ಮುಂಬೈ(ಜೂ.23): ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಬೆಂಕಿ ಕಾಣಿಸಿಕೊಂಡ ಪ್ರಕರಣ ಒಂದೆರೆಡಲ್ಲ, ಇತ್ತೀಚೆಗೆ ಹಲವು ಪ್ರಕರಣಗಳು ನಡೆದಿದೆ. ಈ ಮೂಲಕ ಭಾರತದಲ್ಲಿ ಆತಂಕ ವಾತಾವರಣ ನಿರ್ಮಾಣವಾಗಿತ್ತು. ಇದೀಗ ಎಲೆಕ್ಟ್ರಿಕ್ ಕಾರಿನಲ್ಲೂ ಬೆಂಕಿ ಕಾಣಿಸಿಕೊಂಡ ಘಟನೆ ನಡೆದಿದೆ. ಅದರಲ್ಲೂ ಅತ್ಯಂತ ಸುರಕ್ಷಿತ ಕಾರು ಎಂದೇ ಪ್ರಸಿದ್ದಿಯಾಗಿರುವ ಟಾಟಾ ನೆಕ್ಸಾನ್ ಇವಿ ಕಾರಿನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದಿದೆ. ಈ ಘಟನೆ ಮುಂಬೈನಲ್ಲಿ ನಡೆದಿದೆ.
ಮುಂಬೈನ ಪಶ್ಚಿಮ ವೆಸೈನಲ್ಲಿ ಚಲಿಸುತ್ತಿದ್ದ ಟಾಟಾ ನೆಕ್ಸಾನ್ ಇವಿ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಹೀಗಾಗಿ ಚಾಲಕ ಇಳಿದು ಪರಿಶೀಲಸಲು ಮುಂದಾಗಿದ್ದಾನೆ. ಇದೇ ವೇಳೆ ಬೆಂಕಿ ಹೊತ್ತಿ ಉರಿಯಲು ಆರಂಭಿಸಿದೆ. ಹೀಗಾಗಿ ಬೆಂಕಿ ಆರಿಸಲು ಆಗದೆ ಅಸಾಹಯಕನಾಗಿ ನಿಲ್ಲಬೇಕಾಗಿ ಬಂದಿದೆ.
Tata Nexon EV MAX 437 ಕಿ.ಮೀ ಮೈಲೇಜ್, ಹೊಚ್ಚ ಹೊಸ ಟಾಟಾ ನೆಕ್ಸಾನ್ ಇವಿ ಮ್ಯಾಕ್ಸ್ ಕಾರು ಬಿಡುಗಡೆ!
ಪ್ರಾಥಮಿಕ ಮಾಹಿತಿಗಳ ಪ್ರಕಾರ ಶಾರ್ಟ್ ಸರ್ಕ್ಯೂಟ್‌ನಿಂದ ಈ ಘಟನೆ ಸಂಭವಿಸಿದೆ ಎಂದು ಹೇಳಲಾಗಿದೆ. ಈ ಕುರಿತು ಟಾಟಾ ಮೋಟಾರ್ಸ್ ಎಲೆಕ್ಟ್ರಿಕ್ ಮೊಬಿಲಿಟಿ ಪ್ರತಿಕ್ರಿಯೆ ನೀಡಿದೆ.
ಈ ಘಟನೆಗೆ ಕಾರಣವೇನು ಅನ್ನೋದು ತಿಳಿದುಬಂದಿಲ್ಲ. ಆದರೆ ಘಟನೆ ನಡೆದ ಬೆನ್ನಲ್ಲೇ ಟಾಟಾ ಮೋಟಾರ್ಸ್ ಎಲೆಕ್ಟ್ರಿಕ್ ತನಿಖೆಗೆ ಆದೇಶಿಸಿದೆ. ವಿಸ್ತಾರವಾದ ತನಿಖೆಗೆ ಆದೇಶಿಸಲಾಗಿದೆ. ತನಿಖೆ ಆರಂಭಗೊಂಡಿದೆ. ನಮಗೆ ಕಾರಿನ ಸುರಕ್ಷತೆ ಹಾಗೂ ಗ್ರಾಹಕರ ಸುರಕ್ಷತೆಗೆ ಮೊದಲ ಆದ್ಯತೆ.ಇದರಲ್ಲಿ ರಾಜಿಯಾಗು ಮಾತಿಲ್ಲ. ಟಾಟಾ ನೆಕ್ಸಾನ್‌ನಲ್ಲಿ ಘಟಿಸಿದ ಮೊದಲ ಪ್ರಕರಣ ಇದಾಗಿದೆ. 30,000 ಟಾಟಾ ಎಲೆಕ್ಟ್ರಿಕ್ ವಾಹನಗಳು ಮಾರಾಟವಾಗಿದೆ. ಇದರಲ್ಲಿ ಇದೇ ಮೊದಲ ಬಾರಿಗೆ ಈ ರೀತಿ ಬೆಂಕಿ ಕಾಣಿಸಿಕೊಂಡಿದೆ. ಕಳೆದ ನಾಲ್ಕು ವರ್ಷಗಳಿಂದ ಒಟ್ಟು 100 ಮಿಲಿಯನ್ ಕಿಲೋಮೀಟರ್ ಕ್ರಮಿಸಿದೆ. ತನಿಖೆ ಪೂರ್ಣಗೊಂಡ ಬಳಿಕ ಈ ಕುರಿತ ಮಾಹಿತಿ ನೀಡುತ್ತೇವೆ ಎಂದು ಟಾಟಾ ಮೋಟಾರ್ಸ್ ಎಲೆಕ್ಟ್ರಿಕ್ ಮೊಬಿಲಿಟಿ ಹೇಳಿದೆ.
ಟಾಟಾ ನೆಕ್ಸಾನ್ ಭಾರತದಲ್ಲಿ ಗರಿಷ್ಠ ಮಾರಾಟವಾಗುತ್ತಿರುವ ಎಲೆಕ್ಟ್ರಿಕ್ ಕಾರು. ಭಾರತದ ಎಲೆಕ್ಟ್ರಿಕ್ ಕಾರಿನಲ್ಲಿ ಟಾಟಾ ಕಾರುಗಳೇ ಅಗ್ರಸ್ಥಾನ ಪಡೆದಿದೆ. ಅತ್ಯಂತ ಸುರಕ್ಷತೆ ಹಾಗೂ ಕೈಗೆಟುಕುವ ದರ ಕಾರು ಎಂದೇ ಜನಪ್ರಿಯವಾಗಿರುವ ಟಾಟಾ ನೆಕ್ಸಾನ್ ಕಾರಿನಲ್ಲೇ ಬೆಂಕಿ ಕಾಣಿಸಿಕೊಂಡಿರುವುದು ಆತಂಕ ಹೆಚ್ಚಿಸಿದೆ.
EV sales ಎಲೆಕ್ಟ್ರಿಕ್ ಕಾರು ಮಾರಾಟದಲ್ಲಿ ಶೇ.352 ರಷ್ಟು ಏರಿಕೆ, ಹೊಸ ದಾಖಲೆ ಬರೆದ ಟಾಟಾ!
ಟಾಟಾ ನೆಕ್ಸಾನ್ ಇವಿ ಹಾಗೂ ಇತ್ತೀಚೆಗೆ ಬಿಡುಗಡೆಯಾದ ಟಾಟಾ ನೆಕ್ಸಾನ್ ಇವಿ ಮ್ಯಾಕ್ಸ್ ಎರಡು ಆಯ್ಕೆಗಳಿವೆ. ನೆಕ್ಸಾನ್ ಇವಿ ಒಂದು ಬಾರಿ ಚಾರ್ಜ್ ಮಾಡಿದರೆ 312 ಕಿ.ಮೀ ಮೈಲೇಜ್ ರೇಂಜ್ ನೀಡಲಿದೆ. ಇದರಲ್ಲಿ 30.2kWh ಲಿಥಿಯಂ ಐಯಾನ್ ಬ್ಯಾಟರಿ ಬಳಸಲಾಗಿದೆ. 129 bhp ಪವರ್ ಹಾಗೂ 245 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. 60 ನಿಮಿಷದಲ್ಲಿ ಶೇಕಡಾ 80 ರಷ್ಟು ಚಾರ್ಜ್ ಆಗಲಿದೆ.ಇತ್ತೀಚೆಗೆ ಬಿಡುಗಡೆಯಾದ ಟಾಟಾ ನೆಕ್ಸಾನ್ ಇವಿ ಮ್ಯಾಕ್ಸ್ ಒಂದು ಬಾರಿ ಚಾರ್ಜ್ ಮಾಡಿದರೆ 457 ಕಿ.ಮೀ ಮೈಲೇಜ್ ರೇಂಜ್ ನೀಡಲಿದೆ.
ಭಾರತದಲ್ಲಿ ಟಾಟಾ ಎಲೆಕ್ಟ್ರಿಕ್ ಕಾರುಗಳನ್ನು ಹೊರತು ಪಡಿಸಿದರೆ, ಎಂಜಿ ಮೋಟಾರ್ಸ್, ಹ್ಯುಂಡೈ ಸೇರಿದಂತೆ ಕಲ ಕಂಪನಿಗಳ ಇವಿಗಳು ಲಭ್ಯವಿದೆ. ಆದರೆ ಕಡಿಮೆ ಬೆಲೆ ಹಾಗೂ ಗರಿಷ್ಠ ಮೈಲೇಜ್ ನೀಡಬಲ್ಲ ಕಾರುಗಳಲ್ಲಿ ಟಾಟಾ ಮೋಟಾರ್ಸ್ ಅಗ್ರ ಸ್ಥಾನದಲ್ಲಿದೆ.