ಒಮ್ಮೆ ಚಾರ್ಜ್ ಮಾಡಿದ್ರೆ ಬೆಂಗಳೂರು-ಮೈಸೂರು 2 ಸಾರಿ ಹೋಗಿ ಬರಬಹುದು; ಬೆಸ್ಟ್ ಮೈಲೇಜ್ ಕಾರು ಗ್ರ್ಯಾಂಡ್ ಎಂಟ್ರಿ

Published : Jul 23, 2026, 03:36 PM IST
Kia Syros EV Launched at 1349 Lakh With an Impressive 525 KM Range

ಸಾರಾಂಶ

ಎಲೆಕ್ಟ್ರಿಕ್ ಕಾರು ಖರೀದಿಸಲು ಬಯಸುವವರಿಗೆ ಕಿಯಾ ಇಂಡಿಯಾ ಭರ್ಜರಿ ಗುಡ್‌ನ್ಯೂಸ್ ನೀಡಿದೆ. ಕಂಪನಿಯು ತನ್ನ ಅತ್ಯಂತ ಕೈಗೆಟುಕುವ ಎಲೆಕ್ಟ್ರಿಕ್ ವಾಹನವಾದ Kia Syros EV ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ.

ಎಲೆಕ್ಟ್ರಿಕ್ ಕಾರು ಖರೀದಿಸಲು ಬಯಸುವವರಿಗೆ ಕಿಯಾ ಇಂಡಿಯಾ ಭರ್ಜರಿ ಗುಡ್‌ನ್ಯೂಸ್ ನೀಡಿದೆ. ಕಂಪನಿಯು ತನ್ನ ಅತ್ಯಂತ ಕೈಗೆಟುಕುವ ಎಲೆಕ್ಟ್ರಿಕ್ ವಾಹನವಾದ Kia Syros EV ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಇದರ ಆರಂಭಿಕ ಎಕ್ಸ್-ಶೋರೂಂ ಬೆಲೆ ₹13.49 ಲಕ್ಷ ಆಗಿದೆ.

ಕಿಯಾ ಸೈರೋಸ್ ಇವಿ ಗರಿಷ್ಠ 525 ಕಿ.ಮೀ ವರೆಗೆ ರೇಂಜ್, ಮೊದಲ ಮಾಲೀಕರಿಗೆ 15 ವರ್ಷಗಳ ಅನಿಯಮಿತ ಕಿ.ಮೀ ಹೈ-ವೋಲ್ಟೇಜ್ ಬ್ಯಾಟರಿ ವಾರಂಟಿ, Battery-as-a-Service (BaaS) ಆಯ್ಕೆ ಮತ್ತು ಉದ್ಯಮದಲ್ಲೇ ವಿಶೇಷ ಎನ್ನಲಾದ 80% ಖಚಿತ ಬೈಬ್ಯಾಕ್ ಯೋಜನೆಯೊಂದಿಗೆ ಮಾರುಕಟ್ಟೆಗೆ ಬಂದಿದೆ.

ಕ್ಯಾರೆನ್ಸ್ ಕ್ಲಾವಿಸ್ ಇವಿ ನಂತರ ಕಿಯಾ ಕಂಪನಿಯ ಎರಡನೇ ಮಾಸ್-ಮಾರ್ಕೆಟ್ ಎಲೆಕ್ಟ್ರಿಕ್ ವಾಹನ ಇದಾಗಿದೆ. ಬೆಲೆ, ರೇಂಜ್ ಮತ್ತು ಮಾಲೀಕತ್ವದ ಅನುಕೂಲಗಳ ಮೂಲಕ ಭಾರತೀಯ ಇವಿ ಮಾರುಕಟ್ಟೆಯಲ್ಲಿ ತನ್ನ ಸ್ಥಾನವನ್ನು ಬಲಪಡಿಸಲು ಕಿಯಾ ಮುಂದಾಗಿದೆ.

₹13.49 ಲಕ್ಷದಿಂದ ಆರಂಭ ಬೆಲೆ

Kia Syros EV ಎರಡು ಬ್ಯಾಟರಿ ಆಯ್ಕೆಗಳಲ್ಲಿ ಲಭ್ಯವಿದೆ. 42kWh ಬ್ಯಾಟರಿ: ₹13.49 ಲಕ್ಷದಿಂದ ಆರಂಭ 51.4kWh Extended Range: ₹16.99 ಲಕ್ಷದಿಂದ ಆರಂಭ ಎಲ್ಲಾ ಬೆಲೆಗಳು ಎಕ್ಸ್-ಶೋರೂಂ ಬೆಲೆಗಳಾಗಿವೆ. ಕಾರಿನ ಬುಕಿಂಗ್ ಈಗಾಗಲೇ ಆರಂಭವಾಗಿದ್ದು, ಜುಲೈ 30ರಿಂದ ದೇಶಾದ್ಯಂತ ಕಿಯಾ ಡೀಲರ್‌ಶಿಪ್‌ಗಳಲ್ಲಿ ಮಾರಾಟ ಆರಂಭವಾಗಲಿದೆ.

ಕಂಪನಿ ಈ ಕಾರನ್ನು ಒಟ್ಟು 7 ವೇರಿಯಂಟ್‌ಗಳಲ್ಲಿ ನೀಡಲಿದೆ. ಜೊತೆಗೆ 9 ಬಾಹ್ಯ ಬಣ್ಣಗಳ ಆಯ್ಕೆ ಮತ್ತು 3 ಒಳಾಂಗಣ ಥೀಮ್‌ಗಳು ಲಭ್ಯವಿರಲಿವೆ. ವೇರಿಯಂಟ್‌ವಾರು ಸಂಪೂರ್ಣ ಬೆಲೆ ವಿವರಗಳನ್ನು ಕಂಪನಿ ಪ್ರತ್ಯೇಕವಾಗಿ ಪ್ರಕಟಿಸಲಿದೆ.

80% ಬೈಬ್ಯಾಕ್ ಗ್ಯಾರಂಟಿ!

Kia Syros EVಯ ಪ್ರಮುಖ ಆಕರ್ಷಣೆಗಳಲ್ಲಿ ಖಚಿತ ಬೈಬ್ಯಾಕ್ ಕಾರ್ಯಕ್ರಮವೂ ಒಂದು. ಬಿಡುಗಡೆಯಾದ ಮೊದಲ 60 ದಿನಗಳ ಒಳಗೆ ಕಾರು ಖರೀದಿಸುವ ಗ್ರಾಹಕರಿಗೆ, ಮೂರು ವರ್ಷಗಳ ನಂತರ ಕಾರಿನ ಮರುಮಾರಾಟ ಮೌಲ್ಯದ ಗರಿಷ್ಠ 80%ವರೆಗೆ ಬೈಬ್ಯಾಕ್ ಗ್ಯಾರಂಟಿ ಸಿಗಲಿದೆ. ಗ್ರಾಹಕರು 3 ಅಥವಾ 4 ವರ್ಷಗಳ ಮಾಲೀಕತ್ವ ಯೋಜನೆಗಳಲ್ಲಿ ಒಂದನ್ನು ಆಯ್ಕೆ ಮಾಡಬಹುದು. ಜೊತೆಗೆ ವಾರ್ಷಿಕ ಮೈಲೇಜ್‌ಗೆ ಅನುಗುಣವಾಗಿ ವಿವಿಧ ಆಯ್ಕೆಗಳೂ ಲಭ್ಯವಿರಲಿವೆ. ಮೂರು ಅಥವಾ ನಾಲ್ಕು ವರ್ಷಗಳ ಬಳಿಕ ಕಾರನ್ನು ಉಳಿಸಿಕೊಳ್ಳಬೇಕೇ, ಕಂಪನಿಗೆ ಹಿಂತಿರುಗಿಸಬೇಕೇ ಅಥವಾ ಹೊಸ ವಾಹನಕ್ಕೆ ಬದಲಾಯಿಸಬೇಕೇ ಎಂಬ ಆಯ್ಕೆಯನ್ನು ಗ್ರಾಹಕರು ಮಾಡಬಹುದು.

₹7.99 ಲಕ್ಷಕ್ಕೆ EV ಖರೀದಿ?

ಕಿಯಾ ಸೈರೋಸ್ ಇವಿಯಲ್ಲಿ Battery-as-a-Service (BaaS) ಯೋಜನೆಯನ್ನೂ ಪರಿಚಯಿಸಲಾಗಿದೆ. ಈ ಆಯ್ಕೆಯಡಿ ಗ್ರಾಹಕರು ಬ್ಯಾಟರಿಯನ್ನು ಸಂಪೂರ್ಣವಾಗಿ ಖರೀದಿಸದೇ ಕಾರನ್ನು ಪಡೆಯಬಹುದು. BaaS ಯೋಜನೆಯಡಿ ಕಾರಿನ ಬೆಲೆ ₹7.99 ಲಕ್ಷದಿಂದ ಆರಂಭವಾಗುತ್ತದೆ. ಆದರೆ ಬ್ಯಾಟರಿ ಬಳಕೆಗೆ ಪ್ರತಿ ಕಿ.ಮೀಗೆ ₹3.3 ಶುಲ್ಕ ವಿಧಿಸಲಾಗುತ್ತದೆ. ಇದರ ಜೊತೆಗೆ ಮೊದಲ ಮಾಲೀಕರಿಗೆ ಹೈ-ವೋಲ್ಟೇಜ್ ಬ್ಯಾಟರಿಯ ಮೇಲೆ 15 ವರ್ಷಗಳ ಅನಿಯಮಿತ ಕಿ.ಮೀ ವಾರಂಟಿ ಸಿಗಲಿದೆ. ನಂತರದ ಮಾಲೀಕರಿಗೆ ಬ್ಯಾಟರಿ ವಾರಂಟಿ 8 ವರ್ಷ ಅಥವಾ 1.6 ಲಕ್ಷ ಕಿ.ಮೀ, ಯಾವುದು ಮೊದಲು ಬರುತ್ತದೆಯೋ ಅಲ್ಲಿಯವರೆಗೆ ಇರಲಿದೆ.

ಇದಲ್ಲದೆ, ಗ್ರಾಹಕರು My Convenience e-Plus ಪ್ಯಾಕೇಜ್ ಆಯ್ಕೆ ಮಾಡಬಹುದು. ಇದರಲ್ಲಿ ನಿಗದಿತ ನಿರ್ವಹಣೆ, ವಿಸ್ತೃತ ವಾರಂಟಿ ಮತ್ತು ರಸ್ತೆಬದಿಯ ಸಹಾಯವನ್ನು ಒಂದೇ ಪ್ಯಾಕೇಜ್‌ನಲ್ಲಿ ಪಡೆಯಬಹುದು.

ಒಂದೇ ಚಾರ್ಜ್‌ಗೆ 525 ಕಿ.ಮೀ ರೇಂಜ್!

Kia Syros EVಯ ಅತಿ ದೊಡ್ಡ ಪ್ಲಸ್ ಪಾಯಿಂಟ್ ಅದರ ರೇಂಜ್. ದೊಡ್ಡ 51.4kWh ಬ್ಯಾಟರಿ ಹೊಂದಿರುವ ಮಾದರಿ ARAI-ಪ್ರಮಾಣೀಕೃತ MIDC ಸೈಕಲ್‌ನಲ್ಲಿ 526 ಕಿ.ಮೀ ರೇಂಜ್ ನೀಡುತ್ತದೆ ಎಂದು ಕಂಪನಿ ಹೇಳಿದೆ. ಈ ಮೂಲಕ ತನ್ನ ವಿಭಾಗದಲ್ಲಿ 500 ಕಿ.ಮೀ ಗಡಿ ದಾಟಿದ ಮೊದಲ ವಾಹನ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇನ್ನು 42kWh ಬ್ಯಾಟರಿ ಹೊಂದಿರುವ ವೇರಿಯಂಟ್ 443 ಕಿ.ಮೀ ರೇಂಜ್ ನೀಡಲಿದೆ. 

171bhp ಪವರ್; 8.1 ಸೆಕೆಂಡ್‌ನಲ್ಲಿ 0-100 ಕಿ.ಮೀ ವೇಗ

Kia Syros EVಗೆ 171bhp ಪವರ್ ಉತ್ಪಾದಿಸುವ ಎಲೆಕ್ಟ್ರಿಕ್ ಮೋಟಾರ್ ಅಳವಡಿಸಲಾಗಿದೆ. ಕಿಯಾ ಪ್ರಕಾರ, ಇದು ತನ್ನ ವಿಭಾಗದಲ್ಲೇ ಅತ್ಯಂತ ಶಕ್ತಿಶಾಲಿ ಮಾದರಿಗಳಲ್ಲಿ ಒಂದಾಗಿದೆ. Extended Range ವೇರಿಯಂಟ್ ಕೇವಲ 8.1 ಸೆಕೆಂಡ್‌ಗಳಲ್ಲಿ 0ರಿಂದ 100 ಕಿ.ಮೀ ವೇಗ ತಲುಪುವ ಸಾಮರ್ಥ್ಯ ಹೊಂದಿದೆ. ಈ ಕಾರು 100kW DC ಫಾಸ್ಟ್ ಚಾರ್ಜಿಂಗ್ ಬೆಂಬಲಿಸುತ್ತದೆ. ಇದರ ಮೂಲಕ ಬ್ಯಾಟರಿಯನ್ನು ಕೇವಲ 39 ನಿಮಿಷಗಳಲ್ಲಿ 10%ರಿಂದ 80%ವರೆಗೆ ಚಾರ್ಜ್ ಮಾಡಬಹುದು.

ಇದರ ಜೊತೆಗೆ 10.8kW ಆನ್‌ಬೋರ್ಡ್ AC ಚಾರ್ಜರ್, ಬ್ಯಾಟರಿ ಕಂಡೀಷನಿಂಗ್, ಪ್ಯಾಡಲ್ ಶಿಫ್ಟರ್‌ಗಳೊಂದಿಗೆ ರೀಜನರೇಟಿವ್ ಬ್ರೇಕಿಂಗ್, i-Pedal ಒನ್-ಪೆಡಲ್ ಡ್ರೈವಿಂಗ್, Vehicle-to-Load (V2L), Virtual Engine Sound System (VESS), ಬ್ಯಾಟರಿ ಹೀಟಿಂಗ್ ಮತ್ತು ಕಾಲಮ್-ಮೌಂಟೆಡ್ ಶಿಫ್ಟ್-ಬೈ-ವೈರ್ ಸೆಲೆಕ್ಟರ್‌ಗಳಿವೆ.

ಕಾರಿನ ಬ್ಯಾಟರಿ NMC (Nickel Manganese Cobalt) ಕೆಮಿಸ್ಟ್ರಿ ಬಳಸುತ್ತದೆ. ನೀರು ಮತ್ತು ಧೂಳಿನ ಪ್ರತಿರೋಧಕ್ಕಾಗಿ IP67 ರೇಟಿಂಗ್ ಹೊಂದಿದ್ದು, ಭಾರತೀಯ ಹವಾಮಾನ ಮತ್ತು ರಸ್ತೆ ಪರಿಸ್ಥಿತಿಗಳಿಗೆ ಅನುಗುಣವಾಗಿ ಲಿಕ್ವಿಡ್-ಕೂಲ್ಡ್ ಥರ್ಮಲ್ ಮ್ಯಾನೇಜ್‌ಮೆಂಟ್ ಸಿಸ್ಟಂ ನೀಡಲಾಗಿದೆ.

Kia Syros EVಗೆ ಸಾಮಾನ್ಯ ಸೈರೋಸ್ ಮಾದರಿಗಿಂತ ವಿಭಿನ್ನವಾದ EV-ನಿರ್ದಿಷ್ಟ ವಿನ್ಯಾಸ ನೀಡಲಾಗಿದೆ.

ಇದರಲ್ಲಿ: Ice Cube MFR LED ಹೆಡ್‌ಲ್ಯಾಂಪ್‌ಗಳು,  Star Map LED DRLs , Kia Digital Tiger Face, LED ಫಾಗ್ ಲ್ಯಾಂಪ್‌ಗಳು, ಕ್ಲೋಸ್‌ಡ್ EV ಗ್ರಿಲ್, Flush Auto Door Handles, Star Map LED ಟೈಲ್ ಲ್ಯಾಂಪ್‌ಗಳು, 17-ಇಂಚಿನ Crystal Cut Dual-Tone Aero Alloy Wheels, Gloss Black Skid Plates, Roof Rails ಮುಂತಾದ ವಿನ್ಯಾಸ ವೈಶಿಷ್ಟ್ಯಗಳಿವೆ.

PREV
Read more Articles on
click me!

Recommended Stories

ಭಾರತದ ರಸ್ತೆ ಆಳಲು ಬರ್ತಿದೆ ಹೊಸ 'ಮಹೀಂದ್ರಾ ಸ್ಕಾರ್ಪಿಯೋ ಎನ್ ಫೇಸ್‌ಲಿಫ್ಟ್': ಫೀಚರ್ಸ್, ಲಾಂಚ್ ಡೇಟ್ ಇಲ್ಲಿದೆ!
ಬಡವರ ಕೈ ಹಿಡಿಯೋ ಭಾರತದ ಟಾಪ್ 7 ಅಗ್ಗದ CNG ಕಾರುಗಳು: ಭರ್ಜರಿ ಬೂಟ್ ಸ್ಪೇಸ್, ಸೂಪರ್ ಮೈಲೇಜ್!