ಮುಂಬೈ(ಮೇ.22): ಜಾಗ್ವಾರ್ ಲ್ಯಾಂಡ್ ರೋವರ್ ಇಂಡಿಯಾ ಹೊಸ ರೇಂಜ್ ರೋವರ್ ಸ್ಪೋರ್ಟ್ಸ್ ಬುಕಿಂಗ್ಸ್ ಆರಂಭಿಸಿದೆ. ನೂತನ ಕಾರಿನ ಬೆಲೆ 164.29 ಲಕ್ಷ ರೂಪಾಯಿ ಹೊಸ ರೇಂಜ್ ರೋವರ್ ಸ್ಪೋರ್ಟ್, ಆರು-ಸಿಲಿಂಡರ್ 48V ಲೈಟ್ ಹೈಬ್ರಿಡ್ ಇಂಜೀನಿಯಮ್ ಡೀಸಲ್ ಇಂಜಿನ್‌ನಲ್ಲಿ ಲಭ್ಯವಿದ್ದು, 221hP ಪವರ್ 650 Nm ಟಾರ್ಕ್ ಒದಗಿಸುತ್ತದೆ. ಇದು, ಡೈನಮಿಕ್ SI, ಡೈನಮಿಕ್ HSI, ಮತ್ತು ಆಟೋಬಯೋಗ್ರಫಿ ನಿರ್ದೇಶನಗಳಲ್ಲಿ ಲಭ್ಯವಿದ್ದು, ವಿಶೇಷವಾಗಿ ಅಳವಡಿಸಲಾದ ವಿನಿರ್ದೇಶನಗಳೊಂದಿಗೆ ಉತ್ಪಾದನೆಯ ಮೊದಲನೆಯ ವರ್ಷದುದ್ದಕ್ಕೂ ಮೊದಲ ಎಡಿಶನ್ ಲಭ್ಯವಿರುತ್ತದೆ.
ವಿನ್ಯಾಸ
ಆಧುನಿಕವಾದ ಹೊರಾಂಗಣಗಳು ನಿಖರವಾಗಿ ರೇಂಜ್ ರೋವರ್ ಸ್ಪೋರ್ಟ್ನದ್ದಾಗಿದ್ದು, ಸುಂದರ ಹೊರಾಂಗಣಗಳು ಅದರ ವಿಶಿಷ್ಟ ಗುಣ, ಚಿಕ್ಕದಾದ ಓವರ್‌ಹ್ಯಾಂಗ್ಸ್, ದೃಢವಾದ ಫ್ರಂಟ್-ಎಂಡ್ ಮತ್ತು ಮುಂಬದಿ ಹಾಗೂ ಹಿಂಬದಿಗಳಲ್ಲಿ ಆಳವಾಗಿ ಕಾಣಿಸುವ ಹೊಳಪನ್ನು ಎತ್ತಿತೋರಿಸುತ್ತವೆ. ಈ ವಿಶಿಷ್ಟ ಅಂಶಗಳು, ಶಕ್ತಿ ಮತ್ತು ಕಾರ್ಯಕ್ಷಮತೆಯನ್ನು ಎತ್ತಿತೋರಿಸುವ ಪ್ರಬಲವಾದ ಮತ್ತು ಪ್ರಭಾವಶಾಲಿಯಾದ ರಸ್ತೆ ಇರುವಿಕೆಯನ್ನು ಒದಗಿಸುತ್ತವೆ.
ನಾಲೆ ನೀರಿನಲ್ಲಿ ಯಶಸ್ವಿಯಾಗಿ ಮುನ್ನುಗ್ಗಿದ ರೇಂಜ್ ರೋವರ್ ಸ್ಪೋರ್ಟ್ಸ್ SUV!
ಮುಂಬದಿ ಗ್ರಿಲ್, ಹಾಗೂ ಡಿಜಿಟಲ್ ಎಲ್‌ಇಡಿ ಲೈಟಿಂಗ್ ಯೂನಿಟ್ಸ್ನಂತಹ ಅದ್ವಿತೀಯ ಫಿನಿಶ್‌ನ ವಿವರ ಹೊಂದಿದ್ದು, ಇವು ವಿಶಿಷ್ಟವಾಗಿ ಡೇಟೈಮ್ ರನ್ನಿಂಗ್ ಲೈಟ್(ಡಿಆರ್‌ಎಲ್) ವೈಶಿಷ್ಟ÷್ಯವನ್ನು ಒದಗಿಸುತ್ತದೆ.
ಹೊಸ ಡೈನಮಿಕ್ ಮಾಡಲ್, ವಿಶಿಷ್ಟವಾದ ಹೊರಾಂಗಣ ವಿನ್ಯಾಸ ಅಂಶಗಳೊAದಿಗೆ ಕಾರ್ಯಕ್ಷಮತೆಯುಳ್ಳ ಎಸ್‌ಯುವಿದ ಉದ್ದೇಶಪೂರಿತ ಗುಣಕ್ಕೆ ಇನ್ನೂ ಚುರುಕಾದ ಗಮನಕೇಂದ್ರೀಕರಣ ಒದಗಿಸುತ್ತದೆ. ಬಾನೆಟ್ ಲೂವರ್ಸ್ ಮತ್ತು ಪಕ್ಕದ ಇನ್‌ಗಾಟ್‌ಗಳಿಗಾಗಿ ಸ್ಯಾಟಿನ್ ಗ್ರೇ ಅಲಾಯ್ ವ್ಹೀಲ್‌ಗಳು ಸ್ಯಾಟಿನ್ ಬರ್ನಿಶ್ಡ್ ಕಾಪರ್ ಫಿನಿಶ್ ಜೊತೆಗೆ ಹೊಂದಿಸಲಾಗಿದ್ದರೆ ಮುಂಬದಿಯ ಗ್ರಿಲ್ ಮತ್ತು ರೇಂಜ್‌ರೋವರ್ ಅಕ್ಷರಗಳನ್ನು ಮ್ಯಾಟ್ಟ್ ಗ್ರಾಫೈಟ್ ಅಟ್ಲಸ್‌ನಲ್ಲಿ ಫಿನಿಶ್ ಮಾಡಲಾಗಿದೆ.
ವಿನೂತನವಾದ ಮತ್ತು ದೀರ್ಘಕಾಲ ಬಾಳುವ ವಸ್ತುಗಳ ಆಯ್ಕೆಗಳು ಟ್ಯಾಕ್ಟೆöÊಲ್ ಮತ್ತು ಹಗುರವಾದ ಅಲ್ಟ್ರಾಫ್ಯಾಬ್ರಿಕ್ ಪ್ರೀಮಿಯಮ್ ಒಳಗೊಂಡಿದ್ದು, ಆಕರ್ಷಕವಾದ ಡ್ಯುಯಲ್ ಟೋನ್ ಕಲರ್‌ವೇಸ್‌ನಲ್ಲಿ ಮಾಡಲಾಗಿದೆ. ಡ್ಯಾಶ್‌ಬೋರ್ಡ್ ಮತ್ತು ಡೋರ್ ಡೀಟೇಲಿಂಗ್‌ವರೆಗೆ ವಿಸ್ತರಣೆಯಾಗುವ ವಿಶಿಷ್ಟ ಆಯ್ಕೆಗಳೂ ಕೂಡ ಲಭ್ಯವಿವೆ. ಇದಕ್ಕೆ ಪರ್ಯಾಯವಾಗಿ ಐಶಾರಾಮೀ ವಿಂಡ್ಸರ್ ಅಥವಾ ಮೃದುವಾದ ಸೆಮಿ-ಅನಿಲೈನ್ ಲೆದರ್ ಆಯ್ಕೆಗಳೂ ಇವೆ.
ಪ್ರತಿಯೊಂದು ಹೊಸ ರೇಂಜ್ ರೋವರ್ ಸ್ಪೋರ್ಟ್ಗೆ ಡೈನಮಿಕ್ ಏರ್ ಸಸ್ಪೆನ್ಶನ್ ಅಳವಡಿಸಲಾಗಿದ್ದು ಚುರುಕಾದ ಸಿಸ್ಟಮ್ ಸಸ್ಪೆನ್ಶನ್‌ನ ಬ್ಯಾಂಡ್‌ವಿಡ್ತ್ಅನ್ನು ವರ್ಧಿಸುತ್ತದೆ. ರೇಂಜ್ ರೋವರ್ ಸ್ಪೋರ್ಟ್ನಿಂದ ನಿರೀಕ್ಷಿಸಲಾದ ಸಕ್ರಿಯ ಹ್ಯಾಂಡ್ಲಿಂಗ್ ಜೊತೆಗೆ, ಸಾಂಪ್ರದಾಯಿಕವಾದ ರೇಂಜ್ ರೋವರ್ ಆರಾಮವನ್ನು ಒದಗಿಸುವುದಕ್ಕಾಗಿ, ಚೇಂಬರ್‌ಗಳ ಒಳಗಿನ ಒತ್ತಡವನ್ನು ವ್ಯತ್ಯಯ ಮಾಡುವ ಮೂಲಕ(ಅಧಿಕ ಒತ್ತಡವು ಕಠಿಣವಾದ ಡ್ಯಾಂಪಿಂಗ್ ಒದಗಿಸುತ್ತದೆ) ಇದು ಕಾರ್ಯನಿರ್ವಹಿಸುತ್ತದೆ.
ಹೊಚ್ಚ ಹೊಸ ರೇಂಜ್ ರೋವರ್ SV ಕಾರಿನ ಬುಕಿಂಗ್ ಆರಂಭಿಸಿದ ಲ್ಯಾಂಡ್ ರೋವರ್!
ಅಡಾಪ್ಟಿವ್ ಡೈನಮಿಕ್ಸ್ 2 ತಂತ್ರಜ್ಞಾನವು, ಅನಗತ್ಯವಾದ ಭೌತಿಕ ಚಲನೆಯನ್ನು ಕಡಿಮೆ ಮಾಡುವುದಕ್ಕಾಗಿ ಆ್ಯಕ್ಟಿವ್ ಟ್ವಿನ್ ವಾಲ್ವ್ ಡ್ಯಾಂಪರ್‌ಗಳನ್ನು ನಿರಂತರವಾಗಿ ನಿಯಂತ್ರಿಸುವ ಮೂಲಕ ಡೈನಮಿಕ್ ಸಾಮರ್ಥ್ಯಕ್ಕೆ ಕೊಡುಗೆ ಸಲ್ಲಿಸುತ್ತದೆ. ನಿಖರವಾದ ಪ್ರತಿಕ್ರಿಯೆ ಒದಗಿಸಲು ಪ್ರತಿ ಸೆಕೆಂಡ್‌ಗೆ 500 ಪಟ್ಟುವರೆಗೆ ಬಾಹ್ಯ ಅಂಶಗಳ ಮೇಲುಸ್ತುವಾರಿ ಮಾಡುವ ಅದು ಇತರ ಛಾಸಿಸ್ ತಂತ್ರಜ್ಞಾನಗಳ ಸಂಯೋಗದೊಂದಿಗೆ ಯಾವುದೇ ರೇಂಜ್ ರೋವರ್ ಸ್ಪೋರ್ಟ್ನ ಅತ್ಯಂತ ನಿಖರವಾದ ಮತ್ತು ಆರಾಮವಾದ ಚಾಲನಾ ಡೈನಮಿಕ್ಸ್ ಒದಗಿಸುತ್ತದೆ.
ಲ್ಯಾಂಡ್ ರೋವರ್‌ನ ಇತ್ತೀಚಿನ ಟೆರೇನ್ ರೆಸ್ಪಾನ್ಸ್2 ಸಿಸ್ಟಮ್, ಆಫ್-ರೋಡ್ ಕಾರ್ಯಕ್ಷಮತೆಯನ್ನು ವರ್ಧಿಸಿ, ಟೆರೇನ್‌ಗೆ ಅತ್ಯಂತ ಸೂಕ್ತವಾದ ಸೆಟ್ಟಿಂಗ್‌ಗಳನ್ನು ಅತಿಬುದ್ಧಿವಂತಿಕೆಯಿAದ ಅಳವಡಿಸುತ್ತದೆ. ಹೊಸ ಅಡಾಪ್ಟಿವ್ ಆಫ್-ರೋಡ್ ಕ್ರೂಸ್ ಕಂಟ್ರೋಲ್ ಹೊಸ ರೇಂಜ್ ರೋವರ್ ಸ್ಪೋರ್ಟ್ನಲ್ಲಿ ಮೊಟ್ಟಮೊದಲ ಬಾರಿಗೆ ಕಾಣಿಸಿಕೊಳ್ಳುತ್ತಿದ್ದು ನೆಲದ ಪರಿಸ್ಥಿತಿಗಳಿಗೆ ತಕ್ಕಂತೆ ನಿಧಾನ ಚಲನೆಯನ್ನು ಕಾದಿರಿಸುವ ಮೂಲಕ ಗೊಂದಲಮಯ ಟೆರೇನ್‌ಗಳಲ್ಲಿ ಚಾಲಕರು ವಾಹನ ಚಲಾಯಿಸುವುದಕ್ಕೆ ನೆರವಾಗುತ್ತದೆ.
ಸ್ಪೋರ್ಟಿಂಗ್ ಐಶಾರಾಮದ ಉತ್ತುಂಗ
ಮಸಾಜ್ ಕಾರ್ಯ ಮತ್ತು ರೆಕ್ಕೆಗಳಿರುವ ಹೆಡ್‌ರೆಸ್ಟ್ ಇರುವ ೨೨-ಮಾರ್ಗಗಳ ಸರಿಪಡಿಸಬಹುದಾದ ಶಾಖೋತ್ಪನ್ನವಾದ, ಗಾಳಿಯಾಡುವ ಎಲೆಕ್ಟಿçಕ್ ಮೆಮೊರಿಯ ಮುಂಬದಿ ಆಸನಗಳು ತೊಡಗಿಕೊಳ್ಳುವಂತಹ ಮತ್ತು ಆಧಾರ ನೀಡುವ ಪಯಣಕ್ಕಾಗಿ ನಿಖರವಾದ ಅಡಿಪಾಯ ಹಾಕಿಕೊಡುತ್ತವೆ. ಪ್ರಧಾನವಾದ ಸೀಟುಗಳು ದೀರ್ಘಪ್ರಯಾಣಗಳಿಗೆ ಮತ್ತು ತಿರುವುಗಳಿರುವ ರಸ್ತೆಗಳನ್ನು ಒಳಗೊಂಡ ಚಾಲನೆಯಲ್ಲಿ ಅಂತಿಮ ಆಧಾರ ಒದಗಿಸಿದರೆ, ಹೆಚ್ಚಿನ ಆರಾಮ ಮತ್ತು ಆಧಾರಕ್ಕಾಗಿ ೩೧ಮಿ.ಮೀ ಹೆಚ್ಚಿನ ಲೆಗ್‌ರೂಮ್ ಮತ್ತು ೨೦ ಮಿ.ಮೀ ಅಧಿಕ ಮಂಡಿ ಕ್ಲಿಯರೆನ್ಸ್ ಇರುವ, ಪಾರಿಸರಿಕವಾಗಿ ಗರಿಷ್ಟ ಸೀಟ್ ಜ್ಯಾಮಿತಿಯಿಂದ ಹಿಂಬದಿ ಪ್ರಯಾಣಿಕರಿಗೆ ಪ್ರಯೋಜನಗಳು ಹೆಚ್ಚಾಗಿವೆ.