
ಮುಂಬೈ (ಆ.04) ಅಂಬಾನಿ ಕುಟುಂಬದಲ್ಲಿ ದುಬಾರಿ ಕಾರುಗಳಿಗೆ ಕೊರತ ಇಲ್ಲ. ರೋಲ್ಸ್ ರಾಯ್ಸ್, ಬುಗಾಟಿ, ಪೊರ್ಶೆ ಸೇರಿದಂತೆ ಎಲ್ಲಾ ದುಬಾರಿ ಕಾರುಗಳಿವೆ. ಮುಕೇಶ್ ಅಂಬಾನಿ, ಅನಂತ್ ಅಂಬಾನಿ, ಆಕಾಶ್ ಅಂಬಾನಿ, ಇಶಾ ಅಂಬಾನಿ ಬಳಿಕ ಹಲವು ದುಬಾರಿ ಕಾರುಗಳಿವೆ. ಆದರೆ ಭಾರತದಲ್ಲೇ ಅತೀ ದುಬಾರಿ ಕಾರು ಹೊಂದಿರುವ ಮಾಲೀಕ ಮುಕೇಶ್, ಅನಂತ್, ಆಕಾಶ್ ಯಾರೂ ಇಲ್ಲ. ಇದು ನೀತಾ ಅಂಬಾನಿ ಅನ್ನೋ ಪೋಸ್ಟ್‌ಗಳು ಹರಿದಾಡುತ್ತಿದೆ. ನೀತಾ ಅಂಬಾನಿ ಬಳಿ ಆಡಿ ವಿಶೇಷ ಎಡಿಶನ್ ಎ9 ಚಮಿಲಿಯನ್ ಕಾರಿದೆ. ಇದರ ಬೆಲೆ ಬರೋಬ್ಬರಿ 100 ಕೋಟಿ ರೂಪಾಯಿ ಎಂದು ಹಲವು ಪೋಸ್ಟ್‌ಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದು ದುಬಾರಿ ಕಾರು ನಿಜ. ಆದರೆ ಈ ಕಾರು ನೀತಾ ಅಂಬಾನಿ ಬಳಿ ಇಲ್ಲ.
ಆಡಿ ಎ9 ಚಮಿಲಿಯನ್ ಕಾರು ಬರೋಬ್ಬರಿ 100 ಕೋಟಿ ರೂಪಾಯಿ ಅನ್ನೋ ಮಾತುಗಳು ಕೇಳಿಬಂದಿದೆ. ಇದನ್ನು ನೀತಾ ಅಂಬಾನಿ ಖರೀದಿಸಿದ್ದಾರೆ ಎಂದು ಹಲವು ಪೋಸ್ಟ್ ವೈರಲ್ ಆಗಿದೆ. ಆದರೆ ಆಡಿ ಎ9 ಚಮಿಲಿಯನ್ ಕಾರು ಇನ್ನೂ ಪ್ರೊಡಕ್ಷನ್ ಆಗಿಲ್ಲ. ದಶಕಗಳ ಹಿಂದೆ ಚಮಿಲಿಯನ್ ಕಾನ್ಸೆಪ್ಟ್ ಕಾರನ್ನು ಆಡಿ ಆಟೋ ಎಕ್ಸ್‌ಪೋದಲ್ಲಿ ಅನಾವರಣ ಮಾಡಿ ಪ್ರದರ್ಶನಕ್ಕಿಟ್ಟಿತ್ತು. ಇದು ಕೇವಲ ಕಾನ್ಸೆಪ್ಟ್ ಕಾರು, ಈ ಕಾರಿನ ಉತ್ಪಾದನೆ ಆಗಿಲ್ಲ, ಮಾರಾಟವೂ ಆಗಿಲ್ಲ. ವಿಶ್ವದ ಯಾರ ಬಳಿಯೂ ಈ ಕಾರಿಲ್ಲ. ಈ ಕಾರನ್ನು ಆಡಿ ಕಂಪನಿ ಶೀಘ್ರದಲ್ಲೇ ಪ್ರೊಡಕ್ಷನ್ ಮಾಡುವ ಸಾಧ್ಯತೆ ಇದೆ. ಲಿಮಿಟೆಡ್ ಎಡಿಶನ್ ಅಡಿಯಲ್ಲಿ ಈ ಕಾರು ಉತ್ಪಾದನೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಆದರೆ ಆಡಿ ಈ ಕುರಿತು ಯಾವುದೇ ಸ್ಪಷ್ಟನೆ ನೀಡಿಲ್ಲ.
ನೀತಾ ಅಂಬಾನಿ ಬಳಿ ಇರುವ ಅತೀ ದುಬಾರಿ ಕಾರು ರೋಲ್ಸ್ ರಾಯ್ಸ್ ಫ್ಯಾಂಟಮ್ VIII. ರೋಸ್ ಕಲರ್ ಈ ಕಾರು ಐಷಾರಾಮಿ ಕಾರಿಗಿದೆ. ಇದರ ಬೆಲೆ ಸರಿಸುಮಾರು 10 ಕೋಟಿ ರೂಪಾಯಿ. ಬೆಲೆ ಕೊಂಚ ವ್ಯತ್ಯಾಸವಾಗುವ ಸಾಧ್ಯತೆ ಇದೆ. ಕಾರಣ ಇದು ಕಸ್ಟಮೈಸೈಡ್ ಎಡಿಶನ್ ಕಾರಾಗಿದ್ದು, ಎಕ್ಸ್‌ಟೆಂಡ್ ವ್ಹೀಲ್‌ಬೇಸ್ ಹೊಂದಿದೆ. ಹೀಗಾಗಿ ಮಾಲೀಕರ ಬೇಡಿಕೆಗೆ ತಕ್ಕಂತೆ ಕಾರು ಕಸ್ಟಮೈಸ್ಡ್ ಮಾಡಲಾಗುತ್ತದೆ. ಈ ವೇಳೆ ಇದರ ಬೆಲೆ ಹೆಚ್ಚಾಗಲಿದೆ. 12 ರಿಂದ 15 ಕೋಟಿ ವರೆಗೂ ಕಾರಿನ ಬೆಲೆ ಹೆಚ್ಚಾಗುವ ಸಾಧ್ಯತೆ ಇದೆ. ಅನಂತ್ ಅಂಬಾನಿ ಮದುವೆ ವೇಳೆ ಈ ಕಾರು ಹೆಚ್ಚಾಗಿ ಓಡಾಡಿತ್ತು. ಮದುವೆ ಕಾರ್ಯಕ್ರಮಕ್ಕೆ ನೀತಾ ಅಂಬಾನಿ ಹಾಗೂ ಮುಕೇಶ್ ಅಂಬಾನಿ ಈ ಕಾರಿನಲ್ಲಿ ಆಗಮಿಸಿದ್ದರು. ಮದುವೆ ವೇಳೆ ಅನಂತ್ ಅಂಬಾನಿ ರೋಲ್ಸ್ ರಾಯ್ಸ್ ಕಲ್ಲಿನಾನ್ ಬ್ಲಾಕ್ ಬ್ಯಾಡ್ಜ್ ಕಾರು ಬಳಸಿದ್ದರು.
ಆಡಿ ಹೊರತಂದಿರು ಆಡಿ ಎ9 ಚಮಿಲಿಯನ್ ಕಾರು ಎರೇಡೈನಮಿಕ್ ಬಾಡಿ ಶೇಪ್ ಹೊಂದಿದೆ. ಅತೀ ವಿಶೇಷ ವಿನ್ಯಾಸ ಜೊತೆಗೆ ಅತ್ಯಾಧುನಿಕ ತಂತ್ರಜ್ಞಾನ ಇದರಲ್ಲಿ ಬಳಸಲಾಗಿದೆ. ಒಂದು ಪುಶ್ ಬಟನ್‌ನಲ್ಲಿ ಈ ಕಾರಿನ ಬಣ್ಣ ಬದಲಾಗಲಿದೆ. ಮುಂದಿನ ಜನರೇಶನ್ ಕಾರು ಎಂದು ಈ ಎ9 ಕಾರನ್ನು ಆಟೋ ಎಕ್ಸ್‌ಪೋದಲ್ಲಿ ಜರ್ಮನಿ ಕಾರ್ ಮೇಕರ್ ಪ್ರದರ್ಶನ ಮಾಡಿತ್ತು. ಪ್ರದರ್ಶನ ಮಾಡಿದ್ದ ಆಡಿ ಎ9 ಕಾರಿನ ಉತ್ಪಾದನೆಯಲ್ಲಿ 4.0 ಲೀಟರ್ V8 ಎಂಜಿನ್ ಬಳಸಲು ಆಡಿ ನಿರ್ಧರಿಸಿತ್ತು. ಬರೋಬ್ಬರಿ 600 bhp ಪವರ್ ಸೇರಿದಂತೆ ಅತ್ಯುತ್ತಮ ಪರ್ಫಾಮೆನ್ಸ ಕಾರಾಗಿ ಬಿಡುಗಡೆ ಮಾಡಲು ಸಿದ್ಧತೆ ಮಾಡಿತ್ತು.