ಓಲಾ ಮತ್ತು ಊಬರ್‌ ಕ್ಯಾಬ್‌ ಸೇವಾ ಕಂಪನಿಗಳ ವಿಲೀನ ಇಲ್ಲ

Published : Aug 03, 2022, 07:49 PM ISTUpdated : Aug 03, 2022, 07:50 PM IST
ಓಲಾ ಮತ್ತು ಊಬರ್‌ ಕ್ಯಾಬ್‌ ಸೇವಾ ಕಂಪನಿಗಳ ವಿಲೀನ ಇಲ್ಲ

ಸಾರಾಂಶ

ಬೆಂಗಳೂರು ಮೂಲದ ಓಲಾ ಕ್ಯಾಬ್‌ ಮತ್ತು ಅಮೇರಿಕದ ಮೊಬಿಲಿಟಿ ಕಂಪನಿ ಉಬರ್  ವಿಲೀನಗೊಳ್ಳಲಿವೆ ಎಂಬ ವದಂತಿಯನ್ನು ಎರಡೂ ಕಂಪನಿಗಳು ತಳ್ಳಿಹಾಕಿವೆ.

ನವದೆಹಲಿ (ಆ.3):  ದೇಶದಲ್ಲಿ ಕ್ಯಾಬ್‌ ಸೇವೆ ಅಥವಾ ರೈಡ್‌ ಶೇರಿಂಗ್‌ ಸೇವೆಗಳಲ್ಲಿ ಸ್ಪರ್ಧೆಗಿಳಿದಿರುವ ಬೆಂಗಳೂರು ಮೂಲದ ಓಲಾ ಕ್ಯಾಬ್‌ ಮತ್ತು ಅಮೇರಿಕದ ಮೊಬಿಲಿಟಿ ಕಂಪನಿ ಉಬರ್ ವಿಲೀನಗೊಳ್ಳಲಿವೆ ಎಂಬ ವದಂತಿಯನ್ನು ಎರಡೂ ಕಂಪನಿಗಳು ತಳ್ಳಿಹಾಕಿವೆ. ಸಂಭಾವ್ಯ ವಿಲೀನದ ಕುರಿತು ಚರ್ಚಿಸಲು ಓಲಾ ಕ್ಯಾಬ್ಸ್‌ ಮುಖ್ಯಸ್ಥ ಭವಿಶ್ ಅಗರ್ವಾಲ್, ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಊಬರ್ ಕಾರ್ಯನಿರ್ವಾಹಕರನ್ನು ಭೇಟಿ ಮಾಡಿದ್ದಾರೆ ಎಂದು ಸುದ್ದಿಯಾಗಿತ್ತು. ಈಗ ಎರಡೂ ಕಂಪನಿಗಳು ಈಗ ತಮ್ಮ ಹೇಳಿಕೆಗಳೊಂದಿಗೆ ಮುಂದೆ ಬಂದಿದ್ದು, ಅವರು ಪರಸ್ಪರ ಯಾವುದೇ ವಿಲೀನವನ್ನು ನಿರೀಕ್ಷಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿವೆ. ಓಲಾ ಕ್ಯಾಬ್ಸ್ ಸಂಸ್ಥಾಪಕ ಭವಿಶ್ ಅಗರ್ವಾಲ್ ಅವರು ಟ್ವೀಟ್ ಮಾಡಿದ್ದು, “ಇದು ಸಂಪೂರ್ಣ ಸುಳ್ಳು. ನಾವು ತುಂಬಾ ಲಾಭದಾಯಕವಾಗಿ ಸಾಗುತ್ತಿದ್ದೇವೆ ಮತ್ತು ಉತ್ತಮವಾಗಿ ಬೆಳೆಯುತ್ತಿದ್ದೇವೆ. ಕೆಲವು ಇತರ ಕಂಪನಿಗಳು ತಮ್ಮ ವ್ಯವಹಾರವನ್ನು ಭಾರತದಿಂದ ನಿರ್ಗಮಿಸಲು ಬಯಸಿದರೆ ಉತ್ತಮ ನಿರ್ಧಾಋ! ನಾವು ಎಂದಿಗೂ ವಿಲೀನಗೊಳ್ಳುವುದಿಲ್ಲ” ಎಂದು ಸ್ಪಷ್ಟನೆ ನೀಡಿದ್ದಾರೆ. ಈ ನಡುವೆ ಊಬರ್‌ ಕೂಡ ಹೇಳಿಕೆ ನೀಡಿದ್ದು “ ಇದು ತಪ್ಪು ವರದಿ. ನಾವು ಓಲಾ ಜೊತೆ ವಿಲೀನದ ಮಾತುಕತೆಯಲ್ಲಿಲ್ಲ” ಎಂದಿದೆ. 

ಗೋವಾದಲ್ಲಿಆ್ಯಪ್ ಆಧಾರಿತ ಟ್ಯಾಕ್ಸಿ ಸೇವೆ:  ಇತ್ತೀಚೆಗೆ ಗೋವಾ ರಾಜ್ಯದಲ್ಲಿ ಸ್ಥಳೀಯ ಟ್ಯಾಕ್ಸಿ ಸಂಸ್ಥೆಗಳು (Local taxi company) ಮತ್ತು ಪ್ರದೇಶಗಳಲ್ಲಿ ನಡೆಯುತ್ತಿರುವ ಘರ್ಷಣೆಗಳನ್ನು ಪರಿಹರಿಸಲು ಅಲ್ಲಿನ ಮುಖ್ಯಮಂತ್ರಿ ಕಚೇರಿಯಿಂದ ಓಲಾ (Ola) ಮತ್ತು ಊಬರ್ (Uber) ನಂತಹ ದೊಡ್ಡ ಅಪ್ಲಿಕೇಶನ್ ಆಧಾರಿತ ಕ್ಯಾಬ್ ಪೂರೈಕೆದಾರರಿಗೆ ಕರೆ ಬಂದಿತ್ತು. ಸದ್ಯ ಅಲ್ಲಿ ಸರ್ಕಾರಿ ಸ್ವಾಮ್ಯದ ಏಕೈಕ ಅಪ್ಲಿಕೇಶನ್ ಆಧಾರಿತ ಟ್ಯಾಕ್ಸಿ ಸೇವೆ (application based taxi service) ಗೋವಾ ಮೈಲ್ಸ್  (Goa mails) ಕಾರ್ಯನಿರ್ವಹಿಸುತ್ತಿದೆ. 

ಭಾರತದಲ್ಲೇ ತಯಾರಾಗಲಿದೆ ಓಲಾ ಎಲೆಕ್ಟ್ರಿಕ್ ಕಾರು, ಟೀಸರ್ ಬಿಡುಗಡೆ ಮಾಡಿದ ಸಿಇಓ!

ರಾಜ್ಯ ವಿಧಾನಸಭೆಯಲ್ಲಿ ದೇಲಿಲಾ ಲೋಬೋ ಅವರ ಪ್ರಶ್ನೆಗೆ ಉತ್ತರಿಸಿದ ಸಿಎಂ (CM) ಪ್ರಮೋದ್ ಸಾವಂತ್ (Pramod Savant) ಈ ವಿಷಯ ತಿಳಿಸಿದ್ದರು. ಎಲ್ಲರ ನೆರವಿನೊಂದಿಗೆ ಆಪ್ ಆಧಾರಿತ ಟ್ಯಾಕ್ಸಿ ಸೇವೆಯನ್ನು ಜಾರಿಗೆ ತರಲಾಗುವುದು ಎಂದು ಭರವಸೆ ನೀಡಿದ್ದರು. “ಆ್ಯಪ್ (App) ಆಧಾರಿತ ಟ್ಯಾಕ್ಸಿ ಸೇವೆಯೊಂದೇ ಪರಿಹಾರವಾಗಿದೆ. ಗೋವಾದ ಟ್ಯಾಕ್ಸಿ ಮಾಲೀಕರ ಹಿತಾಸಕ್ತಿಯಿಂದ ಇದನ್ನು ಹೇಳುತ್ತಿದ್ದೇವೆ. ದೀರ್ಘಾವಧಿಯಲ್ಲಿ, ಅಪ್ಲಿಕೇಶನ್ ಆಧಾರಿತ ಸೇವೆಯಿಲ್ಲದೆ, ನಾವು ಉಳಿಯುವುದಿಲ್ಲ" ಎಂದು ಅವರು ವಿವರಿಸಿದ್ದರು. ಸದ್ಯ ಇಲ್ಲಿನ ಟ್ಯಾಕ್ಸಿ ಚಾಲಕರ ಟ್ರ್ಯಾಕಿಂಗ್ ಸಹ ನಡೆಯುವುದಿಲ್ಲ. ಅವರು ಮೀಟರ್ಗಳನ್ನು ಬಳಸುತ್ತಾರೆ ಎಂದು ಪರಿಗಣಿಸಿ ನಾವು ಸಬ್ಸಿಡಿಗಳನ್ನು ನೀಡಿದ್ದೇವೆ, ಆದರೆ ಅವರು ಅದನ್ನು ಬಳಸುತ್ತಿಲ್ಲ.. ಅವರು ಪ್ರವಾಸಿಗರನ್ನೂ ಮೋಸ ಮಾಡುತ್ತಾರೆ. ನಮಗೆ ದೀರ್ಘಾವಧಿಗೆ ಪ್ರವಾಸೋದ್ಯಮ ಬೇಕಾದರೆ, ನಾವು ಇದರ ಬಗ್ಗೆ ಯೋಚಿಸಬೇಕು ಎಂದಿದ್ದರು.

ಮನೆಗೆ ಹೋಗೋದಕ್ಕಿಂತ ಗೋವಾ ವಿಮಾನವೇ ಚೀಪರ್ ! ಊಬರ್ ಬಿಲ್ ನೋಡಿದ ವ್ಯಕ್ತಿ ಶಾಕ್

ಗೋವಾದಲ್ಲಿ ಕಾರ್ಯನಿರ್ವಹಿಸಲು ಓಲಾ ಮತ್ತು ಉಬರ್‌ಗೆ ಅವಕಾಶ ನೀಡುವ ಬದಲು ಸರ್ಕಾರವು ಗೋವಾಮೈಲ್ಸ್ ಎಂಬ ತನ್ನದೇ ಆದ ಸೇವೆಯನ್ನು ಮೊದಲು ಅಭಿವೃದ್ಧಿಪಡಿಸಿತು, ಆದಾಗ್ಯೂ, ಇದು ಸಾಮಾನ್ಯ ಟ್ಯಾಕ್ಸಿ ಚಾಲಕರು ಮತ್ತು ಗೋವಾ ಮೈಲ್ಸ್ ಸೇವೆಯ ಚಾಲಕರ ನಡುವೆ ಘರ್ಷಣೆಗೆ ಕಾರಣವಾಯಿತು. ಅಲ್ಲಿನ ಟ್ಯಾಕ್ಸಿ ಚಾಲಕರು ಓಲಾ ಮತ್ತು ಉಬರ್‌ಗಳನ್ನು ವಿರೋಧಿಸುತ್ತಾರೆ. ಏಕೆಂದರೆ ಇವುಗಳ ಪ್ರವೇಶವು ಸ್ಪರ್ಧೆಯನ್ನು ಹೆಚ್ಚಿಸುತ್ತದೆ ಮತ್ತು ಅವರ ಜೀವನೋಪಾಯದ ಮೇಲೆ  ಪರಿಣಾಮವನ್ನು ಬೀರುತ್ತದೆ. Uber ಮತ್ತು Ola ಪ್ರವೇಶದಿಂದ ಗೋವಾದಲ್ಲಿ ಬೆಳೆಯುತ್ತಿರುವ ಸೆಲ್ಫ್-ಡ್ರೈವ್ ಕಾರ್ ಸೇವೆಗಳು ಮತ್ತು ಬಾಡಿಗೆ ಸ್ಕೂಟರ್ ಉದ್ಯಮಗಳ ಮೇಲೆ ಪ್ರಭಾವ ಬೀರುತ್ತದೆ.

PREV
Read more Articles on
click me!

Recommended Stories

ಕಾಂತಾರ ನಟನಿಗೆ ದೈವದ ಅಭಯ, 1.5 ಕೋಟಿ ರೂ ವೆಲ್‌ಫೈರ್ ಕಾರಿನಲ್ಲಿ ಕಾಣಿಸಿಕೊಂಡ ರಿಷಬ್ ಶೆಟ್ಟಿ
Tata Sierra vs Maruti Grand Vitara : ಯಾವ SUV ಉತ್ತಮ ಎಂಜಿನ್ ಹೊಂದಿದೆ? ಬೆಲೆ, ವೈಶಿಷ್ಟ್ಯ ತಿಳಿಯಿರಿ