ಕೈಗೆಟುಕುವ ದರದಲ್ಲಿ ಸೆಕೆಂಡ್ ಹ್ಯಾಂಡ್ ಕಾರು ಮಾರಾಟ ಆರಂಭಿಸಿದ ಕಿಯಾ!

By Suvarna News  |  First Published Dec 1, 2022, 6:08 PM IST

ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ಅತ್ಯುತ್ತಮ ಕಾರುಗಳ ನೀಡಲು ಕಿಯಾ ಇದೀಗ ಸೆಕೆಂಡ್ ಹ್ಯಾಂಡ್ ಕಾರು ಮಾರಾಟ ಆರಂಭಿಸಿದೆ. ಮಾರಾಟ, ಖರೀದಿ, ವಿನಿಮಯ ಸೇರಿದಂತೆ ಗ್ರಾಹಕರಿಗೆ ಸಾಲ ಸೌಲಭ್ಯ, ಮಾಲೀಕತ್ವ ವರ್ಗಾವಣೆ ಸೇರಿದಂತೆ ಎಲ್ಲಾ ಸೇವೆಗಳು ಸುಲಭವಾಗಿಸಿದೆ. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.


ಡಿಸೆಂಬರ್(ಡಿ.01): ದೇಶದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಕಾರು ತಯಾರಕ ಸಂಸ್ಥೆಗಳಲ್ಲಿ ಒಂದಾಗಿರುವ ಕಿಯಾ ಇಂಡಿಯಾ ಇದೀಗ ಗ್ರಾಹಕರಿ ಹೊಸ ಸೇವೆ ಆರಂಭಿಸಿದೆ. ಕಿಯಾ ಇದೀಗ ಸೆಕೆಂಡ್ ಹ್ಯಾಂಡ್ ಕಾರು ವಹಿವಾಟು ಆರಂಭಿಸಿದೆ. ಎಕ್ಸ್‌ಕ್ಲೂಸಿವ್ ಕಿಯಾ ಸಿಪಿಒ ಔಟ್ಲೆಟ್‌ಗಳ ಮೂಲಕ ಗ್ರಾಹಕರಿಗೆ ಹೊಸ ಕಾಲದ ಅನುಭವವನ್ನು ಒದಗಿಸಲು ಕಂಪನಿ ಉದ್ದೇಶಿಸಿದೆ. ಇದು ಹೊಸ ಕಾರು ಖರೀದಿ ಅನುಭವಕ್ಕೆ ಅನುಗುಣವಾಗಿರುತ್ತದೆ. ಬಳಸಿದ ಕಾರುಗಳನ್ನು ಮಾರಾಟ ಮಾಡಲು, ಖರೀದಿ ಮಾಡಲು ಅಥವಾ ವಿನಿಮಯಕ್ಕೆ ಅನುವು ಮಾಡುತ್ತದೆ. ಇದಕ್ಕೆ ಕಿರಿಕಿರಿ ಇಲ್ಲದ ಮಾಲೀಕತ್ವ ವರ್ಗಾವಣೆಗಳು ಮತ್ತು ಗ್ರಾಹಕೀಯಗೊಳಿಸಿದ ಹಣಕಾಸು ಆಯ್ಕೆಗಳ ಬೆಂಬಲ ಇರುತ್ತದೆ. ದೇಶದಲ್ಲಿ ವ್ಯಾಪಾರ ವಹಿವಾಟುಗಳನ್ನು ಆರಂಭಿಸಿದ ಮೂರು ವರ್ಷಗಳಲ್ಲೇ ಬಳಸಿದ ಕಾರುಗಳ ವಹಿವಾಟನ್ನು ಆರಂಭಿಸಿದ ಕಿಯಾ, ಈ ನಿಟ್ಟಿನಲ್ಲಿ ಅತ್ಯಂತ ವೇಗದ ಒಇಎಂ ಆಗಿದೆ.

ಉದ್ಯಮದಲ್ಲೇ ಮೊದಲ ಪ್ರಾಡಕ್ಟ್‌ಗಳು ಮತ್ತು ಸೇವೆಗಳನ್ನು ಒದಗಿಸುವ ಪ್ರಯತ್ನಗಳನ್ನು ಮುಂದುವರಿಸಿರುವ ಕಿಯಾ ಇಂಡಿಯಾ ಪ್ರೀ ಓನ್ಡ್‌ ಕಾರುಗಳ ವಿಚಾರದಲ್ಲಿ ಉದ್ಯಮದಲ್ಲೇ ಮೊದಲ ಮತ್ತು ಉತ್ತಮ ನಿರ್ವಹಣೆ ಕಾರ್ಯಕ್ರಮದ ಜೊತೆಗೆ ಉದ್ಯಮದಲ್ಲೇ ಉತ್ತಮ ವಾರಂಟಿ ಕವರೇಜ್ ಅನ್ನೂ ಒದಗಿಸಲಿದೆ. ಕಿಯಾ ಸಿಪಿಒ ಮೂಲಕ ಮಾರಾಟ ಮಾಡಲಾದ ಕಾರುಗಳು ಈ ಸೌಲಭ್ಯಗಳನ್ನು ಪಡೆಯಲಿದೆ.

Latest Videos

undefined

ಹೊಸ ದಾಖಲೆ ಬರೆದ ಕಿಯಾ ಸೆಲ್ಟೋಸ್, 3 ವರ್ಷದಲ್ಲಿ 3 ಲಕ್ಷ ಕಾರು ಮಾರಾಟ!

2 ವರ್ಷಗಳವರೆಗೆ ಮತ್ತು 40,000 ಕಿ.ಮೀ ವಾರಂಟಿ ಕವರೇಜ್‌
4 ರ ವರೆಗೆ ಉಚಿತ ಸಕಾಲಿಕ ನಿರ್ವಹಣೆಗಳು
 
ಕಿಯಾ ಸಿಪಿಒ ಮೂಲಕ ಪ್ರೀ ಓನ್ಡ್ ಕಾರು ಮಾರುಕಟ್ಟೆಯಲ್ಲಿ ಹೊಸ ನಿಯಮಗಳನ್ನು ಬರೆಯಲು ಬಯಸಿದ್ದೇವೆ. ಪ್ರಸ್ತುತ ಭಾರತದ ಗ್ರಾಹಕರು, ಪ್ರೀ ಓನ್ಡ್‌ ಕಾರು ವಿಭಾಗದಲ್ಲಿ ಪ್ರಮಾಣಿತ ಮತ್ತು ಪರಿಶೀಲಿಸಿದ ಮಾಹಿತಿಯ ಸೀಮಿತ ಲಭ್ಯತೆಯನ್ನು ಹೊಂದಿದ್ದಾರೆ ಮತ್ತು ಈ ವಹಿವಾಟಿಗೆ ನಾವು ಪ್ರವೇಶಿಸುವ ಮೂಲಕ ಇದನ್ನು ಬದಲಾವಣೆ ಮಾಡುವ ಉದ್ದೇಶವನ್ನು ನಾವು ಹೊಂದಿದ್ದೇವೆ. ದೇಶದಲ್ಲಿ ನಾವು ಕಾರ್ಯಾಚರಣೆ ಆರಂಭಿಸಿದ ಇಷ್ಟು ಬೇಗ ಸಿಪಿಒ ವಹಿವಾಟನ್ನು ಆರಂಭಿಸುವುದರಲ್ಲಿ ನಮ್ಮ ಪ್ರಯತ್ನವು ನಮ್ಮ ಉತ್ಪನ್ನಗಳ ಸರಾಸರಿ ಬದಲಾವಣೆ ಅವಧಿ ಬರುವುದಕ್ಕೂ ಮೊದಲೇ ಎಲ್ಲ ವ್ಯವಸ್ಥೆಗಳು ಮತ್ತು ಪ್ರಕ್ರಿಯೆಗಳು ಸಿದ್ಧವಾಗಿವೆ ಎಂಬುದನ್ನು ಖಚಿತಪಡಿಸುತ್ತದೆ ಎಂದು ಕಿಯಾ ಇಂಡಿಯಾದ ಸೇಲ್ಸ್‌ ಆಫೀಸರ್ ಮ್ಯುಂಗ್ ಸಿಕ್ ಸಾಹ್ನ್‌ ಹೇಳಿದ್ದಾರೆ.

Kia EV6 ಹೊಚ್ಚ ಹೊಸ ಕಿಯಾ EV6 ಎಲೆಕ್ಟ್ರಿಕ್ ಕಾರು, 528 ಕಿ.ಮೀ ಮೈಲೇಜ್, ಬುಕಿಂಗ್ ಬೆಲೆ 3 ಲಕ್ಷ ರೂ!

ಹೊಸ ಕಿಯಾ ಕಾರುಗಳ ಮೂರನೇ ಒಂದರಷ್ಟು ಗ್ರಾಹಕರು ರಿಪ್ಲೇಸ್‌ಮೆಂಟ್‌ ಖರೀದಿದಾರರು ಎಂದು ನಾವು ಗಮನಿಸಿದ್ದೇವೆ ಮತ್ತು ನಮ್ಮ ಪ್ರಮಾಣಿತ ಪ್ರೀ ಓನ್ಡ್‌ ಕಾರು ವಹಿವಾಟುಗಳ ಮೂಲಕ ಅವರಿಗೆ ನಾವು ಅನುಕೂಲವನ್ನು ಕಲ್ಪಿಸುತ್ತೇವೆ. ಹೊಸ ಕಿಯಾ ಕಾರುಗಳಿಗೆ ಯಾವುದೇ ಬಳಸಿದ ಕಾರುಗಳನ್ನು ಗ್ರಾಹಕರು ಎಕ್ಸ್‌ಚೇಂಜ್ ಮಾಡಬಹುದು ಮತ್ತು ಎಕ್ಸ್‌ಚೇಂಜ್ ಗ್ರಾಹಕರಿಗೆ ನಾವು ಸಂಯೋಜಿತ ಪ್ಯಾಕೇಜ್ಡ್‌ ಡೀಲ್ ಅನ್ನು ಒದಗಿಸುತ್ತೇವೆ. ಇದರೊಂದಿಗೆ ಸುರಕ್ಷಿತ ಮತ್ತು ಇನ್‌ಸ್ಟಂಟ್ ಪಾವತಿ ವರ್ಗಾವಣೆ ಆಯ್ಕೆಯೂ ಇರುತ್ತದೆ ಎಂದು ಮ್ಯುಂಗ್ ಸಿಕ್ ಹೇಳಿದರು.

ಕಿಯಾ ಸಿಪಿಒ ಮೂಲಕ ತಮ್ಮ ಕಾರುಗಳಿಗೆ ಸರಿಯಾದ ಬೆಲೆಯನ್ನು ಒದಗಿಸುವುದಕ್ಕಾಗಿ ನ್ಯಾಯೋಚಿತ, ಪಾರದರ್ಶಕ ಮತ್ತು ತ್ವರಿತ ಡಿಜಿಟಲ್‌ ಮೌಲೀಕರಣ ಪ್ರಕ್ರಿಯೆಯನ್ನು ಅನುಸರಿಸುವ ಮೂಲಕ ಗ್ರಾಹಕರಿಗೆ ಅದ್ಭುತ ಸೇವೆಗಳನ್ನು ಕಿಯಾ ಇಂಡಿಯಾ ಒದಗಿಸುವ ಗುರಿಯನ್ನು ಹೊಂದಿದೆ. ನೈಜ ಸಮಯದ ಡೇಟಾ ಇಂಟಿಗ್ರೇಶನ್ ಮತ್ತು ಸೈಂಟಿಫಿಕ್ ಬೆಲೆ ನಿಗದಿ ಸಲಹೆಯ ಜೊತೆಗೆ ಉದ್ಯಮದಲ್ಲೇ ಉತ್ತಮ ಡಿಜಿಟಲ್ ಇವ್ಯಾಲ್ಯುಶನ್ ಮೊಬೈಲ್ ಅಪ್ಲಿಕೇಶನ್‌ ಅನ್ನೂ ಕಂಪನಿ ಪರಿಚಯಿಸಿದೆ. ಕಿಯಾ ಸಿಪಿಒ ಮೂಲಕ ಮಾರಾಟ ಮಾಡಿದ ಮತ್ತು ಪ್ರಮಾಣೀಕರಿಸಿದ ಎಲ್ಲ ಕಿಯಾ ಕಾರುಗಳು 5 ವರ್ಷಕ್ಕಿಂತಲೂ ಕಡಿಮೆ ವಯಸ್ಸನ್ನು ಹೊಂದಿರುತ್ತವೆ ಮತ್ತು 1 ಲಕ್ಷ ಕಿ.ಮೀ ಮೈಲೇಜ್ ಹೊಂದಿರುತ್ತವೆ. ಸಮಗ್ರ 175 ಪಾಯಿಂಟ್ ಕ್ವಾಲಿಟಿ ಚೆಕ್‌ಗಳಿಗೆ ಒಳಪಡಲಿವೆ. ಈ ಕಾರುಗಳು ಯಾವುದೇ ಸ್ಟ್ರಕ್ಚರಲ್ ಡ್ಯಾಮೇಜ್ ಹೊಂದಿರುವುದಿಲ್ಲ. ಪರಿಶೀಲಿಸಿದ ಮಾಲೀಕತ್ವ ಮತ್ತು ಸೇವಾ ಇತಿಹಾಸವನ್ನು ಹೊಂದಿರಲಿದೆ ಮತ್ತು ಕಿಯಾ ಅಸಲಿ ಬಿಡಿಭಾಗಗಳನ್ನು ಬಳಸಿ ಮಾತ್ರವೇ ರಿಫರ್ಬಿಶ್ ಮಾಡಲಾಗುತ್ತದೆ.

ಕಿಯಾ ಸಿಪಿಒ ಗ್ರಾಹಕರಿಗೆ ಒನ್ ಸ್ಟಾಪ್ ಸೊಲ್ಯುಶನ್ ಆಗಿದ್ದು, ಕಿಯಾ ವಿಶ್ವಕ್ಕೆ ಸುಲಭ ಪ್ರವೇಶವನ್ನು ಒದಗಿಸುತ್ತದೆ ಮತ್ತು ಮನಃಶಾಂತಿಯನ್ನು ಒದಗಿಸುತ್ತದೆ. ಹೇಗಿದೆಯೋ ಹಾಗೆ ಆಧಾರದಲ್ಲಿ ಕಿಯಾ ಹೊರತಾದ ಕಾರುಗಳನ್ನೂ ಗ್ರಾಹಕರಿಗೆ ಲಭ್ಯವಾಗಿಸಲಾಗುತ್ತದೆ.

ದೇಶದಲ್ಲಿ ಸಿಪಿಒ ವಹಿವಾಟನ್ನು ತ್ವರಿತವಾಗಿ ವರ್ಧಿಸಲು ಕಿಯಾ ಯೋಜನೆಯನ್ನು ಹೊಂದಿದ್ದು, 2022 ರ ಕೊನೆಯ ಒಳಗೆ 30 ಕ್ಕೂ ಹೆಚ್ಚು ಔಟ್‌ಲೆಟ್‌ಗಳನ್ನು ಆರಂಭಿಸಲಾಗುತ್ತದೆ. ದೆಹಲಿ ಎನ್‌ಸಿಆರ್‌, ಬೆಂಗಳೂರು, ಅಹಮದಾಬಾದ್, ಹೈದರಾಬಾದ್, ಚಂಡೀಗಢ, ಜೈಪುರ, ಕೊಚ್ಚಿ, ಭುವನೇಶ್ವರ, ಕ್ಯಾಲಿಕಟ್, ಅಮೃತಸರ, ನಾಶಿಕ್, ಬರೋಡಾ, ಕಣ್ಣೂರು ಮತ್ತು ಮಲಪ್ಪುರಂ ಸೇರಿದಂತೆ 14 ನಗರಗಳಲ್ಲಿ 15 ಔಟ್‌ಲೆಟ್‌ಗಳನ್ನು ಈಗಾಗಲೇ ಸ್ಥಾಪಿಸಲಾಗಿದೆ.
 

click me!