Tata Nexon 2027: ಮಾರುಕಟ್ಟೆಗೆ ಲಗ್ಗೆ ಇಡಲಿದೆ ಹೊಸ ಟಾಟಾ ನೆಕ್ಸಾನ್! ಫೀಚರ್ಸ್ ಹೇಗಿರಲಿದೆ?

Published : Aug 19, 2026, 06:22 PM IST
Tata Nexon ADAS

ಸಾರಾಂಶ

ಭಾರತದ ಜನಪ್ರಿಯ ಕಾಂಪ್ಯಾಕ್ಟ್ ಎಸ್‌ಯುವಿ ಟಾಟಾ ನೆಕ್ಸಾನ್‌ನ ಹೊಸ ತಲೆಮಾರಿನ ಮಾಡೆಲ್ ರಸ್ತೆಯಲ್ಲಿ ಪರೀಕ್ಷಾರ್ಥವಾಗಿ ಕಾಣಿಸಿಕೊಂಡಿದೆ. 2027ರ ವೇಳೆಗೆ ಬಿಡುಗಡೆಯಾಗುವ ನಿರೀಕ್ಷೆಯಿರುವ ಈ ಕಾರು, ಸಂಪೂರ್ಣ ಹೊಸ ವಿನ್ಯಾಸ, ಪ್ರೀಮಿಯಂ ಕ್ಯಾಬಿನ್, ಮತ್ತು ಲೆವೆಲ್ 2 ADAS ನಂತಹ ಸುಧಾರಿತ ಫೀಚರ್‌ಗಳೊಂದಿಗೆ ಬರಲಿದೆ.

ಬೆಂಗಳೂರು: ಭಾರತದ ಮಾರುಕಟ್ಟೆಯಲ್ಲಿ ಸಖತ್ ಜನಪ್ರಿಯವಾಗಿರುವ ಕಾಂಪ್ಯಾಕ್ಟ್ ಎಸ್‌ಯುವಿ ಟಾಟಾ ನೆಕ್ಸಾನ್‌ನ ಹೊಸ ತಲೆಮಾರಿನ ಮಾಡೆಲ್ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಎಂದು ವರದಿಗಳು ತಿಳಿಸಿವೆ. ಹೊಸ ನೆಕ್ಸಾನ್‌ನ ಟೆಸ್ಟ್​ ಮಾಡೆಲ್​ ಒಂದು ಸಂಪೂರ್ಣವಾಗಿ ಗೌಪ್ಯ ಸ್ಥಿತಿಯಲ್ಲಿ ರಸ್ತೆಯಲ್ಲಿ ಕಾಣಿಸಿಕೊಂಡಿದೆ. ಇದರ ಬೆನ್ನಲ್ಲೇ, ಈ ಕಾರಿನ ಬಗ್ಗೆ ಹೆಚ್ಚಿನ ಮಾಹಿತಿ ಹೊರಬಿದ್ದಿದೆ. ಮೋಟಾರ್ ಆಕ್ಟೇನ್ ಬಿಡುಗಡೆ ಮಾಡಿದ ಚಿತ್ರಗಳಲ್ಲಿ ಈ ಹೊಸ ಎಸ್‌ಯುವಿಯನ್ನು ನೋಡಬಹುದು. ಕಾರಿನ ಬಾಡಿಯನ್ನು ಸಂಪೂರ್ಣವಾಗಿ ಮುಚ್ಚಿದ್ದರೂ, ಅದರ ಗಾತ್ರ ಮತ್ತು ORVM ವಿನ್ಯಾಸವನ್ನು ಗಮನಿಸಿ, ಇದು ಹೊಸ ತಲೆಮಾರಿನ ನೆಕ್ಸಾನ್ ಎಂದು ವರದಿಗಳು ಹೇಳುತ್ತಿವೆ. 2027ರ ಮಧ್ಯದ ವೇಳೆಗೆ ಹೊಸ ನೆಕ್ಸಾನ್ ಮಾರುಕಟ್ಟೆಗೆ ಬರುವ ಸಾಧ್ಯತೆ ಇದೆ.

ಹೊಸ ವಿನ್ಯಾಸದೊಂದಿಗೆ ನೆಕ್ಸಾನ್

ಹೊಸ ತಲೆಮಾರಿನ ನೆಕ್ಸಾನ್‌ನಲ್ಲಿ ದೊಡ್ಡ ಮಟ್ಟದ ಡಿಸೈನ್ ಬದಲಾವಣೆಗಳನ್ನು ನಿರೀಕ್ಷಿಸಲಾಗಿದೆ. ಟಾಟಾದ ಹೊಸ ಎಸ್‌ಯುವಿ ಮಾಡೆಲ್‌ಗಳಲ್ಲಿ ಕಾಣುವ ಆಧುನಿಕ ಮತ್ತು ಶಾರ್ಪ್ ಡಿಸೈನ್ ಶೈಲಿಯನ್ನು ಹೊಸ ನೆಕ್ಸಾನ್‌ನಲ್ಲೂ ಅಳವಡಿಸುವ ಸಾಧ್ಯತೆ ಇದೆ. ಮುಂಭಾಗದಲ್ಲಿ ಶಾರ್ಪ್ ಪ್ರೊಫೈಲ್, ಕನೆಕ್ಟೆಡ್ ಎಲ್ಇಡಿ ಡಿಆರ್‌ಎಲ್, ಹೊಸ ಗ್ರಿಲ್ ಮತ್ತು ಹೊಸದಾಗಿ ವಿನ್ಯಾಸಗೊಳಿಸಿದ ಬಂಪರ್ ಇರಬಹುದು. ಸೈಡ್​ನಲ್ಲಿ ಹೊಸ ಅಲಾಯ್ ವೀಲ್‌ಗಳು ಮತ್ತು ಹಿಂಭಾಗದಲ್ಲಿ ಕನೆಕ್ಟೆಡ್ ಎಲ್ಇಡಿ ಲೈಟ್ ಬಾರ್‌ನೊಂದಿಗೆ ಹೊಸ ಟೈಲ್ ಲ್ಯಾಂಪ್ ವಿನ್ಯಾಸವನ್ನು ನಿರೀಕ್ಷಿಸಲಾಗಿದೆ.

ಕ್ಯಾಬಿನ್‌ನಲ್ಲೂ ದೊಡ್ಡ ಬದಲಾವಣೆಗಳು

ಹೊಸ ನೆಕ್ಸಾನ್‌ನ ಒಳಭಾಗದಲ್ಲೂ ಸಾಕಷ್ಟು ಸುಧಾರಣೆಗಳಾಗಲಿವೆ ಎಂದು ವರದಿಗಳು ಹೇಳುತ್ತಿವೆ. ಈಗಿನ ಮಾಡೆಲ್‌ಗಿಂತ ಹೆಚ್ಚು ಪ್ರೀಮಿಯಂ ಅನುಭವ ನೀಡಲು ಸಾಫ್ಟ್ ಟಚ್ ಮೆಟೀರಿಯಲ್‌ಗಳು, ಹೊಸ ಡ್ಯಾಶ್‌ಬೋರ್ಡ್ ವಿನ್ಯಾಸ ಮತ್ತು ಹೊಸ ಇಂಟೀರಿಯರ್ ಕಲರ್ ಥೀಮ್ ಅನ್ನು ಸೇರಿಸುವ ಸಾಧ್ಯತೆಯಿದೆ.

ಲೆವೆಲ್ 2 ADAS ಬರಲಿದೆ

ಫೀಚರ್‌ಗಳ ವಿಷಯದಲ್ಲೂ ಹೊಸ ನೆಕ್ಸಾನ್ ದೊಡ್ಡ ಮುನ್ನಡೆ ಸಾಧಿಸಲಿದೆ ಎನ್ನಲಾಗುತ್ತಿದೆ. ಈಗಿನ ಮಾಡೆಲ್‌ನಲ್ಲೇ ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು, ಪವರ್ಡ್ ಡ್ರೈವರ್ ಸೀಟ್, ADAS, 360-ಡಿಗ್ರಿ ಕ್ಯಾಮೆರಾ, ಪನೋರಮಿಕ್ ಸನ್‌ರೂಫ್‌ನಂತಹ ಫೀಚರ್​ಗಳಿವೆ. ಹೊಸ ಮಾಡೆಲ್‌ನಲ್ಲಿ ಲೆವೆಲ್ 2 ADAS, ದೊಡ್ಡ ಡ್ಯುಯಲ್ ಸ್ಕ್ರೀನ್ ಸಿಸ್ಟಮ್, ಆಗ್ಮೆಂಟೆಡ್ ರಿಯಾಲಿಟಿ ಹೆಡ್ಸ್-ಅಪ್ ಡಿಸ್‌ಪ್ಲೇ, ಪವರ್ಡ್ ಕೋ-ಡ್ರೈವರ್ ಸೀಟ್ ಮತ್ತು 12-ಸ್ಪೀಕರ್ ಜೆಬಿಎಲ್ ಆಡಿಯೊ ಸಿಸ್ಟಮ್‌ನಂತಹ ಫೀಚರ್​ಗಳು ಸಿಗಬಹುದು. ಇದರಿಂದ ನೆಕ್ಸಾನ್‌ನ ಕ್ಯಾಬಿನ್ ಇನ್ನಷ್ಟು ಪ್ರೀಮಿಯಂ ಆಗಲಿದೆ ಎಂದು ನಿರೀಕ್ಷಿಸಲಾಗಿದೆ.

ಪೆಟ್ರೋಲ್‌ನಿಂದ ಎಲೆಕ್ಟ್ರಿಕ್‌ವರೆಗೆ

ಪವರ್‌ಟ್ರೇನ್ ಆಯ್ಕೆಗಳ ವಿಚಾರದಲ್ಲಿ, ಈಗಿರುವ ವೈವಿಧ್ಯತೆಯನ್ನೇ ಹೊಸ ತಲೆಮಾರಿನಲ್ಲೂ ಮುಂದುವರಿಸುವ ಸಾಧ್ಯತೆ ಇದೆ. ಸದ್ಯದ ನೆಕ್ಸಾನ್‌ನಲ್ಲಿ 1.2-ಲೀಟರ್ ಟರ್ಬೊ ಪೆಟ್ರೋಲ್, 1.2-ಲೀಟರ್ ಟರ್ಬೊ ಪೆಟ್ರೋಲ್ ಸಿಎನ್‌ಜಿ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್‌ಗಳಿವೆ. ನೆಕ್ಸಾನ್ ಇವಿಯಲ್ಲೂ ಬೇರೆ ಬೇರೆ ಬ್ಯಾಟರಿ ಪ್ಯಾಕ್ ಆಯ್ಕೆಗಳಿವೆ. ಹೊಸ ತಲೆಮಾರಿನ ಸಿಎನ್‌ಜಿ ಆವೃತ್ತಿಯ ಜೊತೆಗೆ ಎಎಂಟಿ ಗೇರ್‌ಬಾಕ್ಸ್‌ ಅನ್ನು ಪರಿಚಯಿಸಲು ಟಾಟಾ ಪ್ಲ್ಯಾನ್ ಮಾಡಿರಬಹುದು ಎಂದು ವರದಿಗಳು ಹೇಳುತ್ತಿವೆ.

ಹೆಚ್ಚಿನ ರೇಂಜ್‌ನೊಂದಿಗೆ ನೆಕ್ಸಾನ್ ಇವಿ

ಹೊಸ ನೆಕ್ಸಾನ್ ಇವಿಯಲ್ಲಿ ಈಗ ಇರುವುದಕ್ಕಿಂತ ದೊಡ್ಡ ಬ್ಯಾಟರಿ ಪ್ಯಾಕ್ ಸಿಗಬಹುದು. ಇದರಿಂದ ವಾಹನದ ಡ್ರೈವಿಂಗ್ ರೇಂಜ್ ಕೂಡ ಹೆಚ್ಚಾಗುವ ಸಾಧ್ಯತೆಯಿದೆ. ಆದರೆ, ಪವರ್‌ಟ್ರೇನ್‌ಗೆ ಸಂಬಂಧಿಸಿದ ವಿವರಗಳನ್ನು ಟಾಟಾ ಮೋಟಾರ್ಸ್ ಇನ್ನೂ ಅಧಿಕೃತವಾಗಿ ಬಿಡುಗಡೆ ಮಾಡಿಲ್ಲ.

PREV
Read more Articles on
click me!

Recommended Stories

ಆಟೋಮೊಬೈಲ್ ಇತಿಹಾಸದಲ್ಲೇ ಮಹಾ ದಾಖಲೆ: 382 ಕೋಟಿ ರೂ.ಗೆ ಮಾರಾಟವಾಯ್ತು ಫೆರಾರಿಯ ಮೊದಲ ಇವಿ ಕಾರು!
Car News; ಸ್ಟೈಲಿಶ್ ಲುಕ್, ಪವರ್‌ಫುಲ್ ಎಂಜಿನ್; ಹೊಸ ಅವತಾರದಲ್ಲಿ ಮಾರುಕಟ್ಟೆಗೆ ಧುಮುಕಿದ ಸ್ಕೋಡಾ ಸ್ಲಾವಿಯಾ!