Kia ಮಾರಾಟ ಶೇ.69ರಷ್ಟು ಏರಿಕೆ: ಜೂ.2ಕ್ಕೆ ಕಿಯಾ ಇವಿ6 ಬಿಡುಗಡೆ

By Suvarna NewsFirst Published Jun 2, 2022, 9:54 AM IST
Highlights

ಕಿಯಾ ಇಂಡಿಯಾದ (Kia India) ವರ್ಷದಿಂದ ವರ್ಷದ ಮಾರಾಟ ಶೇ.69ರಷ್ಟು ಏರಿಕೆಯಾಗಿದೆ. ಮೇ ತಿಂಗಳಲ್ಲಿ 18,718 ವಾಹನಗಳನ್ನು ಕಿಯಾ ಮಾರಾಟ ಮಾಡಿದೆ.

ಕಿಯಾ ಇಂಡಿಯಾದ (Kia India) ವರ್ಷದಿಂದ ವರ್ಷದ ಮಾರಾಟ ಶೇ.69ರಷ್ಟು ಏರಿಕೆಯಾಗಿದೆ. ಮೇ ತಿಂಗಳಲ್ಲಿ 18,718 ವಾಹನಗಳನ್ನು ಕಿಯಾ ಮಾರಾಟ ಮಾಡಿದೆ.
ಕೋವಿಡ್-19 (COVID-19) ಎರಡನೇ ಅಲೆಯ ನಡುವೆಯೂ 2021ರ ಮೇ ತಿಂಗಳಲ್ಲಿ ಕಿಯಾ 11,050 ವಾಹನಗಳನ್ನು ವಿತರಕರಿಗೆ ರವಾನಿಸಿತ್ತು. ಕಿಯಾ ಕಂಪನಿಯ ಜನಪ್ರಿಯ ಎಸ್‌ಯುವಿ (SUV) ಸೋನೆಟ್ (Sonet)  ಕಂಪನಿಯ ಒಟ್ಟಾರೆ ಮಾರಾಟಕ್ಕೆ ಅತಿ ಹೆಚ್ಚು ಕೊಡುಗೆ ನೀಡಿದೆ. ಮೇ ತಿಂಗಳಲ್ಲಿ 7,899 ವಾಹನಗಳನ್ನು ಕಂಪನಿ ಮಾರಾಟ ಮಾಡಿದೆ. ನಂತರ ಸೆಲ್ಟೋಸ್ (Seltos) 5,953 ವಾಹನಗಳ ಮಾರಾಟದೊಂದಿಗೆ ಕಿಯಾ  ವಾಹನಗಳಲ್ಲೇ ಎರಡನೇ ಸ್ಥಾನದಲ್ಲಿದೆ. ಜೊತೆಗೆ, ಕಿಯಾ ಕ್ಯಾರೆನ್ಸ್ (Kia Carnes) 4,612 ವಾಹನಗಳು ಮತ್ತು ಕಿಯಾ ಕಾರ್ನಿವಲ್ (Kia Carnival) 239 ವಾಹನಗಳನ್ನು ಮಾರಾಟ ಮಾಡಿದೆ ಎಂದು ಕಿಯಾ ಇಂಡಿಯಾ ಹೇಳಿಕೆಯಲ್ಲಿ ತಿಳಿಸಿದೆ.

ಇತ್ತೀಚೆಗಷ್ಟೇ ಕಿಯಾ ಇಂಡಿಯಾ ತನ್ನ ಮೊದಲ ಇವಿ6 ವಾಹನಗಳ ವಿವರಗಳನ್ನು ಬಿಡುಗಡೆಗೊಳಿಸಿದೆ. ಕಾರಿನ ಬುಕಿಂಗ್ ಈಗಷ್ಟೇ ಆರಂಭವಾಗಿದೆ. ಕಂಪನಿಯು ಕಳೆದ ತಿಂಗಳು 15 EV6 ಯುನಿಟ್ಗಳನ್ನು ಡಿಸ್ಪ್ಲೇ ಕಾರ್ಗಳಾಗಿ ಡೀಲರ್‌ಶಿಪ್ ರವಾನಿಸಿದೆ  ಎಂದು ಕಂಪನಿ ಮಾಹಿತಿ ನೀಡಿದೆ. ವಿಶ್ವಾದ್ಯಂತ ಆಟೊಮೊಬೈಲ್‌ ವಲಯವನ್ನು ಕಾಡುತ್ತಿರುವ ಸೆಮಿಕಂಡಕ್ಟರ್ (Semi Conductor) ಕೊರತೆಯ ಸಮಸ್ಯೆ ಈಗ ಕ್ರಮೇಣ ಚೇತರಿಕೆ ಕಾಣುತ್ತಿದೆ. ಇದರ ಪರಿಣಾಮವಾಗಿ 2022 ರ ಮೊದಲ ಐದು ತಿಂಗಳಲ್ಲಿ ಎಸ್‌ಯುವಿಗಳ ಮಾರಾಟವು 97,796 ವಾಹನಗಳಷ್ಟಿದೆ ಎಂದು ಕಂಪನಿ ಹೇಳಿದೆ.

ಕಿಯಾ ಇವಿ6 ಬೆಲೆ, ಫೀಚರ್ಸ್ ಇಲ್ಲಿವೆ

2022ರ ಮೇ  ತಿಂಗಳ ಉತ್ತಮ ಮಾರಾಟದ ಕಾರ್ಯಕ್ಷಮತೆಯೊಂದಿಗೆ ಕಂಪನಿ, 4.5 ಲಕ್ಷ ವಾಹನಗಳ ದೇಶೀಯ ಮಾರಾಟದ ಮೈಲಿಗಲ್ಲನ್ನು ಮೀರಿದೆ. ಕಿಯಾ ಕಂಪನಿಗಳ ಕಾರುಗಳಲ್ಲಿ ಕಿಯಾ ಸೋನೆಟ್‌ ಅತಿ ಹೆಚ್ಚು ಬೇಡಿಕೆ ಪಡೆದುಕೊಂಡಿದ್ದು, ಸೋನೆಟ್ ಪ್ರಾರಂಭವಾದಾಗಿನಿಂದ 1.5 ಲಕ್ಷ ಮಾರಾಟದ ಗುರಿಯನ್ನು ಸಾಧಿಸಿದೆ ಎಂದು ಕಂಪನಿ  ಪ್ರಕಟಣೆಯಲ್ಲಿ ತಿಳಿಸಿದೆ.
ಈ ಕುರಿತು ಮಾತನಾಡಿರುವ ಕಿಯಾ ಇಂಡಿಯಾದ ಉಪಾಧ್ಯಕ್ಷ (Kia India VP) ಮತ್ತು ಮಾರಾಟ ಮತ್ತು ಮಾರುಕಟ್ಟೆ ವಿಭಾಗದ ಮುಖ್ಯಸ್ಥ ಹರ್ದೀಪ್ ಸಿಂಗ್ ಬ್ರಾರ್, ಮತ್ತೊಂದು ತಿಂಗಳ ಅತ್ಯುತ್ತಮ ಮಾರಾಟದ ಕಾರ್ಯಕ್ಷಮತೆ ಸಂತಸ ತಂದಿದೆ ಎಂದಿದ್ದಾರೆ.

ಸುಸ್ಥಿರ ಚಲನಶೀಲತೆ ಪರಿಹಾರಗಳನ್ನು ಒದಗಿಸುವ ತನ್ನ ಬದ್ಧತೆಯ ಭಾಗವಾಗಿ, ಕಿಯಾ ಇಂಡಿಯಾ (Kia India)ತನ್ನ ಸಂಪೂರ್ಣ ಎಲೆಕ್ಟ್ರಿಕ್ ಮಾಡೆಲ್ -- EV6 ಅನ್ನು ಜೂನ್ 2 ರಂದು ದೇಶದಲ್ಲಿ ಬಿಡುಗಡೆ ಮಾಡುವುದಾಗಿ ಹೇಳಿದೆ.

ವಾಹನ ತಯಾರಕ ಕಂಪನಿ 2022ರ ಮೇ 26 ರಂದು ಭಾರತದಾದ್ಯಂತ ಆಯ್ದ ಡೀಲರ್ಶಿಪ್ಗಳ ಮೂಲಕ EV6 ಗಾಗಿ ಬುಕಿಂಗ್ ಅನ್ನು ಪ್ರಾರಂಭಿಸಿದೆ. ಗ್ರಾಹಕರು 3 ಲಕ್ಷ ರೂಪಾಯಿಗಳ ಟೋಕನ್ ಮೊತ್ತಕ್ಕೆ EV6 ಕ್ರಾಸ್‌ಒವರ್ ಅನ್ನು ಬುಕ್‌ ಮಾಡಬಹುದು. EV6 ಕಿಯಾದ ಆಮೂಲಾಗ್ರ ಶೈಲಿಯ ಕ್ರಾಸ್ಒವರ್ ಆಗಿದೆ, ಇದು ಹುಂಡೈ ಗುಂಪಿನ E-GMP ಎಲೆಕ್ಟ್ರಿಕ್ ಆರ್ಕಿಟೆಕ್ಚರ್ ಅನ್ನು ಆಧರಿಸಿದೆ.
ಇದು ಉತ್ತಮವಾದ ಕ್ಯಾಬಿನ್‌ ಹೊಂದಿದ್ದು, 12.3-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸ್ಕ್ರೀನ್ಗಳಿವೆ. ಫ್ಲೋಟಿಂಗ್ ಸೆಂಟರ್ ಕನ್ಸೋಲ್ ಸಾಕಷ್ಟು ಪ್ರಾಯೋಗಿಕ ಶೇಖರಣಾ ಸ್ಥಳ ನೀಡುತ್ತದೆ. ಎಚ್‌ವಿಎಸಿ (HVAC) ಮತ್ತು ಮೀಡಿಯಾ ವಾಲ್ಯೂಮ್ಗಳು ಇದರ ಪ್ರಮುಖ ಆಕರ್ಷಣೆಯಾಗಿದೆ. 64-ಬಣ್ಣದ ಆಂಬಿಯೆಂಟ್ ಲೈಟಿಂಗ್, ಟೆಕ್ಸ್ಚರ್ಡ್ ಡ್ಯಾಶ್‌ಬೋರ್ಡ್ ವಿನ್ಯಾಸ ಮತ್ತು ಅದ್ಭುತವಾಗಿ ನಿರ್ಮಿಸಲಾದ ಡ್ರೈವ್ ಸೆಲೆಕ್ಟರ್ ಡಯಲ್‌ನಂತಹ ಅಂಶಗಳನ್ನು ಇದು ಹೊಂದಿದೆ. ಎಲೆಕ್ಟ್ರಿಕ್‌ ವಾಹನಗಳ ವಲಯದಲ್ಲಿ ಈ ಎಸ್‌ಯುವಿ ಸಾಕಷ್ಟು ನಿರೀಕ್ಷೆಗಳನ್ನು ಮೂಡಿಸಿದೆ.

ಸೋನೆಟ್‌ಗೆ ಹೆಚ್ಚಾಗಿದೆ  ಎಲ್ಲಿಲ್ಲದ ಬೇಡಿಕೆ

click me!