ದೇಶದ ಅತಿದೊಡ್ಡ ಕಾರು ತಯಾರಕ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ ತನ್ನ ಸಿಎನ್ಜಿ ಶ್ರೇಣಿಯ ವಾಹನಗಳು 10 ಲಕ್ಷ ವಾಹನಗಳ ಮಾರಾಟದ ಮೈಲಿಗಲ್ಲನ್ನು ದಾಟಿದೆ
Auto Desk: ದೇಶದ ಅತಿದೊಡ್ಡ ಕಾರು ತಯಾರಕ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ (Maruti Suzuki India Limited) ತನ್ನ ಸಿಎನ್ಜಿ (CNG) ಶ್ರೇಣಿಯ ವಾಹನಗಳು 10 ಲಕ್ಷ ವಾಹನಗಳ ಮಾರಾಟದ ಮೈಲಿಗಲ್ಲನ್ನು ದಾಟಿದೆ ಎಂದು ಹೇಳಿಕೆ ನೀಡಿದೆ.ಪ್ರಸ್ತುತ, ಕಂಪನಿಯು ಆಲ್ಟೊ (Alto), ಎಸ್-ಪ್ರೆಸ್ಸೊ (S-Presso) ವ್ಯಾಗನ್ಆರ್,(WagonR) ಸೆಲೆರಿಯೊ (Celerio), ಡಿಜೈರ್ (Dezire), ಎರ್ಟಿಗಾ (Ertiga), ಇಕೊ (Eco), ಸೂಪರ್ ಕ್ಯಾರಿ (Super Carry) ಮತ್ತು ಟೂರ್-ಎಸ್ (Tour –S) ಸೇರಿದಂತೆ ವೈಯಕ್ತಿಕ ಮತ್ತು ವಾಣಿಜ್ಯ ವಿಭಾಗದಲ್ಲಿ ಒಂಬತ್ತು 'ಎಸ್-ಸಿಎನ್ಜಿ' ವಾಹನಗಳ ಪೋರ್ಟ್ಫೋಲಿಯೊವನ್ನು ಹೊಂದಿದೆ.
ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ (MSIL) ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಕೆನಿಚಿ ಆಯುಕಾವಾ, ಗ್ರಾಹಕರಿಗೆ ಸುರಕ್ಷಿತ, ವಿಶ್ವಾಸಾರ್ಹ, ಸ್ವಚ್ಛ ಮತ್ತು ಪರಿಸರ ಸ್ನೇಹಿ ವಾಹನಗಳನ್ನು ಒದಗಿಸುವುದು ನಮ್ಮ ಗುರಿ. ಮತ್ತು ಭಾರತೀಯ ಡ್ರೈವಿಂಗ್ ಪರಿಸ್ಥಿತಿಗಳಿಗೆ ಸರಿಹೊಂದುವಂತೆ ನಮ್ಮ S-CNG ಶ್ರೇಣಿಯನ್ನು ನಿರ್ದಿಷ್ಟವಾಗಿ ವಿನ್ಯಾಸಗೊಳಿಸಲಾಗಿದೆ" ಎಂದಿದ್ದಾರೆ.
undefined
ಇಂದು, ಈಗಾಗಲೇ 3,700 ಕ್ಕೂ ಹೆಚ್ಚು ಸಿಎನ್ಜಿ ಕೇಂದ್ರಗಳಿವೆ. ಮುಂದಿನ ಕೆಲವು ವರ್ಷಗಳಲ್ಲಿ ದೇಶದಾದ್ಯಂತ 10,000 ಸಿಎನ್ಜಿ ಕೇಂದ್ರಗಳನ್ನು ತಲುಪುವ ಸರ್ಕಾರದ ಗುರಿಯೊಂದಿಗೆ ನಾವು ಹೆಜ್ಜೆ ಹಾಕಲಿದ್ದೇವೆ. ದೊಡ್ಡ ಪ್ರಮಾಣದ ಪ್ರಯಾಣಿಕ ವಾಹನಗಳ ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡುವಲ್ಲಿ ಸಿಎನ್ಜಿ(CNG) ಮಹತ್ವದ ಪಾತ್ರ ವಹಿಸುತ್ತದೆ ಎಂದು ಆಯುಕಾವಾ ಹೇಳಿದರು.
ಇದನ್ನೂ ಓದಿ: ಬಂದಿದೆ 8 ಆಸನಗಳ ಮಾರುತಿ 800: ಹೀಗೊಂದು ವಿಚಿತ್ರ ಮಾಡಿಫಿಕೇಷನ್!
S-CNG ತಂತ್ರಜ್ಞಾನವು CNG ಮತ್ತು ಪೆಟ್ರೋಲ್ ಮೋಡ್ಗಳ ನಡುವೆ ತಕ್ಷಣವೇ ಬದಲಾಯಿಸುವ ಸ್ವಯಂ ಬದಲಾವಣೆಯ ಅವಕಾಶ ಕಲ್ಪಿಸುತ್ತದೆ. ಇದು ನಿಖರವಾದ ಇಂಧನ ಮಟ್ಟದ ಸೂಚಕ, ಇದು ಗ್ರಾಹಕರಿಗೆ ವಾಹನದ ಇಂಧನ ಮಟ್ಟವನ್ನು ಟ್ರ್ಯಾಕ್ ಮಾಡಲು ಅವಕಾಶ ಕಲ್ಪಿಸುತ್ತದೆ.
ತನ್ನ ಹೊಸ ವಾಹನಗಳ ಬಿಡುಗಡೆ ಸರಣಿಯನ್ನು ಮುಂದುವರಿಸಿರುವ ಮಾರುತಿ ಸುಜುಕಿ, ಇತ್ತೀಚೆಗೆ ಹೊಸ ಪೀಳಿಗೆಯ ಬಲೆನೋ ಫೇಸ್ಲಿಫ್ಟ್ ಅನ್ನು ಬಿಡುಗಡೆಗೊಳಿಸಿದೆ. 2022ರ ಹೊಸ ಪೀಳಿಗೆಯ ಬಲೆನೊ ಫೇಸ್ಲಿಫ್ಟ್ನಲ್ಲಿ ಒಂದೇ ಎಂಜಿನ್ನೊಂದಿಗೆ ಮಾತ್ರ ಬರುತ್ತದೆ. 5-ಸ್ಪೀಡ್ ಮ್ಯಾನುವಲ್ ಮತ್ತು ಎಎಂಟಿ (AMT) ಜೊತೆಗೆ 90ಪಿಎಸ್ (90PS) 1.2-ಲೀಟರ್ ಡ್ಯುಯಲ್ಜೆಟ್ ಪೆಟ್ರೋಲ್ ಎಂಜಿನ್. ಇದು ಆರು ಟ್ರಿಮ್ಗಳಲ್ಲಿ ಲಭ್ಯವಿರುತ್ತದೆ: ಸಿಗ್ಮಾ (Sigma), ಡೆಲ್ಟಾ (Delta), ಝೀಟಾ (Zeta), ಝೀಟಾ (O)(Zeta (0), ಆಲ್ಫಾ (Alpha) ಮತ್ತು ಆಲ್ಫಾ (O) (Alpha (0) ಟ್ರಿಮ್ಗಳು.
ಇದರಡಿಯಲ್ಲಿ ಹೊಸ ಬಲೆನೊ (New Baleno) ಏಕೈಕ 90hp, 113Nm, K12N ಡ್ಯುಯಲ್ಜೆಟ್ ಪೆಟ್ರೋಲ್ ಎಂಜಿನ್ ಹೊಂದಿದೆ. ಇದು ಎಂಜಿನ್ ವೇರಿಯಬಲ್ ವಾಲ್ವ್ ಟೈಮಿಂಗ್ ಮತ್ತು ಇಂಟಿಗ್ರೇಟೆಡ್ ಸ್ಟಾರ್ಟರ್ ಜನರೇಟರ್ (ISG) ನೊಂದಿಗೆ ಬರುತ್ತದೆ. ಇದು ಸ್ವಯಂ ಎಂಜಿನ್ ಸ್ಟಾಪ್/ಸ್ಟಾರ್ಟ್ ಸೌಲಭ್ಯ ಹೊಂದಿರುವುದರಿಂದ ಇಂಧನ ಉಳಿತಾಯ ಮಾಡಲು ನೆರವಾಗುತ್ತದೆ. ಆದರೆ, ಮಾರುತಿಯ SHVS ಸೌಮ್ಯ-ಹೈಬ್ರಿಡ್ ವ್ಯವಸ್ಥೆಯನ್ನು ಹೊಂದಿಲ್ಲ.
ಇದನ್ನೂ ಓದಿ: 2025ರೊಳಗೆ 9ಕ್ಕೂ ಹೆಚ್ಚು ವಾಹನಗಳ ಜಾಗತಿಕ ಬಿಡುಗಡೆಗೆ ಸುಜುಕಿ ಸಿದ್ಧತೆ!
ಹೊಸ ಬಲೆನೊ ಪ್ರೀಮಿಯಂ ಹ್ಯಾಚ್ಬ್ಯಾಕ್ ವಿಭಾಗದಲ್ಲಿ ಹ್ಯುಂಡೈ i20, (Hyundai i20) ಹೋಂಡಾ ಜಾಝ್, ಟಾಟಾ ಆಲ್ಟ್ರೊಜ್, (Tata Altroz) ಫೋಕ್ಸ್ವ್ಯಾಗನ್ ಪೊಲೊ ಮತ್ತು ಶೀಘ್ರದಲ್ಲೇ ನವೀಕರಿಸಲಿರುವ ಟೊಯೊಟಾ ಗ್ಲಾನ್ಜಾ ಮುಂತಾದವುಗಳೊಂದಿಗೆ ತನ್ನ ಪೈಪೋಟಿಯನ್ನು ಮುಂದುವರೆಸಿದೆ.
ಎಂಜಿನ್ ಅನ್ನು 5-ಸ್ಪೀಡ್ ಮ್ಯಾನುವಲ್ ಗೇರ್ಬಾಕ್ಸ್ಗೆ ಪ್ರಮಾಣಿತವಾಗಿ ಜೋಡಿಸಲಾಗಿದೆ, ಆದರೆ ಸ್ವಯಂಚಾಲಿತ ಗೇರ್ಬಾಕ್ಸ್ಗಾಗಿ, 5-ಸ್ಪೀಡ್ AMT ಪರವಾಗಿ CVT ಅನ್ನು ಬದಲಾಗಿದೆ.. ಬಲೆನೊ ಆವೃತ್ತಿ 83hp, 1.2-ಲೀಟರ್ K12M ಪೆಟ್ರೋಲ್ ಎಂಜಿನ್ ಹೊಂದಿದೆ.