
ಬೆಂಗಳೂರು (ಸೆ.4): ನೀವೇನಾದರೂ ಹೊಸ ಕಾರು ಖರೀದಿಸಲು ಕಾಯುತ್ತಿದ್ದೀರಾ? ಹಾಗಿದ್ದರೆ ಟಾಟಾ ಮೋಟಾರ್ಸ್ (Tata Motors) ನಿಮಗಾಗಿ ಶುಭ ಸುದ್ದಿ ನೀಡಿದೆ. ಸೆಪ್ಟೆಂಬರ್ ತಿಂಗಳಲ್ಲಿ ಟಾಟಾ ತನ್ನ ಪ್ರಮುಖ ಕಾರುಗಳ ಮೇಲೆ ಭರ್ಜರಿ ರಿಯಾಯಿತಿ ಮತ್ತು ಆಕರ್ಷಕ ಆಫರ್‌ಗಳನ್ನು ನೀಡುತ್ತಿದೆ. ಕರ್ವ್ ಇವಿ (Curvv EV) ಮೇಲೆ ₹3.5 ಲಕ್ಷಕ್ಕೂ ಅಧಿಕ ರಿಯಾಯಿತಿ ಸಿಗುತ್ತಿದ್ದರೆ, ಹ್ಯಾರಿಯರ್ ಇವಿ, ಟಿಯಾಗೊ ಇವಿ ಹಾಗೂ ಪಂಚ್ ಇವಿಗಳ ಮೇಲೆಯೂ ಸಹ ಬಂಪರ್ ಆಫರ್‌ಗಳನ್ನು ನೀಡಲಾಗುತ್ತಿದೆ. ಟಾಟಾ ಸಂಸ್ಥೆಯು ತನ್ನ ಪೆಟ್ರೋಲ್/ಡೀಸೆಲ್ (ICE), ಸಿಎನ್‌ಜಿ (CNG) ಮತ್ತು ಎಲೆಕ್ಟ್ರಿಕ್ (EV) ಕಾರುಗಳ ಮೇಲೆ ನೀಡುತ್ತಿರುವ ಈ ಭರ್ಜರಿ ರಿಯಾಯಿತಿಯ ಪೂರ್ಣ ವಿವರ ಇಲ್ಲಿದೆ.
ಈ ಕೊಡುಗೆಗಳಲ್ಲಿ ನಗದು ರಿಯಾಯಿತಿ (Cash Discount), ಎಕ್ಸ್‌ಚೇಂಜ್ ಬೋನಸ್ (Exchange Bonus), ಸ್ಕ್ರ್ಯಾಪೇಜ್ ಲಾಭಗಳು (Scrap Benefit), ಲಾಯಲ್ಟಿ ರಿವಾರ್ಡ್ಸ್‌ಗಳು (Loyalty Rewards) ಹಾಗೂ 'ಫ್ರೀಡಂ ಸೆಲೆಬ್ರೇಷನ್' ಕೊಡುಗೆಗಳು ಸೇರಿವೆ.
(ಗಮನಿಸಿ: ಈ ರಿಯಾಯಿತಿಗಳು ನಗರ, ಡೀಲರ್‌ಶಿಪ್, ಮಾಡೆಲ್ ವರ್ಷ, ವೇರಿಯೆಂಟ್ ಮತ್ತು ಲಭ್ಯವಿರುವ ಸ್ಟಾಕ್‌ಗೆ ಅನುಗುಣವಾಗಿ ಬದಲಾಗಬಹುದು).
ಹೊಸ 'ಟಿಯಾಗೊ ಫೇಸ್‌ಲಿಫ್ಟ್' ಕಾರಿಗೆ ಪ್ರಸ್ತುತ ಯಾವುದೇ ಅಧಿಕೃತ ರಿಯಾಯಿತಿ ಇಲ್ಲ. ಆದರೆ, ಹಳೆಯ ಮಾದರಿಯ ಟಿಯಾಗೊ ಮತ್ತು ಟಿಗೋರ್ (Pre-facelift) ನ ಆಯ್ದ ವೇರಿಯೆಂಟ್‌ಗಳ ಮೇಲೆ ಡೀಲರ್‌ಗಳು ಕೊಡುಗೆಗಳನ್ನು ನೀಡುತ್ತಿದ್ದಾರೆ (XE ವೇರಿಯೆಂಟ್ ಹೊರತುಪಡಿಸಿ). ₹15,000 ವರೆಗೆ ನಗದು ರಿಯಾಯಿತಿ, ₹10,000 ಎಕ್ಸ್‌ಚೇಂಜ್ ಬೋನಸ್ ಅಥವಾ ₹15,000 ವರೆಗೆ ಸ್ಕ್ರ್ಯಾಪೇಜ್ ಲಾಭ ದೊರೆಯಲಿದೆ. ಕೆಲವು ಪ್ರಿ-ಫೇಸ್‌ಲಿಫ್ಟ್ ಟಿಯಾಗೊ ಯುನಿಟ್‌ಗಳ ಮೇಲೆ ₹5,000 ಫ್ರೀಡಂ ಸೆಲೆಬ್ರೇಷನ್ ಬೋನಸ್ ಸಹ ಇದೆ. ಹಳೆಯ ಸ್ಟಾಕ್‌ನಲ್ಲಿರುವ ಟಿಯಾಗೊ EV ಮೇಲೆ ಬರೋಬ್ಬರಿ ₹1.45 ಲಕ್ಷದವರೆಗೆ ಒಟ್ಟು ಪ್ರಯೋಜನವನ್ನು ಪಡೆಯಬಹುದು.
ಆಲ್ಟ್ರೋಜ್ ಖರೀದಿದಾರರು ಈ ತಿಂಗಳಲ್ಲಿ ₹35,000 ವರೆಗೆ ನಗದು ರಿಯಾಯಿತಿ, ₹15,000 ವರೆಗೆ ಎಕ್ಸ್‌ಚೇಂಜ್ ಸಪೋರ್ಟ್, ₹20,000 ವರೆಗೆ ಸ್ಕ್ರ್ಯಾಪೇಜ್ ಲಾಭಗಳನ್ನು ಪಡೆಯಬಹುದು.
ಪಂಚ್ ಪೆಟ್ರೋಲ್/ಸಿಎನ್‌ಜಿ ಮಾದರಿಗಳ ಮೇಲೆ ಪ್ರಸ್ತುತ ಯಾವುದೇ ಅಧಿಕೃತ ಆಫರ್‌ಗಳಿಲ್ಲ. ಆದರೆ, ಕಂಪನಿ ಮತ್ತು ಡೀಲರ್‌ಗಳು ಪಂಚ್ EV ಯ ಪ್ರಸ್ತುತ ಸ್ಟಾಕ್ ಮೇಲೆ ₹1.45 ಲಕ್ಷದವರೆಗೆ ಲಾಭಗಳನ್ನು ನೀಡುತ್ತಿದ್ದಾರೆ (ಸ್ಟಾಕ್ ಲಭ್ಯತೆಗೆ ಒಳಪಟ್ಟಿರುತ್ತದೆ).
ನೆಕ್ಸಾನ್ (ICE) ₹55,000 ವರೆಗೆ ನಗದು ರಿಯಾಯಿತಿ, ₹15,000 ಎಕ್ಸ್‌ಚೇಂಜ್ ಸಪೋರ್ಟ್ ಹಾಗೂ ₹20,000 ವರೆಗೆ ಸ್ಕ್ರ್ಯಾಪೇಜ್ ಪ್ರಯೋಜನಗಳು ಲಭ್ಯವಿದೆ. ಎಲೆಕ್ಟ್ರಿಕ್ ನೆಕ್ಸಾನ್ ಮೇಲೆ ₹45,000 ವರೆಗೆ ಬಂಪರ್ ಡಿಸ್ಕೌಂಟ್ ಸಿಗಲಿದೆ.
ಕರ್ವ್ (ICE) ಕಾರ್‌ನ ಮೇಲೆ ₹30,000 ನಗದು ರಿಯಾಯಿತಿ, ₹40,000 ಎಕ್ಸ್‌ಚೇಂಜ್ ಬೋನಸ್, ₹45,000 ಸ್ಕ್ರ್ಯಾಪೇಜ್ ಬೆನಿಫಿಟ್ ಮತ್ತು ₹50,000 ಲಾಯಲ್ಟಿ ಬೋನಸ್ ನೀಡಲಾಗುತ್ತಿದೆ. MY2025 ಸ್ಟಾಕ್‌ನಲ್ಲಿರುವ ಕರ್ವ್ EV ಗೆ ಗರಿಷ್ಠ ರಿಯಾಯಿತಿ ಸಿಗುತ್ತಿದ್ದು, ಒಟ್ಟು ಲಾಭ ₹3.5 ಲಕ್ಷಕ್ಕಿಂತ ಹೆಚ್ಚು ತಲುಪಿದೆ.
ಸಿಯೆರಾ (ICE) ಕಾರ್‌ನ ಆಯ್ದ ವೇರಿಯೆಂಟ್‌ಗಳ ಮೇಲೆ ₹30,000 ಸ್ಕ್ರ್ಯಾಪೇಜ್ ಬೆನಿಫಿಟ್ ಮತ್ತು ಲಾಯಲ್ಟಿ ಇನ್ಸೆಂಟಿವ್ ಲಭ್ಯವಿದೆ (ಸಿಯೆರಾ EV ಮೇಲೆ ಯಾವುದೇ ರಿಯಾಯಿತಿ ಇಲ್ಲ). ಹ್ಯಾರಿಯರ್ ಮತ್ತು ಸಫಾರಿ ಕಾರ್ಗೆ ₹10,000 ನಗದು ರಿಯಾಯಿತಿ, ₹25,000 ಎಕ್ಸ್‌ಚೇಂಜ್ ಬೋನಸ್ ಮತ್ತು ₹35,000 ಸ್ಕ್ರ್ಯಾಪೇಜ್ ಪ್ರಯೋಜನಗಳೊಂದಿಗೆ ಲಭ್ಯವಿದೆ.
ಹ್ಯಾರಿಯರ್ ಇವಿ ಮೇಲೆ ವಿಶೇಷ ಆಫರ್‌ಗಳನ್ನು ಘೋಷಿಸಲಾಗಿದೆ. ₹1,000,00 ವರೆಗೆ ‘ಫ್ರೀಡಂ ಸೆಲೆಬ್ರೇಷನ್’ ಆಫರ್, ₹50,000 ವರೆಗೆ ಎಕ್ಸ್‌ಚೇಂಜ್ ಬೋನಸ್, ₹75,000 ವರೆಗೆ ಸ್ಕ್ರ್ಯಾಪೇಜ್ ಬೆನಿಫಿಟ್ ಸಿಗಲಿದೆ
ಈಗಿರುವ ಟಾಟಾ ಇವಿ (EV) ಗ್ರಾಹಕರು ಹೊಸ ಕಾರು ಖರೀದಿಸಿದರೆ ₹1 ಲಕ್ಷದವರೆಗೆ ಲಾಯಲ್ಟಿ ಬೆನಿಫಿಟ್ ಪಡೆಯಬಹುದು. ಟಾಟಾ ಪೆಟ್ರೋಲ್/ಡೀಸೆಲ್ ಕಾರು ಮಾಲೀಕರಿಗೂ ಹೆಚ್ಚುವರಿ ಲಾಯಲ್ಟಿ ಪ್ರಯೋಜನಗಳು ಸಿಗಲಿವೆ. ಇದಲ್ಲದೆ, ಟಾಟಾ ಗ್ರೂಪ್ ಉದ್ಯೋಗಿಗಳಿಗೆ ಆಯ್ದ ವೇರಿಯೆಂಟ್‌ಗಳ ಮೇಲೆ ವಿಶೇಷ ಕಾರ್ಪೊರೇಟ್ ಡಿಸ್ಕೌಂಟ್‌ಗಳು ಲಭ್ಯವಿವೆ.
(ಪ್ರಮುಖ ಸೂಚನೆ: ಮೇಲೆ ತಿಳಿಸಲಾದ ರಿಯಾಯಿತಿಗಳು ಅಂದಾಜು ಲೆಕ್ಕಾಚಾರವಾಗಿದ್ದು, ಅಂತಿಮ ರಿಯಾಯಿತಿಯು ನಗರ, ಡೀಲರ್‌ಶಿಪ್, ಲಭ್ಯವಿರುವ ಸ್ಟಾಕ್, ಮಾದರಿ ಮತ್ತು ಗ್ರಾಹಕರ ಅರ್ಹತೆಗೆ ಅನುಗುಣವಾಗಿ ಬದಲಾಗಬಹುದು. ಕಾರು ಖರೀದಿಸುವ ಮುನ್ನ ನಿಮ್ಮ ಹತ್ತಿರದ ಟಾಟಾ ಮೋಟಾರ್ಸ್ ಶೋರೂಮ್‌ಗೆ ಭೇಟಿ ನೀಡಿ ಸಂಪೂರ್ಣ ವಿವರ ಪಡೆದುಕೊಳ್ಳಿ).