಂತೆ ರೂಪಿತಗೊಂಡಿರುವ ಸೆಡಾನ್‌ ಇದು. ಫೋಕ್ಸ್‌ವ್ಯಾಗನ್‌ ಅಭಿಮಾನಿಗಳು ಇಂಥದ್ದೊಂದು ಕಾರಿಗೆ ಕಾಯುತ್ತಿದ್ದರು ಕೂಡ. ಇದು ಎರಡು ವೇರಿಯಂಟ್‌ಗಳಲ್ಲಿ ಲಭ್ಯ. 114 ಬಿಎಚ್‌ಪಿ, 1.0ಟಿಎಸ್‌ಐ ಮತ್ತು 148 ಬಿಎಚ್‌ಪಿ, 1.5ಟಿಎಸ್‌ಐ. ಮೊದಲನೆಯದರಲ್ಲಿ ಮ್ಯಾನ್ಯುಯಲ್‌ ಮತ್ತು ಆಟೋಮ್ಯಾಟಿಕ್‌ ಉಂಟು.\

ಭಾರತದಲ್ಲಿ ಕೊನೆಯ ಪೋಲೋ ವಾಹನ ವಿತರಿಸಿದ ಫೋಕ್ಸ್ವ್ಯಾಗನ್

ಟರ್ಬೋಚಾಜ್‌ರ್‍ಡ್‌ ಇಂಜಿನ್‌ ಜತೆಗೆ ಜಿಟಿ ಅಂದರೆ ಡೈರೆಕ್ಟ್ ಇಂಜೆಕ್ಟ್ ಪೆಟ್ರೋಲ್‌ ಇಂಜಿನ್‌ ಕೂಡ ಲಭ್ಯ. ಇದರಲ್ಲಿ 7 ಸ್ಪೀಡ್‌ ಡಿಎಸ್‌ಜಿ ಟ್ರಾನ್ಸ್‌ಮಿಷನ್‌ ಉಂಟು. ಟಚ್‌ಸ್ಕ್ರೀನ್‌ ಇನ್‌ಫೋಟೈನ್‌ಮೆಂಟ್‌, ಆ್ಯಪಲ್‌ ಕಾರ್‌ಪ್ಲೇ, ಆಂಡ್ರಾಯಿಡ್‌ ಆಟೋ ಇರುವ ಡಿಜಿಟಲ್‌ ಕಾಕ್‌ಪಿಟ್‌ ನೋಡಿದರೆ ಬೆರಗು ಹುಟ್ಟಿಸುತ್ತದೆ. ಜತೆಗೆ ವೈರ್‌ಲೆಸ್‌ ಮೊಬೈಲ್‌ ಚಾರ್ಜರೂ ಉಂಟು. ನಮ್ಮ ಫೋನು ಅದರಲ್ಲಿಟ್ಟಾಗ ಚಾಜ್‌ರ್‍ ಆಯಿತು, ಆದರೆ ಸಿಕ್ಕಾಪಟ್ಟೆಬಿಸಿಯೂ ಆಯಿತು.

40 ಸೇಫ್ಟಿಫೀಚರ್ಸ್‌ ಇರುವ ಕಾರನ್ನು ನೀವು ಟೆಸ್ಟ್‌ ಡ್ರೈವ್‌ ಮಾಡಬಹುದು. ಡೀಲರ್‌ ಜತೆ ಮಾತಾಡಿ ಹೆಚ್ಚಿನ ವಿವರ ಪಡೆಯಬಹುದು. ನಾವು ಟೆಸ್ಟ್‌ ಡ್ರೈವ್‌ ಮಾಡಿದ ಕಾರಿನ ಆನ್‌ ರೋಡ್‌ ಬೆಲೆ 22,45, 657.

ಸೆಡಾನ್‌ ಪ್ರಿಯರಿಗೆ ಇದು ಅಚ್ಚುಮೆಚ್ಚಿನ ಕಾರು. ಅಷ್ಟೇ ಇಂಟೆಲಿಜೆಂಟ್‌ ಕಾರು ಕೂಡ. ಡ್ರೈವಿಂಗ್‌ ಹೊತ್ತಲ್ಲಿ ನೀವು ಮಾಡಬೇಕಾದ ಅರ್ಧ ಕೆಲಸವನ್ನು ಇದೇ ಮಾಡುತ್ತದೆ. ಹೀಗಾಗಿ ಕುಟುಂಬದ ಜತೆ ಸುರಕ್ಷಿತವಾಗಿ ಪ್ರಯಾಣಿಸಲು ಅಡ್ಡಿಯಿಲ್ಲ.

click me!